Advertisement
MIRROR FOCUS

ಶಿವಂ… ಶಿವೋಹಂ… ನಿರಾಭರಣ ಶಿವನಿಗೆ ಇಂದು ಬಿಲ್ವಪತ್ರೆ ತನ್ನಿರೋ…..

Share

ಶಿವಂ ಶಿವೋಹಂ… ಶಿವಮಯವಾದ ಈ ದಿನ ಶಿವರಾತ್ರಿ. ಶಿವನಿಗೆ  ಪ್ರಿಯವಾದ ದಿನ ಶಿವರಾತ್ರಿ.

ಮಾಘ ಮಾಸದ ಶುಕ್ಲ ಪಕ್ಷದ ಚತುರ್ದಶಿಯ ದಿನವೇ ಮಹಾಶಿವರಾತ್ರಿ.  14 ಇಂದ್ರಿಯಗಳನ್ನು ಜಯಿಸಿದವನು ಶಿವ.  14 ಲೋಕಗಳಿಗೆ ಒಡೆಯನಾಗಿರುವ ಪರಮೇಶ್ವರನಿಗೆ ಚತುರ್ದಶಿ ಯಂದು ಪೂಜಿಸುವುದು ಬಹು ವಿಶೇಷವಾಗಿರುತ್ತದೆ.  ಶಿವರಾತ್ರಿ ಯಂದು   ಶಿವಪಾರ್ವತಿಯರು ಜತೆಗೂಡಿ  ಪ್ರಪಂಚ ಪರ್ಯಟನೆ ಮಾಡುತ್ತಾರೆ. ತನ್ನನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ  ಶಿವ ಅವರಿಗೊಲಿಯುತ್ತಾನೆ, ಇಷ್ಟಗಳನ್ನು ಈಡೇರಿಸುತ್ತಾನೆ, ತಪ್ಪುಗಳನ್ನು ಮನ್ನಿಸುತ್ತಾನೆ , ಪಾಪಗಳಿಂದ ಮುಕ್ತನಾಗಿಸುತ್ತಾನೆ, ಎಂಬುದು ಭಕ್ತರ  ನಂಬುಗೆ. ನಿರಾಭರಣನಾದ ಶಿವನಿಗೆ ಬಿಲ್ವಪತ್ರೆ, ಎಕ್ಕದ ಹೂಗಳೆಂದರೆ ಬಲು ಪ್ರಿಯ.
ಸಾಮಾನ್ಯವಾಗಿ ಹಬ್ಬಗಳೆಂದರೆ  ನೆನಪಾಗುವುದು ಭಕ್ಷ್ಯ ಭೋಜನಗಳು. ಆದರೆ ಶಿವರಾತ್ರಿ ಇದಕ್ಕೆ ಅಪವಾದ.  ಈ ದಿನ ಉಪವಾಸಕ್ಕೇ ಪ್ರಾಮುಖ್ಯತೆ.  ನಮ್ಮಲ್ಲಿ ಶಿವರಾತ್ರಿಯ ದಿನ ರಾತ್ರಿ ನೈವೇದ್ಯಕ್ಕಾಗಿ  ಬಾಳೆಕಾಯಿ ದೋಸೆ ಅದೂ ಉಪ್ಪು ಹಾಕದೆ ಮಾಡಲಾಗುತ್ತದೆ. ಜೊತೆಗೆ ಬಾಳೆಹಣ್ಣು  ರಸಾಯನ.  ನಮ್ಮನೆಯಲ್ಲಿ  ಬೆಳೆದ  ಕದಳಿ ಬಾಳೆಕಾಯಿಯ ದೋಸೆ  ಮಾಡುತ್ತೇವೆ.  ಬಾಳೆಕಾಯಿಯ ಸಿಪ್ಪೆ ತೆಗೆದು ನುಣ್ಣಗೆ ಬೀಸಬೇಕು.  ದೋಸೆ ಕಾವಲಿಯಲ್ಲಿ ಬರಿ ಕೈಯಿಂದ ಬೀಸಿದ ಬಾಳೆಕಾಯಿ ಹಿಟ್ಟಿನ ತೆಳ್ಳನೆಯ  ದೋಸೆ ಮಾಡಲಾಗುತ್ತದೆ.  ಅದರೊಂದಿಗೆ ಬಾಳೆಹಣ್ಣು ರಸಾಯನ . ಕೆಲವೆಡೆ ಬೇಯಿಸಿದ ಬಾಳೆಕಾಯಿಯ ಸೇಮಿಗೆಯೂ  ಮಾಡುವ ಪರಿಪಾಠವಿದೆ.
ಅನನ್ಯ ಭಟ್‌ ಹಾಡಿರುವ  ಹಾಡು….
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

13 hours ago

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

19 hours ago

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…

19 hours ago

ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ

2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…

19 hours ago

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

1 day ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

2 days ago