ಹಬ್ಬಗಳು ಟಾನಿಕ್ ನಂತೆ.! ಒಪ್ಪುತ್ತೀರಲ್ವಾ?
ದಿನನಿತ್ಯದ ಜಂಜಡಗಳಿಂದ ಒಂದು ಪುಟ್ಟ ಬದಲಾವಣೆ ಈ ಹಬ್ಬಗಳು. ಪೂಜೆಯ ನೆಪದಲ್ಲಿ ಒಂದಷ್ಟು ಸಿಹಿ. ಸಂಪ್ರದಾಯದ ಹೆಸರಲ್ಲಿ ಎಣ್ಣೆ ಸ್ನಾನ ದೇಹಕ್ಕೂ ಉಲ್ಲಾಸ ಮನಸಿಗೂ ಖುಷಿ. ಸದ್ಯ ಯಾವ ಹಬ್ಬಗಳೂ ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ದೇಶ ,ಭಾಷೆ , ಪ್ರಾಂತ್ಯ ಮೀರಿ ಆಚರಿಸಲ್ಪಡುತ್ತವೆ. ಇಂದು ಸಂಭ್ರಮಕ್ಕೊಂದು ಕಾರಣ ಹಬ್ಬಗಳು. ಸಂಕ್ರಾಂತಿಯ ವಿಶೇಷ ಎಳ್ಳು, ಬೆಲ್ಲ . ಆರೋಗ್ಯದ ದೃಷ್ಟಿಯಿಂದ ಎಳ್ಳು , ಬೆಲ್ಲ ಬಹಳಷ್ಟು ಒಳ್ಳೆಯದು. ಹಾಗಾಗಿ ಸಂಕ್ರಾಂತಿಯೊಂದು ಕಾರಣ.
ಇನ್ನು ಹೊಸ ಕ್ಯಾಲೆಂಡರ್ ವರ್ಷದ ಮೊದಲ ಸಂಭ್ರಮ .
ಈ ಸಂಕ್ರಾಂತಿ ರೈತರ ಹಬ್ಬವೆಂದೇ ಪ್ರತೀತಿ. ಬೇಸಾಯ ಮುಗಿದು ಬೆಳೆ ಕೈ ಸೇರಿದ ಸಮಯದಲ್ಲಿಯೇ ಸಂಕ್ರಾಂತಿ ಬರುವುದರಿಂದ ಭೂಮಿ ತಾಯಿಗೆ ಕೃತಜ್ಞತೆ ಹೇಳುವ ಸಂಧರ್ಭವೂ ಇದಾಗಿದೆ. ಕೃಷಿ ಕೈಂಕರ್ಯದಲ್ಲಿ ಜೊತೆಯಾದ ಜಾನುವಾರುಗಳನ್ನು ಸ್ನಾನ ಮಾಡಿಸಿ , ಸಿಂಗರಿಸಿ ಪೂಜಿಸುವ ಸಂಪ್ರದಾಯವಿದೆ.
ದೇಶದೆಲ್ಲೆಡೆ ಬೇರೆ ಬೇರೆ ರೀತಿಯಲ್ಲಿ, ವಿವಿಧ ಹೆಸರುಗಳಿಂದ ಆಚರಿಸ್ಪಡುತ್ತವೆ. ಬೇರೆ ಬೇರೆ ಪ್ರದೇಶಗಳಲ್ಲಿ ಹಲವು ರೀತಿಯಲ್ಲಿ ಆಚರಿಸಲ್ಪಡುತ್ತವೆ. ಆಯಾ ಪ್ರಾದೇಶಿಕ ಸಂಪ್ರದಾಯಕ್ಕೆ ಹೆಚ್ಚು ಒತ್ತು ಈ ಹಬ್ಬದಲ್ಲಿ ಕಾಣಬಹುದು. ಆದರೆ ಪ್ರಕೃತಿಯ ಆರಾಧನೆಯೇ ಇಲ್ಲಿ ಎದ್ದು ಕಾಣುವುದು.ಮನೆಯವರು ಊರವರು ಎಲ್ಲರೂ ಸೇರಿ ಒಟ್ಟಾಗಿ ಆಚರಿಸಿ ಸಂಭ್ರಮಿಸುವುದೇ ಹಬ್ಬದ ಘಮ್ಮತ್ತು. ಪೊಂಗಲ್ ಸಂಕ್ರಾಂತಿ ಯ ವಿಶೇಷ ಖಾದ್ಯ. ಹೆಸರುಬೇಳೆ, ಅಕ್ಕಿ, ಬೆಲ್ಲ, ತೆಂಗಿನತುರಿ, ಗೇರುಬೀಜ, ತುಪ್ಪ ಹಾಲು ಬಳಸಿ ಮಾಡುವ ಈ ಖಾದ್ಯ ಬಹಳ ರುಚಿಯಾಗಿರುತ್ತದೆ. ಬನ್ನಿ ಸಂಕ್ರಾಂತಿಯನ್ನು ಪೊಂಗಲ್ ಸವಿದು ಆಚರಿಸೋಣ. ಸಂಕ್ರಾಂತಿ ಎಲ್ಲರಿಗೂ ಒಳ್ಳಯದನ್ನೇ ಮಾಡಲಿ. ಸಂಕ್ರಾಂತಿಯ ಶುಭಾಶಯಗಳು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಸಂಪಾಜೆ ಗ್ರಾಮ ಪಂಚಾಯತ್…
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 852.6 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದ್ದು,…
ಬೆಂಗಳೂರಿನಲ್ಲಿ ಈ ಹಿಂದೆ ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ…
ರಾಜ್ಯದ ಜೇನುತುಪ್ಪಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹಾಗೂ ಮಾರುಕಟ್ಟೆ ಒದಗಿಸಲು ತೋಟಗಾರಿಕಾ ಇಲಾಖೆಯಿಂದ…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶದಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ…
ವಿದ್ಯುತ್ ಸರಬರಾಜು ಕಂಪನಿಗಳಿಗೆ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಪಾವತಿಸಬೇಕಾಗಿದ್ದ …