Advertisement
ಅನುಕ್ರಮ

ಇಂದು ವಿವೇಕಾನಂದ ಜಯಂತಿ | Every thing is easy , when you are busy…..

Share
“Every thing is easy , when you are busy, nothing is easy when you are lazy.” ಈ ಎಚ್ಚರಿಕೆ ಕೊಡುತ್ತಿದ್ದವರು ಸ್ವಾಮಿ ವಿವೇಕಾನಂದರು. ಸಾರ್ವಕಾಲಿಕ ಸತ್ಯವಾದ ಈ ಮಾತು ಯುವಕರಿಗೆ ಸ್ಫೂರ್ತಿ.

“ಎದ್ದು ನಿಲ್ಲಿ ! ಧೀರರಾಗಿ ! ಬಲಾಡ್ಯರಾಗಿ! ಜವಾಬ್ದಾರಿಗಳನ್ನು ನಿಭಾಯಿಸಲು ಸಮರ್ಥರಾಗಿ. ನಿಮಗೆ ಬೇಕಾದ ಶಕ್ತಿ, ಸಹಾಯವೆಲ್ಲಾ ನಿಮ್ಮಲ್ಲೇ ಇರುವುದರಿಂದ ನಿಮ್ಮ ಭವಿಷ್ಯವನ್ನು ನೀವೇ ನಿರ್ಮಿಸಿಕೊಳ್ಳಿ. ಹೀಗೆಂದು ಯುವ ಮನಸಿನ ಬಿಸಿರಕ್ತದ ಯುವ ಜನತೆಯಲ್ಲಿ ಉತ್ಸಾಹ ತುಂಬಿದವರು ಸ್ವಾಮಿ ವಿವೇಕಾನಂದರು.ಇವರು ಪ್ರಾತ: ಸ್ಮರಣೀಯರು.

ಬ್ರಿಟಿಷ್ ಸಾಮ್ರಾಜ್ಯದ ಕಪಿ ಮುಷ್ಟಿಯಲ್ಲಿ ನರಳುತ್ತಿದ್ದ ಭಾರತೀಯ ಸಮಾಜಕ್ಕೆ ಹೊಸ‌ ಕಲ್ಪನೆಯನ್ನು ಸಾಕಾರ ಗೊಳಿಸಿದ ಧೀಮಂತ ವ್ಯಕ್ತಿತ್ವ ವಿವೇಕಾನಂದರದ್ದು. ಭಾರತ, ಹಿಂದೂಗಳು, ಹಿಂದೂ ಧರ್ಮವೆಂದರೆ ಕೇವಲವಾಗಿ ನೋಡುತ್ತಿದ್ದ ಕಾಲ. ಭಾರತವೆಂದರೆ ಹಾವಾಡಿಗರ ದೇಶವೆಂಬ ಭ್ರಮೆಯಲ್ಲಿದ್ದ ಪಾಶ್ಚಿಮಾತ್ಯರ ಕಣ್ತೆರಸಲು ವಿವೇಕಾನಂದರು ಹುಟ್ಟಿ ಬರಬೇಕಾಯಿತು. 1983 ರಲ್ಲಿ ಚಿಕಾಗೊದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಅಮೆರಿಕಾದ ಸಹೋದರ ಸಹೋದರಿಯರೆ ಎಂದು ಆರಂಭಿಸಿದ ಭಾಷಣ ಪ್ರಪಂಚದ ಕಣ್ಣಿನಲ್ಲಿ ಭಾರತದ ಸ್ಥಾನವನ್ನು ಬದಲಾಯಿಸಿತು. ಇಲ್ಲಿನ ಶ್ರೀಮಂತ ಸಂಸ್ಕೃತಿಯ ಪರಿಚಯ ಜಗತ್ತಿಗಾಯಿತು.

ಧರ್ಮ ಮತ್ತು ಸರ್ಕಾರದ ನಡುವೆ ಕಟ್ಟು ನಿಟ್ಟಾದ ಅಂತರವಿರುವಂತೆ ಅವರು ಮನವಿ ಮಾಡಿಕೊಂಡಿದ್ದರು. ಸಾಮಾಜಿಕ ಕಟ್ಟಳೆಗಳು ಧರ್ಮದ ಮೂಲಕ ರೂಪುಗೊಂಡದ್ದಾದರೂ ಸರ್ಕಾರಿ ಕೆಲಸಗಳು ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯ ಕೊಡಬಾರದು ಎಂಬ ನಂಬಿಕೆಯಾಗಿತ್ತು ವಿವೇಕಾನಂದರದ್ದು.

“Every thing is easy , when you are busy, nothing is easy when you are lazy.” ಇದು ವಿವೇಕಾನಂದರು ಯಾವಾಗಲೂ ಕೊಡುತ್ತಿದ್ದ ಎಚ್ಚರಿಕೆಯಾಗಿತ್ತು. ನಮಗೆ ಮಾಡುವ , ಕಲಿಯುವ ಮನಸು ಉತ್ಸಾಹ ಎರಡೂ ಇದ್ದಾಗ ಸೋಮಾರಿತನಕ್ಕೆ ಜಾಗವಿಲ್ಲ. ಎಲ್ಲಾ ಕೆಲಸಗಳು ಸುಲಭವಾಗಿ ನಡೆದು ಬಿಡುತ್ತವೆ. ನಮ್ಮಲ್ಲಿರುವ ಅದಮ್ಯ ಚೇತನ, ಶಕ್ತಿಯನ್ನು ಪ್ರಕಟಗೊಳಿಸುವತ್ತ ಕಾರ್ಯೋನ್ಮುಕವಾಗಬೇಕು. ದೇಶದ ಅಭಿವೃದ್ಧಿಗೆ ಇಂದು ವೈಜ್ಞಾನಿಕ ಮನೋಭಾವುಳ್ಳ ಪ್ರತಿಭಾನ್ವಿತರ ಅಗತ್ಯವಿದೆ.

ವೇದಾಂತವು ಯಾವ ಪಾಪವನ್ನು ಒಪ್ಪಿಕೊಳ್ಳುವುದಿಲ್ಲ. ತಪ್ಪನ್ನು ಮಾತ್ರ ಒಪ್ಪಿಕೊಳ್ಳುವುದು. ನಮ್ಮನ್ನು ನಾವು ನಿರ್ಬಲರೆಂದು, ನಿಶ್ಯಕ್ತರೆಂದು ತಿಳಿಯುವುದು ಘೋರ ತಪ್ಪು ಎಂಬುದು ವೇದಾಂತದ ಸಾರವೆಂದು ವಿವೇಕಾನಂದರು ಸಾರಿ ಸಾರಿ ಹೇಳಿದ್ದಾರೆ.
ನೀನು ಸ್ವಾಮಿಯಂತೆ ಕೆಲಸ ಮಾಡು , ಗುಲಾಮನಂತೆ ಮಾಡಬೇಡ. ಯಾವಾಗಲೂ ಕಾರ್ಯ ಮಾಡು ಆದರೆ ಜೀತಗಾರನಂತೆ ದುಡಿಯಬೇಡ. ಭರತ ಖಂಡದಲ್ಲಿ ಇಂದು ಯಾವುದಾದರೂ ಮಹಾಪಾತಕವಿದೆಯೆಂರೆ ಅದೇ ಈ ಗುಲಾಮಗಿರಿ. ಪ್ರತಿಯೊಬ್ಬರೂ ಆಜ್ಞಾಧಾರಕರಾಗಲು ಯಾರೂ ಇಚ್ಚಿಸುವುದಿಲ್ಲ. ಹಿಂದಿನ ಕಾಲದ ಬ್ರಹ್ಮಚರ್ಯಾಶ್ರಮ ಈಗ ಇಲ್ಲದಿರುವುದೇ ಕಾರಣ. ಮೊದಲು ಅಪ್ಪಣೆ ಪಾಲಿಸುವುದನ್ನು ಕಲಿಯಿರಿ. ಆಜ್ಞೆ ಕೊಡುವುದು ಅನಂತರ ಬರುವುದು. ಮೊದಲು ಹೇಗೆ ಸೇವಕರಾಗ ಬೇಕೆಂಬುದನ್ನು ಕಲಿಯಿರಿ. ಅನಂತರ ಸ್ವಾಮಿಯಾಗಲು ಯೋಗ್ಯರಾಗುವಿರಿ. ಹೀಗೆ ಹಲವು ರೀತಿಯಲ್ಲಿ ಯುವಜನತೆಗೆ ಅಗತ್ಯವಾದ ಮಾರ್ಗದರ್ಶನ ಮಾಡಿದವರು ಸ್ವಾಮಿ ವಿವೇಕಾನಂದರು.

ಅವರ ಜನ್ಮದಿನ ಜನವರಿ 12ನ್ನು ದೇಶದಾದ್ಯಂತ ‘ಯುವದಿನ’ ಎಂದು ಆಚರಿಸಲಾಗುತ್ತದೆ. ಯುವಜನರಿಗೆ ಅಂದು ಇಂದು ಎಂದೂ ಆದರ್ಶ ವ್ಯಕ್ತಿ. ಅವರೇನು ಹೇಳಿದರೋ ಹಾಗೇ ಜೀವಿಸಿದರು. ಬದುಕಿದ್ದು ಕೆಲವೇ ವರುಷಗಳಾದರು ಭಾರತದ ಪ್ರಭೆಯಾಗಿ ಬಾಳಿದವರು.

ಯಾರನ್ನೂ ಯಾವುದನ್ನು ಸುಲಭವಾಗಿ ಸ್ವೀಕರಿಸದ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಗುರುವೆಂದು ಸುಲಭವಾಗಿ ಪರಿಗಣಿಸಲಿಲ್ಲ. ಎರಡು ,ಮೂರು ಭೇಟಿಯಲ್ಲಿ ರಾಮಕೃಷ್ಣರ ಮಗು ಮನಸಿಗೆ ವಿವೇಕಾನಂದರು ಮಾರು ಹೋದರು. ಅವರ ಬದುಕಿನ ಹಲವು ಅನಿರೀಕ್ಷಿತ ಘಟನೆಗಳು ರಾಮಕೃಷ್ಣರನ್ನು ಗುರುವಾಗಿ ಸ್ವೀಕರಿಸುವಂತೆ ಮಾಡಿತು.
ವಿಶ್ವನಾಥದತ್ತ ಹಾಗೂ ಭುವನೇಶ್ವರಿ ದೇವಿಯವರ ಮಗ ನರೇಂದ್ರ ಅವರ ಬಾಲ್ಯದ ಹೆಸರು. ಕಲ್ಕತ್ತಾದಲ್ಲಿ ಅವರ ಜನನವಾಯಿತು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ನರೇಂದ್ರರ ಹೆಸರು ‘ವಿವೇಕಾನಂದ’ ಎಂದಾಯಿತು. ಬದುಕು , ಸಮಾಜದ ಕುರಿತು ತಮ್ಮ ವಿಶಿಷ್ಟ ದೃಷ್ಟಿಕೋನಕ್ಕಾಗಿ ಯಾವತ್ತೂ ಗುರುತಿಸಿಕೊಳ್ಳುತ್ತಾರೆ.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

3 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

11 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

12 hours ago

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

22 hours ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

2 days ago