Advertisement
ಸುದ್ದಿಗಳು

ಯಾರಾಗ್ತಾರೆ ಮುಂದಿನ ಸಿಎಂ? ಭವಿಷ್ಯ ನುಡಿದ ಮಂಡ್ಯದ ನಾಯಿ!

Share

ಕರ್ನಾಟಕದ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆ. ಈ ಬಾರಿ ಯಾರು ಗೆಲ್ಲುತ್ತಾರೆ? ಯಾವ ಪಕ್ಷಕ್ಕೆ ಬಹುಮತ ಬರಲಿದೆ? ಕೊನೆಗೆ ಯಾರು ಮುಖ್ಯಮಂತ್ರಿ ಗದ್ದುಗೆ ಏರುತ್ತಾರೆ? ಸದ್ಯ ಚುನಾವಣೆ ಫಲಿತಾಂಶ ಬರುವವರೆಗೂ ಇದು ಮಿಲಿಯನ್ ಡಾಲರ್ ಪ್ರಶ್ನೆ! ಆದರೆ ಮಂಡ್ಯದಲ್ಲಿ   ನಾಯಿಯೊಂದು ಈ ಬಾರಿ ಯಾರು ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿದೆ.

ಮಂಡ್ಯ ನಗರದ ಅಶೋಕನಗರದ ನಿವಾಸಿ ಗೋಪಿ ಎಂಬುವವರ ನಾಯಿಯೆ ಹೀಗೆ ಭವಿಷ್ಯ ಹೇಳಿರೋದು. ಈ ನಾಯಿಯ ಹೆಸರು ಭೈರವ!

ಮಂಡ್ಯದ ಗೋಪಿ ಅವರು ಕಾಲ ಭೈರವೇಶ್ವರನ ಭಕ್ತರಾಗಿದ್ದಾರೆ. ಕಾಲ ಭೈರವನಿಗೆ ಪೂಜೆ ಮಾಡಿದ ಗೋಪಿಯವರು ಮುಂದಿನ ಸಿಎಂ ಯಾರಾಗ್ತಾರೆ ಎಂದು ನಾಯಿ ಬಳಿ ಭವಿಷ್ಯ ಕೇಳಲಾಗಿದೆ.

ಕಳೆದ ಎರಡು ವರ್ಷಗಳಿಂದ ಭೈರವ ಎಂಬ ಈ ನಾಯಿಯ ಸೂಚಿಸುವ ಭವಿಷ್ಯ ನಿಜವಾಗುತ್ತಿದೆ ಎಂಬ ನಂಬಿಕೆಯಿದೆಯಂತೆ. ಬಸವರಾಜ ಬೊಮ್ಮಾಯಿ, ಎಚ್.​ಡಿ. ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರ ಮೂರು ಫೋಟೋಗಳನ್ನು ಇಟ್ಟು ಅಪ್ಪಣೆ ಕೇಳಿದ್ದಾರೆ.

ಭೈರವ ನಾಯಿ ಕಚ್ಚಿದ್ದು ಇವರ ಫೋಟೋ!
ಈ ವೇಳೆ ಭೈರವ ನಾಯಿ ಎಚ್. ಡಿ.ಕುಮಾರಸ್ವಾಮಿ ಅವರ ಫೋಟೋವನ್ನು ಬಾಯಲ್ಲಿ ಕಚ್ಚಿ ಇವರೇ ಮುಂದಿನ ಸಿಎಂ ಆಗ್ತಾರೆ ಎಂದು ಸೂಚನೆ ನೀಡಿದೆ!

ಭೈರವ ನಾಯಿಯ ಹಲವು ಭವಿಷ್ಯಗಳು ಕಳೆದ ಎರಡು ವರ್ಷಗಳಿಂದ ನಿಜ ಆಗಿವೆಯಂತೆ. ಅದೇ ರೀತಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎಂದು ಈ ಬಾರಿ ಸೂಚಿಸಿದ  ಭವಿಷ್ಯ ಏನಾಗುತ್ತೆ ಎಂದು ಕಾದು ನೋಡಬೇಕಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹಾಲಿನ ದರ ಕನಿಷ್ಠ ₹10 ಹೆಚ್ಚಳಕ್ಕೆ ಕೆಎಂಎಫ್‌ ಮನವಿ – ಹೈನುಗಾರರಿಗೆ ಏನು ಪ್ರಯೋಜನ..? ಗ್ರಾಹಕರಿಗೆ ಎಷ್ಟು ಹೊರೆ..?

ರಾಜ್ಯದಲ್ಲಿ ಹಾಲಿನ ದರವನ್ನು ಕನಿಷ್ಠ ಲೀಟರ್‌ಗೆ ₹10 ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಸರ್ಕಾರಕ್ಕೆ…

1 hour ago

ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು

ಹಳೆಯ ನೋವು, ಕೋಪ, ತಿರಸ್ಕಾರ ಮತ್ತು ನಿರೀಕ್ಷೆಗಳ ಭಾರವನ್ನು ಹೊಸ ಸಂಬಂಧಗಳ ಮೇಲೆ…

13 hours ago

ರೈತರಿಗೆ ವಿದ್ಯುತ್‌ ಶಾಕ್ – ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ- ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ

ಮಳೆ ಕೊರತೆ ಮತ್ತು ಜಲವಿದ್ಯುತ್ ಉತ್ಪಾದನೆ ಕುಸಿತದ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ…

19 hours ago

ಅ.29 ರಿಂದ ನ.11 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ -12 ದಿನ ಸಾರ್ವಜನಿಕ ದರ್ಶನ

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್…

20 hours ago

ಪಿಎಂ-ಕುಸುಮ್ ಯೋಜನೆಯಿಂದ ರೈತರ ನೀರಾವರಿಗೆ ಸೌರಶಕ್ತಿ

ಪಿಎಂ-ಕುಸುಮ್ ಯೋಜನೆಯಡಿ ರೈತರ ನೀರಾವರಿ ಪಂಪ್‌ಗಳಿಗೆ ಸೌರಶಕ್ತಿ ಅಳವಡಿಸುವ ಮೂಲಕ ಡೀಸೆಲ್ ಅವಲಂಬನೆ…

20 hours ago

ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ – ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಘಟನೆ

ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು…

20 hours ago