ಮಂಗಳೂರು ಅಡಿಕೆ ಮಾರುಕಟ್ಟೆ | ಐದು ವರ್ಷದ ಧಾರಣೆ ಹೇಳುವ ಏರುಪೇರುಗಳ ಕಥೆ..!

March 23, 2026
7:25 AM
ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ. 2025 ರಲ್ಲಿ ಅಡಿಕೆ ಮಾರುಕಟ್ಟೆ ಏರಿಕೆಯ ಲಕ್ಷಣಗಳು ಕಾಣಿಸಿಕೊಂಡಿದ್ದು, ಮುಂದಿನ ತಿಂಗಳಲ್ಲಿ ದರ ಏರಿಕೆಯ ಸಾಧ್ಯತೆ ಇದೆ. ಅದರ ಜೊತೆಗೇ 2022 ರ ಪರಿಸ್ಥಿತಿ ಮತ್ತೆ ಮರುಕಳಿಸಬಹುದೇ ಎನ್ನುವ ಆತಂಕವೂ ಇದೆ.

ಕರ್ನಾಟಕದ ಕರಾವಳಿ ಭಾಗದ ಆರ್ಥಿಕತೆಯ ನಾಡಿ ಎಂದೇ ಪರಿಗಣಿಸಲ್ಪಡುವ ಮಂಗಳೂರು ಅಡಿಕೆ ಮಾರುಕಟ್ಟೆ ಕಳೆದ ಐದು ವರ್ಷಗಳಲ್ಲಿ ಗಮನಾರ್ಹ ಏರುಪೇರುಗಳನ್ನು ಕಂಡಿದೆ. 2020 ರಿಂದ 2025 ರವರೆಗಿನ ಜನವರಿ–ಮಾರ್ಚ್ ಅವಧಿಯ ದರಗಳ ವಿಶ್ಲೇಷಣೆ ಮಾರುಕಟ್ಟೆಯ ಚಲನೆಗಳು ಕೇವಲ ಆವಕ–ಬೇಡಿಕೆಗಳಿಗೆ ಸೀಮಿತವಲ್ಲದೆ, ಜಾಗತಿಕ ಹಾಗೂ ದೇಶೀಯ ಅಂಶಗಳ ಸಂಕೀರ್ಣ ಪರಿಣಾಮವನ್ನೂ  ತೋರಿಸುತ್ತದೆ.

2020 – ಸ್ಥಿರತೆಯ ಆರಂಭಿಕ ಹಂತ :  2020ರಲ್ಲಿ ಹೊಸ ಅಡಿಕೆ ದರಗಳು ₹253–₹267 ನಡುವೆಯೇ ಇದ್ದರೆ, ಹಳೆಯ ಅಡಿಕೆ ₹300–₹320 ಮಟ್ಟದಲ್ಲಿ ಇತ್ತು. ಕೋವಿಡ್ ಪೂರ್ವ ಹಾಗೂ ಆರಂಭಿಕ ಅವಧಿಯಲ್ಲಿ ಮಾರುಕಟ್ಟೆ ಸಮತೋಲನದಲ್ಲಿದ್ದು, ದೊಡ್ಡ ಮಟ್ಟದ ಅಸ್ಥಿರತೆ ಕಾಣಿಸಲಿಲ್ಲ.

2021 – ಏರಿಕೆಯ ಶಿಖರ : 2021 ಜನವರಿಯಲ್ಲಿ ಹೊಸ ಅಡಿಕೆ ₹410 ಮತ್ತು ಹಳೆಯದು ₹430 ತಲುಪಿದ್ದು, ಮಾರುಕಟ್ಟೆ ಮಹತ್ವದ ಏರಿಕೆಯ ಹಂತ ಕಂಡಿತು. ಆದರೆ ಫೆಬ್ರವರಿ–ಮಾರ್ಚ್ ವೇಳೆಗೆ ಹೊಸ ಅಡಿಕೆ ₹360–₹370 ಮಟ್ಟಕ್ಕೆ ಇಳಿದರೆ, ಹಳೆಯ ಅಡಿಕೆ ₹410–₹420 ನಡುವೆ ಸರಿದಿದೆ. ಇದು ಮಾರುಕಟ್ಟೆಯ ತಕ್ಷಣದ correction ಹಂತವನ್ನು ಸೂಚಿಸುತ್ತದೆ.

2022 – ಅತಿ ಹೆಚ್ಚು ಅಸ್ಥಿರತೆ :  2022 ರಲ್ಲಿ ಮಾರುಕಟ್ಟೆ ಅತ್ಯಂತ ಸಂವೇದನಾಶೀಲವಾಗಿ ವರ್ತಿಸಿತು. ಜನವರಿಯಲ್ಲಿ ಹಳೆಯ ಅಡಿಕೆ ₹540 ಎಂಬ ಗರಿಷ್ಠ ಮಟ್ಟ ತಲುಪಿದರೆ, ಫೆಬ್ರವರಿಯಲ್ಲಿ ಅದು ₹510ಕ್ಕೆ  ಕುಸಿತ ಕಂಡಿತು. ಮಾರ್ಚ್‌ನಲ್ಲಿ ಮತ್ತೆ ₹525ಕ್ಕೆ ಜಿಗಿತ ಕಂಡಿದ್ದು, ಈ ವರ್ಷ  ಅಡಿಕೆ ಧಾರಣೆ ಅಸ್ಥಿರತೆಯಾಗಿ ಉಳಿಸಯಿತು. ಹೊಸ ಅಡಿಕೆ ದರಗಳು ₹437–₹445 ನಡುವೆ ಇದ್ದರೂ, ಹಳೆಯ ಅಡಿಕೆಯ ಏರುಪೇರುಗಳು ಮಾರುಕಟ್ಟೆಯ ಅಪಾಯ ಮಟ್ಟವನ್ನು ತೋರಿಸುತ್ತವೆ.

2023 – ಸಮತೋಲನದ ಹಂತ :  ಹಿಂದಿನ ವರ್ಷದ ತೀವ್ರ ಅಸ್ಥಿರತೆಯ ನಂತರ 2023ರಲ್ಲಿ ಮಾರುಕಟ್ಟೆ ಸ್ಥಿರ ಹಾದಿ ಹಿಡಿದಿದೆ.  ಹೊಸ ಅಡಿಕೆ ₹370–₹378 ಹಾಗೂ ಹಳೆಯ ಅಡಿಕೆ ₹453–₹480 ನಡುವೆ ಇದ್ದು, ಮಾರುಕಟ್ಟೆ ಸಮತೋಲನ ಸ್ಥಿತಿಗೆ ಬಂದಿರುವುದು ಗೋಚರಿಸುತ್ತದೆ.

2024 –  ಮೃದುವಾದ ಕುಸಿತ :  2024 ರಲ್ಲಿ ಹೊಸ ಅಡಿಕೆ ₹347–₹370 ನಡುವೆ ಇಳಿಕೆಯ ಹಾದಿ ಹಿಡಿದರೆ, ಹಳೆಯ ಅಡಿಕೆ ₹398–₹424 ಮಟ್ಟಕ್ಕೆ ಕುಸಿತ ಕಂಡಿತು.
ಇದು ಬೇಡಿಕೆಯ ಕುಂದಿಕೆ ಅಥವಾ ಆವಕ ಹೆಚ್ಚಳದ ಸೂಚಕವಾಗಿರಬಹುದು.

2025 –  ಪುನರುಜ್ಜೀವನದ ಸಂಕೇತ : 2025 ರಲ್ಲಿ ಮತ್ತೆ ಚೇತರಿಕೆಯ ಲಕ್ಷಣಗಳು ಗೋಚರಿಸುತ್ತವೆ. ಮಾರ್ಚ್‌ನಲ್ಲಿ ಹೊಸ ಅಡಿಕೆ ₹408 ಮತ್ತು ಹಳೆಯ ಅಡಿಕೆ ₹475 ತಲುಪಿದ್ದು, ಮಾರುಕಟ್ಟೆ ಪುನಃ ಏರಿಕೆಯ ಹಾದಿಗೆ ಮರಳುತ್ತಿರುವ ಸೂಚನೆ ನೀಡಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಅಡಿಕೆ ಮಾರುಕಟ್ಟೆಯ ಪ್ರಮುಖ ಟ್ರೆಂಡ್‌ಗಳು: 

  • ಹೊಸ ಅಡಿಕೆ: ₹250 ರಿಂದ ₹445 ವರೆಗೆ ಏರಿಕೆಯ ಚಕ್ರ , ನಂತರ ₹350–₹400 ನಡುವೆ ಸ್ಥಿರತೆ
  • ಹಳೆಯ ಅಡಿಕೆ: ಹೆಚ್ಚು ಅಸ್ಥಿರ , ₹300ರಿಂದ ₹540ವರೆಗೆ ತೀವ್ರ ಏರುಪೇರು
  • ಮಾರ್ಚ್ ತಿಂಗಳು: ಅನೇಕ ವರ್ಷಗಳಲ್ಲಿ ದರ ಏರಿಕೆಯ ತಿರುವು 
  • 2022 – ಅತಿ ಹೆಚ್ಚು ಅಸ್ಥಿರ ವರ್ಷ
  • 2025 – ಅಡಿಕೆ ಮಾರುಕಟ್ಟೆ ಚೇತರಿಕೆಯ ಸೂಚನೆಯ ವರ್ಷ

ಕಾರಣ ಏನು..? : ಅಡಿಕೆ ಮಾರುಕಟ್ಟೆಯಲ್ಲಿನ ಈ ಟ್ರೆಂಡ್‌ಗಳಿಗೆ ಪ್ರಮುಖ ಕಾರಣವೇನು ಎಂದು ವಿಶ್ಲೇಷಿಸಿದಾಗ,  ಹವಾಮಾನ ಬದಲಾವಣೆ, ಉತ್ಪಾದನೆ ಹಾಗೂ ಸಂಗ್ರಹಣೆಯ ವ್ಯತ್ಯಾಸ,  ಪಾನ್ ಮಾರುಕಟ್ಟೆ, ರಫ್ತು ಹಾಗೂ ಸ್ಥಳೀಯ ಬಳಕೆಯಲ್ಲಿನ ವ್ಯತ್ಯಾಸ,  ಆಮದು ನಿಯಂತ್ರಣಗಳು ಮತ್ತು ತೆರಿಗೆ ವ್ಯವಸ್ಥೆಗಳ ಪರಿಣಾಮ ಹಾಗೂ ವ್ಯಾಪಾರಿಗಳ ನಿರೀಕ್ಷೆಗಳು ದರಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಹಾಗೂ ಅನೇಕ ಸಂದರ್ಭ ಅಡಿಕೆ ಮಾರುಕಟ್ಟೆಯ ಊಹಾಪೋಹಗಳೇ ಕಾರಣವಾಗಿದೆ.

ಹೀಗಾಗಿ 2020 ರಿಂದ 2025 ರವರೆಗಿನ ಅಡಿಕೆ ಧಾರಣೆಯ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಸ್ಥಿರತೆ- ಏರಿಕೆ – ಅಸ್ಥಿರತೆ – ಸಮತೋಲನ – ಕುಸಿತ – ಪುನರುಜ್ಜೀವನ ಎಂಬ ಹಂತಗಳನ್ನು ಮಾರುಕಟ್ಟೆ ಅನುಭವಿಸಿದೆ. 2025ರ ಮಾರ್ಚ್ ದರಗಳು ಮುಂದಿನ ತಿಂಗಳಲ್ಲಿ ಮತ್ತಷ್ಟು ಏರಿಕೆಯ ಸಾಧ್ಯತೆಯನ್ನು ಸೂಚಿಸುತ್ತಿದ್ದು, ಬೆಳೆಗಾರರು ಮತ್ತು ವ್ಯಾಪಾರಿಗಳು ಮಾರುಕಟ್ಟೆಯ ಚಲನೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ
July 23, 2026
7:29 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ
July 22, 2026
3:55 PM
by: ಸಾಯಿಶೇಖರ್ ಕರಿಕಳ
ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror