ಫುಟ್ಬಾಲ್ ಐಕಾನ್ ಅರ್ಜೆಂಟೀನಾ ದೇಶದ ಮಾಜಿ ಆಟಗಾರ ಡಿಗೊ ಮರಡೋನಾ ನಿಧನರಾದರು.ಪ್ರಸಿದ್ದ ಫುಟ್ಬಾಲ್ ಆಟಗಾರನಾಗಿದ್ದ ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆಯಲು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದಾದ ಬಳಿಕ ವಿಶ್ರಾಂತಿಯಲ್ಲಿದ್ದ ಅವರು ಹೃದಯಾಘಾತದಿಂದ ನಿಧನರಾದರು.
ಮರಡೋನಾ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬನೆಂದು ಗುರುತಿಸಲ್ಪಟ್ಟಿದೆ. 21 ವರ್ಷಗಳ ಕಾಲ ಫುಟ್ಬಾಲ್ ಆಟದಲ್ಲಿ ತೊಡಗಿಸಿಕೊಂಡಿದ್ದರು. ಮರಡೋನಾ ತನ್ನ ವೃತ್ತಿಜೀವನವನ್ನು ಅರ್ಜೆಂಟಿನೋಸ್ ಜೂನಿಯರ್ಸ್ ತಂಡದಲ್ಲಿ ಪಾದಾರ್ಪಣೆ ಮಾಡಿ 1976ರಿಂದ 1981ರವರೆಗೂ ಅಲ್ಲೇ ಆಡುತ್ತಿದ್ದರು.ಅರ್ಜೆಂಟಿನಾ ರಾಷ್ಟ್ರೀಯ ಫುಟ್‍ಬಾಲ್ ತಂಡಕ್ಕೆ, ತಮ್ಮ ಹದಿನಾರನೇ ವಯಸ್ಸಿನಲ್ಲಿ, ಹಂಗೇರಿ ದೇಶದ ವಿರುದ್ಧ ಆಡುವುದರ ಮೂಲಕ ಪಾದಾರ್ಪಣೆ ಮಾಡಿದರು. ಆ ಬಳಿಕ ಅವರು ದೇಶದ ತಂಡದಲ್ಲಿ ಸ್ಥಾನ ಪಡೆದರು.ಒಟ್ಟು ನಾಲ್ಕು ವರ್ಲ್ಡ್ ಕಪ್ ಸರಣಿಗಳಲ್ಲಿ ಭಾಗವಹಿಸಿ, 1986 ರಲ್ಲಿ ತಂಡದ ಮುಂದಾಳತ್ವವನ್ನು ವಹಿಸಿ ಅಂತಿಮ ಸುತ್ತಿನಲ್ಲಿ ಪಶ್ಚಿಮ ಜರ್ಮನಿಯನ್ನು ಸದೆಬಡಿದು, ಸರಣಿಯ ಶ್ರೇಷ್ಠ ಆಟಗಾರರೆಂದು “ಗೋಲ್ಡನ್ ಬಾಲ್” ಪ್ರಶಸ್ತಿಯನ್ನು ಪಡೆದಿದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…