ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ಕನ್ಯೆಯರ ಜತೆ ವೈವಾಹಿಕ ಸಂಬಂಧ ಏರ್ಪಡಿಸುವ ಉದ್ದೇಶದಿಂದ ಅಧ್ಯಯನ ನಡೆಸಲು ಓಂ ಗುರೂಜಿ ಮತ್ತು ಕನ್ಯೆಯರ ಪೋಷಕರನ್ನು ಒಳಗೊಂಡ ತಂಡ ಕರಾವಳಿ ಕರ್ನಾಟಕಕ್ಕೆ ಆಗಮಿಸುತ್ತಿದೆ ಎಂಬ ಮಾಹಿತಿ ಸಮಾಜ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೂ ಶ್ರೀರಾಮಚಂದ್ರಾಪುರ ಮಠಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶ್ರೀಮಠ ಸ್ಪಷ್ಟಪಡಿಸಿದೆ.
“ಈ ತಂಡದ ಜತೆ ಸಂಪರ್ಕ ಮಾಡಿದವರ ಪೈಕಿ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರಿಗೆ ಆಪ್ತರಾಗಿರುವವರು ಇದ್ದಾರೆ. ಆದ್ದರಿಂದ ಮೋಸ ಹೋಗಲು ಅವಕಾಶವಿಲ್ಲ” ಎಂಬ ಮಾಹಿತಿ ಈ ವಾಟ್ಸಪ್ ಸಂದೇಶಗಳಲ್ಲಿ ಇದ್ದು, ಶ್ರೀಮಠದ ಜತೆ ನೇರ ಸಂಪರ್ಕ ಇರುವ ಯಾರೂ ಇಂತಹ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿಲ್ಲ ಅಥವಾ ಶ್ರೀಮಠ ಇಂತಹ ಯಾರನ್ನೂ ಈ ಉದ್ದೇಶಕ್ಕೆ ನಿಯೋಜಿಸಿಲ್ಲ ಎಂದು ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಉತ್ತರ ಭಾರತದಿಂದ ವೈವಾಹಿಕ ಸಂಬಂಧ ಬಯಸುವವರು ಉತ್ತರ ಭಾರತಕ್ಕೆ ಹೋಗಿ ಕನ್ಯೆಯರನ್ನು ನೋಡುವುದು, ಅವರು ವರನ ಮನೆಗೆ ಬಂದು ನೋಡುವುದು, ಒಪ್ಪಿಗೆಯಾದಲ್ಲಿ ಮಠದ ಕಾಣಿಕೆ, ಮದುವೆ ಖರ್ಚು ಹೀಗೆ ಕನಿಷ್ಠ 1.5 ಲಕ್ಷ ರೂಪಾಯಿ ಭರಿಸಲು ಸಿದ್ಧರಿರಬೇಕು ಎಂದು ಈ ವಾಟ್ಸಪ್ ಸಂದೇಶದಲ್ಲಿ ತಿಳಿಸಲಾಗಿದೆ. ಆದರೆ ಈ ಒಡಂಬಡಿಕೆಗೆ ಒಪ್ಪಿಕೊಳ್ಳುವವರು ತಮ್ಮದೇ ಸ್ವಂತ ವಿವೇಚನೆಯಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕೇ ವಿನಃ ಇದಕ್ಕೆ ಶ್ರೀಮಠವಾಗಲೀ ಅಥವಾ ಮಠಕ್ಕೆ ಸಂಬಂಧಿಸಿದ ಯಾವುದೇ ಸಂಘಟನೆ, ಸಂಘ ಸಂಸ್ಥೆಗಳಾಗಲೀ ಹೊಣೆ ಆಗಿರುವುದಿಲ್ಲ ಎಂದು ಹೇಳಿದ್ದಾರೆ.
ಹವ್ಯಕ ಸಮಾಜ ಸೇರಿದಂತೆ ಬ್ರಾಹ್ಮಣ ಸಮಾಜದ ಇತರ ಉಪ ಪಂಗಡಗಳಿಗೆ ಸೇರಿದ ಕೃಷಿಕರು, ಅಡುಗೆಯವರು, ಪುರೋಹಿತರು ಮತ್ತು ಇತರ ವೃತ್ತಿಪರರನ್ನು ಗುರಿಯಾಗಿಸಿಕೊಂಡು ಈ ಗುಂಪು ಕೆಲಸ ಮಾಡುತ್ತಿದೆ. ಒಂದು ವೇಳೆ ಈ ವ್ಯವಸ್ಥೆ ಜತೆ ವ್ಯವಹಾರ ನಡೆಸುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…