ಬಂಗು #melasma. ಇದನ್ನು ಆಯುರ್ವೇದದಲ್ಲಿ ವ್ಯಂಗ #Vyanga ಎಂದು ಕರೆಯಲಾಗುತ್ತದೆ. ಇದು ಸಾಧಾರಣ ಮಧ್ಯವಯಸ್ಕರಲ್ಲಿ ಮುಖದ ಮೇಲೆ, ಹಣೆ,ಗಲ್ಲ, ಕುತ್ತಿಗೆ ಬೆನ್ನು ಭಾಗದಲ್ಲಿ ಕಾಣಿಸಿಕೊಳ್ಳುವ ಒಂದು ತರದ ಕಪ್ಪು ಕಲೆಯುಳ್ಳ ಚರ್ಮವ್ಯಾಧಿ. ಇದರಲ್ಲಿ ಚರ್ಮ ಕಂದು ಅಥವಾ ಕೆಂಪು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಸಾಮಾನ್ಯವಾಗಿ ಬಂಗು ಅಥವಾ ಕರಂಗ ಅಥವಾ ಮೆಲಾಸ್ಮಾ ಎಂದು ಕರೆಯುತ್ತಾರೆ. ಸ್ತ್ರೀಯರಲ್ಲಿ ಅಧಿಕವಾಗಿ ಕಾಣಬಹುದು. ಚರ್ಮದ ಕೋಶಗಳಲ್ಲಿ ಮೆಲನಿನ್ ಎಂಬ ವರ್ಣಕಾರಕ ಇದೆ. ಇದರಿಂದ ಚರ್ಮಕ್ಕೆ ಬಣ್ಣ ಬರುತ್ತದೆ. ಮೆಲನಿನ್ ಅಧಿಕ ಉತ್ಪಾದನೆ ಆಗುವುದರಿಂದ ಹೈಪರ್ ಪಿಗ್ಮೆಂಟೇಷನ್ ಉಂಟಾಗುತ್ತದೆ.
ಇದಕ್ಕೆ ಕಾರಣಗಳೇನು..?:
– ಸುಡುವ ಬಿಸಿಲಿಗೆ ಸತತವಾಗಿ ಚರ್ಮವನ್ನು ಒಡ್ಡುವುದು
– ಹಾರ್ಮೋನ್ ನ ಬದಲಾವಣೆಗಳು (ಹೆರಿಗೆಯ ನಂತರ ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಯಿಂದ ಸಾಮಾನ್ಯವಾಗಿ ಕಂಡುಬರುತ್ತದೆ )
– ಅನುವಂಶಿಯತೆ
– ಆಹಾರದಲ್ಲಿ ಪೋಷಕಾಂಶಗಳ ಕೊರತೆ . ವಿಟಮಿನ್ E ಮತ್ತು C ಕೊರತೆಯಿಂದಲೂ ಹೈಪರ್ ಪಿಗ್ಮೆಂಟೇಷನ್ ಉಂಟಾಗಬಹುದು.
ಪರಿಹಾರ:
– ಬಿಸಿಲಿಗೆ ಹೆಚ್ಚು ಹೋಗದೇ ಇರುವುದು
– ವಿಟಮಿನ್ ಸಿ ಜಾಸ್ತಿ ಇರುವ ಕಿತ್ತಳೆ ಹಣ್ಣಿನ ಸೇವನೆ ಹಾಗೂ ವಿಟಮಿನ್ E ಹೇರಳವಾಗಿರುವ ಹಸಿರು ತರಕಾರಿಗಳು, ಗೋಧಿ ರಾಗಿಯ ಅತಿ ಹೆಚ್ಚು ಬಳಕೆ ಮಾಡವುದು
– ಚರ್ಮದ ಕಾಂತಿಯನ್ನು ಹೆಚ್ಚಿಸುವ ಲೋಳೆಸರ, ಅರಸಿನ ಇವುಗಳ ಲೇಪನ
– ನೈಸರ್ಗಿಕವಾಗಿ ರಕ್ತ ಶುದ್ಧ ಮಾಡಲು ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ.
– ರಾಸಾಯನಿಕ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವಂಥದ್ದು
– ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು.
– ಉತ್ತಮ ಚರ್ಮದ ರಕ್ಷಣೆಗಾಗಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…