ಕರ್ನಾಟಕದಲ್ಲಿ ಅಮೂಲ್ ಹಾಲಿಗೆ ವಿರೋಧ ವ್ಯಕ್ತವಾಗುತ್ತಿದಂತೆ ಕೇರಳದಲ್ಲಿ ಈಗ ನಂದಿನಿ ಹಾಲಿಗೆ ವಿರೋಧ ವ್ಯಕ್ತವಾಗುತ್ತಿದೆ.
ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಕೇರಳದಲ್ಲಿ ಮಿಲ್ಮಾ ಹಾಲನ್ನು ಮಾರಾಟ ಮಾಡುತ್ತಿದೆ. ಈಗ ಕೆಸಿಎಂಎಂಎಫ್ ಕೇರಳದಲ್ಲಿ ನಂದಿನಿ ಹಾಲು ಮಾರಾಟವಾಗುತ್ತಿರುವುದನ್ನು ಅನೈತಿಕ ಎಂದು ಹೇಳಿದೆ.
ಕೇರಳದ ಕೆಲವು ಭಾಗಗಳಲ್ಲಿ ನಂದಿನಿ ಬ್ರಾಂಡ್ ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡಲು ಕರ್ನಾಟಕ ಹಾಲು ಒಕ್ಕೂಟ (KMF) ಮಳಿಗೆಗಳನ್ನು ತೆರೆದಿದೆ. ಇದು ಭಾರತದ ಡೈರಿ ಕ್ಷೇತ್ರದ ಮೂಲಾಧಾರವಾಗಿರುವ ಸಹಕಾರಿ ಮನೋಭಾವವನ್ನು ಉಲ್ಲಂಘಿಸಿದೆ ಎಂದು ಕೆಸಿಎಂಎಂಎಫ್ ಆರೋಪಿಸಿದೆ.
ಈ ಸಂಬಂಧ ಮಿಲ್ಮಾ ಅಧ್ಯಕ್ಷ ಕೆಎಸ್ ಮಣಿ ಪ್ರತಿಕ್ರಿಯಿಸಿ, ಇತ್ತೀಚೆಗೆ ಕೆಲವು ರಾಜ್ಯಗಳ ಹಾಲು ಮಾರಾಟ ಒಕ್ಕೂಟಗಳು ತಮ್ಮ ಪ್ರಮುಖ ಉತ್ಪನ್ನಗಳನ್ನು ತಮ್ಮ ರಾಜ್ಯದ ಹೊರಗಡೆ ಮಾರಾಟ ಮಾಡುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಫೆಡರಲ್ ತತ್ವಗಳು ಮತ್ತು ಸಹಕಾರ ಮನೋಭಾವವನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ಹಾಲು ಮಾರಾಟ ಒಕ್ಕೂಟವು ಇತ್ತೀಚೆಗೆ ತನ್ನ ನಂದಿನಿ ಬ್ರಾಂಡ್ ಹಾಲು ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡಲು ಕೇರಳದ ಕೆಲವು ಭಾಗಗಳಲ್ಲಿ ತನ್ನ ಮಳಿಗೆಗಳನ್ನು ತೆರೆದಿದೆ. ಇದನ್ನು ಹೇಗೆ ಸಮರ್ಥಿಸಬಹುದು? ಇದನ್ನು ಯಾರೇ ಮಾಡಿದರೂ, ಇದು ಅತ್ಯಂತ ಅನೈತಿಕ ಕೆಲಸ. ಇದು ಭಾರತದ ಡೈರಿ ಚಳುವಳಿಯ ಉದ್ದೇಶವನ್ನು ಸೋಲಿಸುತ್ತದೆ. ಮತ್ತು ರೈತರ ಹಿತಾಸಕ್ತಿಗೆ ಧಕ್ಕೆಯುಂಟುಮಾಡುತ್ತದೆ ಎಂದಿದ್ದಾರೆ.
ಒಂದು ರಾಜ್ಯದ ಸಂಘ ಇನ್ನೊಂದು ರಾಜ್ಯದಲ್ಲಿ ತನ್ನ ಉತ್ಪನ್ನವನ್ನು ಮಾರಾಟ ಮಾಡುವುದು ರಾಜ್ಯ ರಾಜ್ಯಗಳ ನಡುವಿನ ಅನಾರೋಗ್ಯಕರ ಸ್ಪರ್ಧೆಗೆ ಕಾರಣವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…