ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮಾ ಅವರು ಶುಕ್ರವಾರ ಅಸ್ಸಾಂ ಗಡಿಯ ಬಳಿಯ ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ಹೊಸ ಅಡಿಕೆ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಎಸ್‌ಎಸ್‌ಬಿ ಆಗ್ರೋ ಸಂಸ್ಥೆ ಸ್ಥಾಪಿಸಿರುವ ಈ ಘಟಕವು ರಾಜ್ಯದ ಕೃಷಿ ವಲಯವನ್ನು ಬಲಪಡಿಸುವುದರ ಜೊತೆಗೆ, ಈ ಪ್ರದೇಶದ ಅಡಿಕೆ ರೈತರಿಗೆ ವಿಶ್ವಾಸಾರ್ಹ ಮಾರುಕಟ್ಟೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಬುಹ್ಚಾಂಗ್‌ಫಾಯಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಪಿಸಿ ವನ್ಲಾಲ್ರುವಾಟಾ, ಉಪ ಸ್ಪೀಕರ್ ಲಾಲ್ಫಮ್ಕಿಮಾ ಹಾಗೂ ಮುಖ್ಯಮಂತ್ರಿ ಸಲಹೆಗಾರ ಮತ್ತು ಶಾಸಕ ಲಾಲ್ಮುವಾನ್‌ಪುಯಾ ಪುಂಟೆ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಲಾಲ್ದುಹೋಮಾ, ರಾಜ್ಯದಲ್ಲಿ ಪ್ರಸ್ತುತ ಸುಮಾರು 30,000 ಹೆಕ್ಟೇರ್ ಭೂಮಿಯಲ್ಲಿ ಅಡಿಕೆ ಕೃಷಿ ನಡೆಯುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಸರ್ಕಾರ ಅಡಿಕೆ ಕಳ್ಳಸಾಗಣೆ ವಿರುದ್ಧ ಕೈಗೊಂಡ ಕ್ರಮಗಳಿಂದ ಸ್ಥಳೀಯ ರೈತರಿಗೆ ಉತ್ತಮ ಮಾರುಕಟ್ಟೆ ಲಾಭ ದೊರಕುತ್ತಿದೆ ಎಂದು ಹೇಳಿದರು.
ರಾಜ್ಯದ ಕೈಗಾರಿಕಾ ಮೂಲಸೌಕರ್ಯ ವಿಸ್ತಾರವಾಗುತ್ತಿದ್ದು, ಕೊಲಾಸಿಬ್ ಜಿಲ್ಲೆಯ ಚೆಂಫೈ ಹಾಗೂ ಮಾಮಿತ್ ಜಿಲ್ಲೆಯ ಜಮುವಾಂಗ್‌ನಲ್ಲಿ ಸರ್ಕಾರದ ವತಿಯಿಂದ ಸ್ಥಾಪಿಸಲಾಗುತ್ತಿರುವ ಸಂಸ್ಕರಣಾ ಘಟಕಗಳು ಮುಂದಿನ ವರ್ಷದಿಂದ ಕಾರ್ಯನಿರ್ವಹಿಸಲು ನಿರೀಕ್ಷಿಸಲಾಗಿದೆ ಎಂದರು.
ಎಸ್‌ಎಸ್‌ಬಿ ಆಗ್ರೋದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿ, ಮಿಜೋರಾಂ ಅಡಿಕೆ ಮಾರ್ಕೆಟಿಂಗ್ ಕೋಆಪರೇಟಿವ್ ಸೊಸೈಟಿಯೊಂದಿಗಿನ ಸಂಸ್ಥೆಯ ಖರೀದಿ ಒಪ್ಪಂದವನ್ನು ಸ್ವಾಗತಿಸಿ, ಈ ಪಾಲುದಾರಿಕೆ ಸ್ಥಳೀಯ ರೈತ ಸಮುದಾಯಕ್ಕೆ ಮಹತ್ತರ ಪ್ರಯೋಜನ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರಾಖಂಡದ ಸ್ಥಳೀಯ ಬದ್ರಿ ಹಸು ಇಂದು ರೈತರ ಪಾಲಿಗೆ ಹೊಸ ಆದಾಯದ ಮೂಲವಾಗಿ…
ಪೇಪರ್ ಅವಲಕ್ಕಿ ಚೂಡಾಕ್ಕೆ ಬೇಕಾಗುವ ಸಾಮಗ್ರಿಗಳು : ಪೇಪರ್ ಅವಲಕ್ಕಿ – ಅಗತ್ಯ…
ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಳ್ಳಿಗಳ ಜನರು ಸ್ವಾವಲಂಬಿಗಳಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿಯಾದ ಯಾವುದೇ ಆಸ್ಪತ್ರೆಗಳು ರೋಗಿಗಳಿಗೆ…
ಇದೇ ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಕೇಂದ್ರ…
ಮುಕ್ತ ವ್ಯಾಪಾರ ಒಪ್ಪಂದ (Free Trade Agreement) ಜಾರಿಗೆ ಬಂದ ನಂತರ ಭಾರತದಿಂದ…