Advertisement
MIRROR FOCUS

ಮಿಜೋರಾಂನಲ್ಲಿ ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ | ₹24 ಕೋಟಿ ಮೌಲ್ಯದ ಅಡಿಕೆ ವಶ, 468 ಪ್ರಕರಣ ದಾಖಲು, 292 ಮಂದಿ ಬಂಧನ

Share

ಮಿಜೋರಾಂ ರಾಜ್ಯದಲ್ಲಿ ಅಡಿಕೆ ಕಳ್ಳಸಾಗಣೆ ಹಾಗೂ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಮ್ಯಾನ್ಮಾರ್‌ನಿಂದ ಅಕ್ರಮವಾಗಿ ತರಲಾಗಿದ್ದ ಸುಮಾರು ₹24 ಕೋಟಿ ಮೌಲ್ಯದ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಸಂಬಂಧ 468 ಪ್ರಕರಣಗಳನ್ನು ದಾಖಲಿಸಿ 292 ಮಂದಿಯನ್ನು ಬಂಧಿಸಲಾಗಿದೆ ಎಂದು ಮಿಜೋರಾಂ ಗೃಹ ಸಚಿವ ಕೆ. ಸಪ್ಡಾಂಗಾ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

ವಿಧಾನಸಭೆಯಲ್ಲಿ ಸದಸ್ಯ ವಿ.ಎಲ್. ಜೈತಾಂಜಾಮಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೈರೆಂಗ್ಟೆ ಪ್ರದೇಶದ ಗೋದಾಮೊಂದರಿಂದ 5,849 ಚೀಲ ಒಣ ಅಡಿಕೆ ಕಳವಾಗಿದ್ದು, ಇದುವರೆಗೆ ಕಳವಾದ ಅಡಿಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಕಳವು ನಡೆದ ಗೋದಾಮು ಪೊಲೀಸ್ ಕಣ್ಗಾವಲಿನಲ್ಲಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

2025ರ ಜನವರಿ 1ರಿಂದ 2026ರ ಫೆಬ್ರವರಿ 28ರವರೆಗೆ ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ 11,837 ಚೀಲ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಅಕ್ರಮ ವ್ಯಾಪಾರವು ಸ್ಥಳೀಯ ಅಡಿಕೆ ಬೆಳೆಗಾರರಿಗೆ ದೊಡ್ಡ ಹೊಡೆತ ನೀಡಿದ್ದು, ತೆರಿಗೆ ಪಾವತಿಸದ ಅಡಿಕೆ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಮಿಜೋರಾಂ ಸರ್ಕಾರ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುನೀತಿಯನ್ನು ಮುಂದುವರಿಸಿದ್ದು, ಗಡಿ ಪ್ರದೇಶಗಳಲ್ಲಿ ನಿಗಾವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದೆ. ಕಳ್ಳಸಾಗಣೆ ತಡೆಯುವ ಕ್ರಮಗಳಿಂದ ಸ್ಥಳೀಯ ಅಡಿಕೆಯ ಬೆಲೆ ಏರಿಕೆಯಾಗಿದ್ದು, ರೈತರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ದೊರೆತಿದೆ ಎಂದು ಸಚಿವರು ಹೇಳಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

The Mizoram government has intensified its crackdown on areca nut smuggling from Myanmar. Home Minister K. Sapdanga informed the Assembly that areca nuts worth around ₹24 crore were seized between January 2025 and February 2026. Authorities registered 468 cases and arrested 292 people. The government said illegal imports were hurting local farmers by depressing market prices and has vowed stricter border surveillance.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಹವಾಮಾನ ವರದಿ |13-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಜೋರು ಮಳೆ ಇಲ್ಲ

ರಾಜ್ಯದಲ್ಲಿ ಮುಂದಿನ 10 ದಿನಗಳವರೆಗೆ ಜೋರು ಮಳೆಯ ಸಾಧ್ಯತೆಗಳು ಕಾಣುತ್ತಿಲ್ಲ. ಕರಾವಳಿಯಲ್ಲಿ ಜುಲೈ…

4 hours ago

ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?

ಅಮರನಾಥ ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಹಿಮ ಶಿವಲಿಂಗವು 90%ಕ್ಕೂ ಹೆಚ್ಚು ಕರಗಿರುವುದಾಗಿ…

11 hours ago

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧ – ಆಸ್ಟ್ರೇಲಿಯಾದ ಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ ವಿಧಿಸಿರುವ ಆಸ್ಟ್ರೇಲಿಯಾದ ಕ್ರಮವನ್ನು ಪ್ರಧಾನಿ…

22 hours ago

ಎಲ್‌ ನಿನೊ ಎಫೆಕ್ಟ್‌ – ಮುಂದಿನ ವರ್ಷ ಮತ್ಸ್ಯೋದ್ಯಮಕ್ಕೆ ಸಂಕಷ್ಟ?

ಎಲ್‌ ನಿನೊ ಪರಿಣಾಮದಿಂದ 2027ರಲ್ಲಿ ಎಣ್ಣೆ ಸಾರ್ಡಿನ್ ಮೀನುಗಳ ಉತ್ಪಾದನೆ ಕುಸಿಯುವ ಸಾಧ್ಯತೆ…

22 hours ago

ಮುಂಗಾರು ಇದ್ದಕ್ಕಿದ್ದಂತೆ ದುರ್ಬಲವಾಗಿದ್ದೇಕೆ..? ಇಲ್ಲಿದೆ ವೈಜ್ಞಾನಿಕ ಕಾರಣ

ದೇಶದ ಬಹುತೇಕ ಭಾಗಗಳಿಂದ ಮಳೆ ಮೋಡಗಳು ಕಡಿಮೆಯಾಗಲು ಪಶ್ಚಿಮ ಪೆಸಿಫಿಕ್‌ನ ಪ್ರಬಲ ಚಂಡಮಾರುತ…

1 day ago

ಮತ್ತೆ ಹೆಚ್ಚಿದ ದೇಶದ ಮಳೆ ಕೊರತೆ – ಜುಲೈ ಆರಂಭದ ಚೇತರಿಕೆ ಕುಂಠಿತ, ಮುಂಗಾರು ಮತ್ತೆ ದುರ್ಬಲ

ಜುಲೈ ಮೊದಲ ವಾರದ ಚೇತರಿಕೆಯ ಬಳಿಕ ದೇಶದ ಮುಂಗಾರು ಮತ್ತೆ ದುರ್ಬಲಗೊಂಡಿದ್ದು, ಮಳೆ…

1 day ago