ಇದು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಕತೆ. ರೋಗಿಯೊಬ್ಬರನ್ನು ಹೊಳೆ ಬದಿಗೆ ಕರೆತಂದು ನಂತರ ಕಾಲುಸಂಕದಲ್ಲಿ ಹೊತ್ತು ಹೊಳೆಯ ಇನ್ನೊಂದು ಬದಿಯಿಂದ ಮತ್ತೊಂದು ವಾಹನದಲ್ಲಿ ಸಾಗಿಸಿದ ಘಟನೆ ನಡೆದಿದೆ.ಕಳೆದ ಹಲವು ವರ್ಷಗಳಿಂದ ಸೇತುವೆಯ ಭರವಸೆ ಮಾತ್ರಾ ಇಲ್ಲಿ ಕಂಡಿದೆ.
ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಇತ್ತೀಚೆಗೆ ಬೇಡಿಕೆಗಳ ಪಟ್ಟು ಹೆಚ್ಚಾಗಿದೆ. ಸುಳ್ಯವು ಅಭಿವೃದ್ಧಿ ಹೊಂದುತ್ತದೆ ಎಂದು ಅನೇಕ ವರ್ಷಗಳಿಂದ ಜನರು ಸುಮ್ಮನಿದ್ದರು. ಆದರೆ ಅಂದಿನಿಂದಲೂ ಸುಳ್ಯ ಭಾರೀ ಅಭಿವೃದ್ಧಿ ಹೊಂದಿಲ್ಲ. ಗ್ರಾಮೀಣ ಭಾಗದಲ್ಲಿ ಇಂದಿಗೂ ಹಲವಾರು ಸಮಸ್ಯೆ ಇದೆ. ಆದರೆ ಮೂಲಭೂತ ಸಮಸ್ಯೆ ನಿವಾರಣೆ ಆಗದೇ ಇರುವುದು ಬಹುದೊಡ್ಡ ಲೋಪವಾಗಿದೆ. ದೇಶವು 75 ನೇ ಸ್ವಾತಂತ್ರ್ಯ ಉತ್ಸವ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಮೂಲಭೂತ ಅವಶ್ಯಕತೆಯಾದ ಸೇತುವೆ, ರಸ್ತೆ, ಕುಡಿಯುವ ನೀರಿಗೆ ಪರದಾಟ ನಡೆಸುತ್ತಿದೆ ಎನ್ನುವುದೇ ವಿಷಾದ ಹಾಗೂ ಅಭಿವೃದ್ಧಿ ಬಗ್ಗೆ ಇರುವ ಕಾಳಜಿ ವ್ಯಕ್ತವಾಗುತ್ತದೆ.
ಇದೀಗ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಕಂಡುಬಂದು ವಿಡಿಯೋ ಮನ ಕಲಕುತ್ತದೆ. ಮೊಗ್ರದ ಹೊಳೆಕೆರೆ ಎಂಬಲ್ಲಿನ ವ್ಯಕ್ತಿಯೋರ್ವರಿಗೆ ಅನಾರೋಗ್ಯ ಕಾಡಿತ್ತು. ಆದರೆ ವಾಹನಗಳು ಮನೆಯವರೆಗೆ ಬಾರದ ಸ್ಥಿತಿ ಇದೆ. ಮೊಗ್ರದ ಹೊಳೆಗೆ ಸೇತುವೆ ರಚನೆಯಾದಗ ಹಿನ್ನೆಲೆಯಲ್ಲಿ ಮಳೆಗಾಲ ವಾಹನಗಳು ಎರಡೂ ಕಡೆಗೆ ದಾಟುವುದಿಲ್ಲ. ಇಲ್ಲಿ ಅನಾರೋಗ್ಯ ಪೀಡಿತರನ್ನು ಹೊಳೆತ ಬದಿಯವರೆಗೆ ಜೀಪಲ್ಲಿ ಕರಕೊಂಡುಬಂದು, ಆ ಬಳಿಕ ಈಚೆಗೆ ನಿರ್ಮಾಣವಾದ ಕಾಲು ಸಂಕದ ಮೂಲಕ ಎತ್ತಿ ಹೊಳೆಯ ಈ ಕಡೆ ಇರುವ ಕಾರಿಗೆ ಕರೆತಂದು ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು.ಒಂದು ಹಳ್ಳಿಯ ಮೂಲಭೂತವಾದ ಸಮಸ್ಯೆ ಗಂಭೀರವಾಗಿದ್ದರೂ ಆಡಳಿತವು ಗಮನಹರಿಸದೇ ಇರವುದು ವ್ಯವಸ್ಥೆಯ ಲೋಪವಾಗಿದೆ.
ರಾಜ್ಯದ ಕೆಲವು ಕಡೆ ಮಳೆ ಕಡಿಮೆ ಇದ್ದು, ಮುಂದಿನ 7 ದಿನಗಳ ಹವಾಮಾನ…
ಪ್ರೇಮ ಸಂಬಂಧವು ಭಾವನಾತ್ಮಕ ಸಾಮರಸ್ಯ, ಪರಸ್ಪರ ಗೌರವ ಮತ್ತು ವಿಶ್ವಾಸದ ಮೇಲೆ ನಿಂತಿದೆ.…
ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ…
ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…
ಹಲಸಿನ ಬೇಳೆ ಸೂಪ್ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…
ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…