MIRROR FOCUS

ಅಯೋಧ್ಯೆ ಶ್ರೀರಾಮ ಪೂಜೆಯ ಪೌರೋಹಿತ್ಯ ಸೇವೆಗೆ ಆಯ್ಕೆಯಾದ ಸಕಲ ವೇದ ಪಾರಂಗತ “ಮೋಹಿತ್ ಪಾಂಡೆ” | ಯಾರು ಇವರು..? ಎಲ್ಲಿಯ ಹುಡುಗ..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಯೋಧ್ಯೆಯಲ್ಲಿ ಶ್ರೀರಾಮ(Ayodya) ಮಂದಿರ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಅಂದರೆ ಮುಂದಿನ ತಿಂಗಳು ಅಂದರೆ 2024ರ ಜನವರಿ 22ರಂದು ರಾಮಮಂದಿರ(Ram Mandir) ಲೋಕಾರ್ಪಣೆಗೊಳ್ಳುತ್ತಿದೆ(Inauguration). ಹಾಗಾಗಿ  ಶ್ರೀ ರಾಮ ದೇಗುಲದಲ್ಲಿ ಶ್ರೀರಾಮನ ಪೌರೋಹಿತ್ಯ ಸೇವೆ ಮಾಡಲು ಕೆಲ ದಿನಗಳ ಹಿಂದೆ ಸಂದರ್ಶನ(Interview) ಕರೆಯಲಾಗಿತ್ತು. ಇದೀಗ ಯುವ ಪುರೋಹಿತ, ಸಕಲ ವೇದ ಪಾರಂಗತ, ಭಾಗ್ಯವಂತ “ಮೋಹಿತ್ ಪಾಂಡೆ”(Mohit Panday) ಆಯ್ಕೆಯಾಗಿದ್ದಾರೆ.

Advertisement

ದೇಶದಾದ್ಯಂತ ಕರೆಯಲಾದ 3000 ಕ್ಕಿಂತಲೂ ಅಧಿಕ ಪುರೋಹಿತರ ಸಂದರ್ಶನದಲ್ಲಿ ಮತ್ತು ವೇದಜ್ಞಾನ ಕಠಿಣ ಪರೀಕ್ಷೆಯಲ್ಲಿ ತನ್ನ ವೇದ ಮತ್ತು ಪೂಜಾ ವಿಧಿ,ವಿಧಾನಗಳ ಅಪಾರ ಪಾಂಡಿತ್ಯ ಮತ್ತು ಜ್ಞಾನದಿಂದ ಆಯ್ಕೆಯಾದ ಕೊನೆಯ 50 ಮಂದಿಯಲ್ಲಿ ಅಗ್ರಸ್ಥಾನೀಯನಾಗಿ ಆಯ್ಕೆಯಾದ ಭಾಗ್ಯವಂತ. ಯುವ ಪುರೋಹಿತರು “ಗಾಜಿಯಾಬಾದ್ ನ ಧುದೇಶ್ವರನಾಥ ಮಠ ಮತ್ತು ವೆಂಕಟೇಶ್ವರ ವೇದಿಕ್” ಯುನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದಾರೆ. ವಿಶೇಷವೆಂದರೆ ಇಲ್ಲಿ ವೇದ ಮತ್ತು ಜ್ಞಾನಕ್ಕೆ ಮಹತ್ವ ನೀಡಿ ಆಯ್ಕೆ ಮಾಡಲಾಗಿದೆಯೇ ಹೊರತು ಯಾವುದೇ ಜಾತಿ ಅಥವಾ ಮೀಸಲಾತಿಗೆ ಮನ್ನಣೆ ನೀಡಲಾಗಿಲ್ಲ…!

ಉತ್ತರ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಗಾಜಿಯಾಬಾದ್‌ನ ಶ್ರೀ ದೂಧೇಶ್ವರನಾಥ ಮಠ ದೇವಾಲಯದ ಆವರಣದಲ್ಲಿ ದೂಧೇಶ್ವರ ವೇದ ವಿದ್ಯಾಪೀಠವನ್ನು ಸ್ಥಾಪಿಸಲಾಗಿದೆ. ಪ್ರಪಂಚದಾದ್ಯಂತ ಪ್ರತಿದಿನ ಪ್ರಪಂಚದಾದ್ಯಂತ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.  ಮೊದಲು ಅರ್ಚಕರಾಗುವ ಎಲ್ಲರಿಗೂ ಆರು ತಿಂಗಳಗಳು ತರಬೇತಿ ನೀಡಲಾಗುತ್ತದೆ. ಪ್ರಸ್ತುತ ಈ ವೇದ ವಿದ್ಯಾಪೀಠರದಲ್ಲಿ ಸುಮಾರು 70 ವಿದ್ಯಾರ್ಥಿಗಳು ದೇಶ ಮತ್ತು ವಿದೇಶದ ವಿವಿಧ ದೇವಾಲಯಗಳಲ್ಲಿ ಅರ್ಚಕರು ಹಾಗೂ ಆಚಾರ್ಯರಾಗಿ ಸೇವೆ ಸಲ್ಲಿಸಲು ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಇಲ್ಲಿ ವೇದ, ಸಂಸ್ಕಾರ ಕಲಿಸಲಾಗಿದೆ. 23 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ.

ಸಂಸ್ಥೆಯಲ್ಲಿ ಆಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ನಿತ್ಯಾನಂದ ಅವರು ಮಾತನಾಡಿ ʼಮೋಹಿತ್‌ ಪಾಂಡೆ ಅವರು ದೂದೇಶ್ವರ ವೇದ ವಿದ್ಯಾಪೀಠದಲ್ಲಿ ಏಳು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ತಿರುಪತಿಯ ವೆಂಕಟೇಶ್ವರ ವೇದಿಕ್‌ ವಿಶ್ವವಿದ್ಯಾಲಯಕ್ಕೆ ತೆರಳಿದರು. ವಿದ್ಯಾರ್ಥಿಗಳಿಗೆ ಧರ್ಮ, ಸಂಸ್ಕಾರಗಳ ಬಗ್ಗೆ ತಿಳುವಳಿಕೆ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆʼ ಎಂದಿದ್ದಾರೆ.

ದೂಧೇಶ್ವರ ವೇದ ವಿದ್ಯಾಪೀಠದಲ್ಲಿ ನಿಯಮಾವಳಿಗಳು ತುಂಬಾ ಕಟ್ಟುನಿಟ್ಟಾಗಿದ್ದು, ಇಲ್ಲಿಂದ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ ಎಂದರ್ಥ. ದೂಧೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿಗಳು ಬೆಳಿಗ್ಗೆ 4:00 ಗಂಟೆಗೆ ಏಳುತ್ತಾರೆ ಮತ್ತು ರಾತ್ರಿ 10:00 ರವರೆಗೆ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ.

– ಅಂತರ್ಜಾಲ ಮಾಹಿತಿ

Ayodhya, will be inaugurated soon. That means next month i.e. 22 January 2024, Ram Mandir will be inaugurated. So, an interview was called a few days ago for the priestly service of Sri Rama in Sri Rama temple. Now a young priest, well-versed in all Vedas, blessed "Mohit Panday" has been selected.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೆಳಗಾವಿಯಲ್ಲಿ 3 ದಿನಗಳ ಮಾವು, ಜೇನು ಮೇಳ | ರೈತರಿಂದ ಪ್ರದರ್ಶನ, ಗ್ರಾಹಕರಿಗೆ ನೇರ ಮಾರಾಟ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯಿಂದ ಬೆಳಗಾವಿಯ ಹೋಮ್ ಪಾರ್ಕ್ ನಲ್ಲಿ…

1 hour ago

ದೇಶಾದ್ಯಂತ 47 ಸ್ಥಳಗಳಲ್ಲಿ ಉದ್ಯೋಗ ಮೇಳ | 51000 ನವ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ

ದೇಶಾದ್ಯಂತ ಒಂದೇ ದಿನ 47 ಸ್ಥಳಗಳಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರಿನ ಎನ್‌ಎಸಿಐಎ…

2 hours ago

ಹವಾಮಾನ ವರದಿ | 26-04-2025 | ಸಂಜೆ ಗುಡುಗು ಸಹಿತ ಮಳೆ ಸಾಧ್ಯತೆ |

ಅಲ್ಲಲ್ಲಿ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

9 hours ago

ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ 2863 ಎಕರೆ ಭೂಮಿ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ೨…

14 hours ago

ಹೊಸರುಚಿ | ಹಲಸಿನ ಕಾಯಿ ಪೂರಿ

ಹಲಸಿನ ಕಾಯಿ ಪೂರಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿ 1/2 ಕಪ್, ಗೋಧಿ ಹುಡಿ.1…

15 hours ago

ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ

ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…

1 day ago