ಭೂಕಂಪನದ ಬಳಿಕ ಭೂಕುಸಿತದ ಭೀತಿ | ಮದೆನಾಡು ಬಳಿ ಭಾರೀ ಸದ್ದಿನೊಂದಿಗೆ ಕುಸಿದ ಬೆಟ್ಟ | ಹರಿಯುತ್ತಿದೆ ಮಣ್ಣು ಮಿಶ್ರಿತ ನೀರು | ರಾಮಕೊಲ್ಲಿಗೆ ಅಧಿಕಾರಿಗಳ ಭೇಟಿ |

July 22, 2022
8:55 PM

ಕಳೆದ ಒಂದು ತಿಂಗಳಿನಿಂದ ಸಂಪಾಜೆ, ಚೆಂಬು, ಮಡಿಕೇರಿ ಪ್ರದೇಶದಲ್ಲಿ ಭೂಕಂಪನದ ಸದ್ದಿನ ಬಳಿಕ ಇದೀಗ ಭೂಕುಸಿತದ ಸದ್ದು ಕೇಳುತ್ತಿದೆ. ಎರಡು ದಿನಗಳ ಹಿಂದೆ ರಾಮಕೊಲ್ಲಿಯಲ್ಲಿ ಭೂಕುಸಿತ ಸಂಭವಿಸಿದ ಬಳಿಕ ಮದೆನಾಡು ಬಳಿ ಬೆಟ್ಟ ಕುಸಿತಗೊಂಡ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಣ್ಣು ಮಿಶ್ರಿತ ನೀರು ಹೊಳೆಯಲ್ಲಿ ಹರಿದು ಬರುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಗುರುವಾರ ತಡರಾತ್ರಿ ಮದೆನಾಡಿನ ಕೊಪ್ಪಡ್ಕ ಪ್ರದೇಶದಲ್ಲಿ  ಬೆಟ್ಟದಿಂದ ಸದ್ದು ಕೇಳಿತ್ತು. ಶುಕ್ರವಾರ ಮಣ್ಣು ಮಿಶ್ರಿತ ನೀರು ಹರಿಯುತ್ತಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಸದ್ಯ ಯಾವುದೇ ಮನೆಗಳು , ಕೃಷಿ ಭೂಮಿ ಇಲ್ಲ. ಅಪಾಯದ ಹಿನ್ನೆಲೆಯಲ್ಲಿ ಆಸುಪಾಸಿನ ಮನೆಯವರನ್ನು ಸ್ಥಳಾಂತರ ಈ ಹಿಂದೆಯೇ ಮಾಡಲಾಗಿತ್ತು. ಇದೀಗ ಬೆಟ್ಟ ಕುಸಿದಿರುವ ಬಗ್ಗೆ ದೂರದಿಂದ ಗೋಚರವಾಗುತ್ತದೆ ಎನ್ನುವುದು  ಸ್ಥಳೀಯರ ಮಾಹಿತಿ. ಅಧಿಕಾರಿಗಳು, ಸ್ಥಳೀಯರು ಬೆಟ್ಟ ಕುಸಿತದ ಕಾರಣದಿಂದ ಸ್ಥಳಕ್ಕೆ ತೆರಳಲು ಸಾಧ್ಯವಾಗಿಲ್ಲ.

ಈ ನಡುವೆ ಎರಡನೇ ಮೊಣ್ಣಂಗೇರಿಯ ನಿಶಾನಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಜನರಿಗೆ ಆತಂಕ ಉಂಟಾಗಿತ್ತು. ಇದೀಗ ನಿಶಾನಿ ಬೆಟ್ಟದ ಪ್ರದೇಶಕ್ಕೆ ಹಾಗೂ ಮೊಣ್ಣಂಗೇರಿಯ ರಾಮಕೊಲ್ಲಿ ಪ್ರದೇಶಕ್ಕೆ ಅಧಿಕಾರಿಗಳು ಹಾಗೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 06-07-2026 | ಆಗಸ್ಟ್‌ 10ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ ತಗ್ಗುವ ಲಕ್ಷಣ – ಘಟ್ಟದ ಕೆಳಭಾಗದಲ್ಲಿ ಇನ್ನೂ ಕೆಲ ದಿನ ಹೆಚ್ಚು ಮಳೆ ಸಾಧ್ಯತೆ – ಮಳೆಯ ಸ್ವರೂಪ ಹೀಗೇಕೆ?
August 6, 2026
3:42 PM
by: ಸಾಯಿಶೇಖರ್ ಕರಿಕಳ
ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ
August 5, 2026
8:52 PM
by: ದ ರೂರಲ್ ಮಿರರ್.ಕಾಂ
2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ
August 5, 2026
10:30 AM
by: ದ ರೂರಲ್ ಮಿರರ್.ಕಾಂ
ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ
August 5, 2026
9:09 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror