Advertisement
MIRROR FOCUS

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

Share

2026 ರ ನೈಋತ್ಯ ಮುಂಗಾರು ಕುರಿತು ಭಾರತೀಯ ಹವಾಮಾನ ಇಲಾಖೆ (IMD) ಸದ್ಯದ ನಿರೀಕ್ಷೆಯಂತೆ ಮುನ್ಸೂಚನೆ ನೀಡಿದ್ದು, ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ದೀರ್ಘಾವಧಿಯ ಸರಾಸರಿ (LPA)ಯ 92% ಮಳೆಯಷ್ಟೇ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಈಗಿನ ಹವಾಮಾನ ಸ್ಥಿತಿಯಲ್ಲಿ ನಿರೀಕ್ಷೆಗಿಂತ ಮೊದಲೇ ಮಳೆ ಆರಂಭವಾಗುವ ಸೂಚನೆಯನ್ನೂ ನೀಡಿದೆ. ಆದರೆ ಅಧಿಕೃತವಾದ ಘೋಷಣೆ ಆಗಿಲ್ಲ.

ಮೇ 14 ರಿಂದ ಮೇ 20 ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಮಳೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದಷ್ಟೇ ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

ಭಾರತದ ಆರ್ಥಿಕತೆಯ ಹೃದಯವಾದ ಕೃಷಿ ಕ್ಷೇತ್ರಕ್ಕೆ ನೈಋತ್ಯ ಮುಂಗಾರು ಅತ್ಯಂತ ಪ್ರಮುಖವಾಗಿದೆ. ದೇಶದ ವಾರ್ಷಿಕ ಮಳೆಯ ಸುಮಾರು 70% ಈ ಅವಧಿಯಲ್ಲೇ ಲಭ್ಯವಾಗುತ್ತದೆ.  ಆದರೆ ಇತ್ತೀಚಿನ ಮುನ್ಸೂಚನೆಯ ಪ್ರಕಾರ, 2026ರ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ  ಮಳೆಯಾಗುವ ಸಾಧ್ಯತೆ ಇದೆ. ಇದು ರೈತರಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈಗಿನಂತೆ ಮುಂಗಾರು ಆಗಮನದ ದಿನಾಂಕಗಳು (ಅಂದಾಜು):

  • ಅಂಡಮಾನ್ & ನಿಕೋಬಾರ್: ಮೇ 14–20
  • ಕೇರಳ: ಜೂನ್ 1 ಸುಮಾರಿಗೆ
  • ಮುಂಬೈ: ಜೂನ್ 10 ಸುಮಾರಿಗೆ
  • ಮಧ್ಯ ಭಾರತ: ಜೂನ್ ಮಧ್ಯಭಾಗ
  • ದೆಹಲಿ-ಎನ್‌ಸಿಆರ್: ಜೂನ್ 27–30
  • ದೇಶವ್ಯಾಪಿ: ಜುಲೈ 15 ಸುಮಾರಿಗೆ

ಆದರೆ, ಕೆಲವು ಜಾಗತಿಕ ಮಾದರಿಗಳು, ವಿಶೇಷವಾಗಿ ಇತರ ಕೆಲವು ಸೂಚನೆಯಂತೆ, ಕೇರಳಕ್ಕೆ ಮುಂಗಾರು ಮೇ ಕೊನೆಯ ವಾರದಲ್ಲೇ ತಲುಪುವ ಸಾಧ್ಯತೆ ಇದೆ. ಐಎಂಡಿ ಇನ್ನೂ ಅಧಿಕೃತವಾಗಿ ಆರಂಭಿಕ ಆರಂಭವನ್ನು ಘೋಷಿಸದಿದ್ದರೂ, ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್ಕಾಸ್ಟ್ಸ್  ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಹವಾಮಾನ ಮಾದರಿಗಳು, ಮೇ ಕೊನೆಯ ವಾರದ ವೇಳೆಗೆ ಮಾನ್ಸೂನ್ ಕೇರಳವನ್ನು ತಲುಪಬಹುದು ಎಂದು ಸೂಚಿಸುತ್ತವೆ.

ಎಚ್ಚರಿಕೆ: ಬೇಗ ಬಂದರೂ ವೇಗ ಕಡಿಮೆ ಆಗಬಹುದು : ತಜ್ಞರ ಪ್ರಕಾರ, ಮುಂಗಾರು ಬೇಗ ಆರಂಭವಾದರೂ ದೇಶದಾದ್ಯಂತ ಅದರ ಪ್ರಗತಿ ನಿಧಾನವಾಗುವ ಸಾಧ್ಯತೆ ಇದೆ. ಗಾಳಿಯ ಮಾದರಿ ಮತ್ತು ಸಮುದ್ರ ತಾಪಮಾನ ಇದಕ್ಕೆ ಕಾರಣವಾಗಬಹುದು.

 ಎಲ್ ನಿನೊ ಪ್ರಭಾವ : ಜುಲೈ ವೇಳೆಗೆ ಎಲ್ ನಿನೊ (El Niño) ಪರಿಸ್ಥಿತಿ ಬೆಳೆಯುವ ಸಾಧ್ಯತೆ ಹೀಗಾಗಿ  ಮಳೆ ಅಸ್ಥಿರವಾಗುವ ಸಾಧ್ಯತೆ ಇದೆ. ಆದರೆ ಕೆಲವು ಪ್ರದೇಶಗಳಲ್ಲಿ ಬರದಂತಹ ಪರಿಸ್ಥಿತಿ ಉಂಟಾಗಬಹುದು.

ಕೃಷಿಗೆ ಪರಿಣಾಮ ಏನು? : ಮುಂಗಾರು ಭಾರತಕ್ಕೆ ಅತ್ಯಂತ ಮಹತ್ವದ್ದು, ಅದರಲ್ಲೂ ಕೃಷಿ ಕ್ಷೇತ್ರಕ್ಕೆ ನೈಋತ್ಯ ಮುಂಗಾರು ಅತ್ಯಂತ ಪ್ರಮುಖವಾಗಿದೆ. ದೇಶದ ವಾರ್ಷಿಕ ಮಳೆಯ 70% ಈ ಅವಧಿಯಲ್ಲೇ ಬರುತ್ತದೆ ಹೀಗಾಗಿ ಖಾರಿಫ್ ಬೆಳೆಗಳು ಸಂಪೂರ್ಣವಾಗಿ ಮಳೆಯ ಮೇಲೆ ಅವಲಂಬಿತವಾಗಿದೆ. ಜಲಾಶಯಗಳು, ವಿದ್ಯುತ್ ಉತ್ಪಾದನೆ, ಗ್ರಾಮೀಣ ಆರ್ಥಿಕತೆ ಮೇಲೆ ಕೂಡಾ ಮಳೆ ಪರಿಣಾಮ ಬೀರಬಹುದು.  ಕಡಿಮೆ ಮಳೆಯಾದರೆ ರೈತರಿಗೆ ಸವಾಲು ಹೆಚ್ಚಾಗುವ ಸಾಧ್ಯತೆ ಇದೆ.

ಪೂರ್ವ ಮಳೆಯ ರಿಲೀಫ್ :  ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆಯು ಕೆಲವು ಭಾಗಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು, ತೀವ್ರ ಬಿಸಿಲಿನಿಂದ ಸ್ವಲ್ಪ ಮಟ್ಟಿನ ಪರಿಹಾರ ಸಿಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

IMD forecasts below-normal monsoon rainfall (92% of LPA) for 2026. While monsoon may arrive early in Kerala, El Niño conditions could affect rainfall distribution, impacting agriculture and water resources.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

8 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

17 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

17 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

18 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

1 day ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

1 day ago