Advertisement
ಸುದ್ದಿಗಳು

ಮಳೆಗಾಲವೂ ಬೇಸಿಗೆಯಷ್ಟೇ ಅಪಾಯಕಾರಿ..? ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿದೆ ‘ಹೀಟ್‌ ಸ್ಟ್ರೆಸ್‌’ ಆತಂಕ

Share

ಭಾರತದಲ್ಲಿ ಮಳೆಗಾಲ ಎಂದರೆ ಬೇಸಿಗೆಯ ಬಿಸಿಲಿನಿಂದ ನಿರಾಳತೆ ಎಂಬ ಕಲ್ಪನೆ ಮುಂದಿನ ದಿನಗಳಲ್ಲಿ ಬದಲಾಗುವ ಸಾಧ್ಯತೆ ಇದೆ. ಹೊಸ ಅಧ್ಯಯನದ ಪ್ರಕಾರ, ಹವಾಮಾನ ಬದಲಾವಣೆಯ ಪರಿಣಾಮವಾಗಿ ಮಳೆಗಾಲದಲ್ಲಿಯೂ ಅಪಾಯಕಾರಿ ಮಟ್ಟದ ‘ಅನ್‌ಕಂಪೆನ್ಸಬಲ್‌ ಹೀಟ್‌ ಸ್ಟ್ರೆಸ್‌’ (Uncompensable Heat Stress – UHS) ಉಂಟಾಗುವ ಸಾಧ್ಯತೆ ಹೆಚ್ಚುತ್ತಿದೆ.

ಐಐಟಿ ಗಾಂಧಿನಗರ, ಸ್ಟ್ಯಾನ್‌ಫೋರ್ಡ್‌ ಮತ್ತು ಪರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ 1979ರಿಂದ 2021ರವರೆಗಿನ ಹವಾಮಾನ ಅಂಕಿ-ಅಂಶಗಳು ಮತ್ತು ಭವಿಷ್ಯದ ಹವಾಮಾನ ಮಾದರಿಗಳನ್ನು ವಿಶ್ಲೇಷಿಸಲಾಗಿದೆ. ಇದರ ಪ್ರಕಾರ, ಕಳೆದ ನಾಲ್ಕು ದಶಕಗಳಲ್ಲಿ ಭಾರತದಲ್ಲಿ ತೀವ್ರ ಹೀಟ್‌ ಸ್ಟ್ರೆಸ್‌ನ ಪ್ರಮಾಣ ಮತ್ತು ವ್ಯಾಪ್ತಿ ಗಮನಾರ್ಹವಾಗಿ ಹೆಚ್ಚಿದೆ.

ಏನಿದು ಅನ್‌ಕಂಪೆನ್ಸಬಲ್‌ ಹೀಟ್‌ ಸ್ಟ್ರೆಸ್‌? :  ಮಾನವ ದೇಹವು ಬೆವರಿನ ಮೂಲಕ ತನ್ನ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಆದರೆ ಉಷ್ಣಾಂಶ ಮತ್ತು ತೇವಾಂಶ ಎರಡೂ ಅಧಿಕವಾಗಿರುವಾಗ ದೇಹಕ್ಕೆ ತಂಪಾಗುವ ಸಾಮರ್ಥ್ಯ ಕುಗ್ಗುತ್ತದೆ. ಈ ಸ್ಥಿತಿಯನ್ನೇ ಅನ್‌ಕಂಪೆನ್ಸಬಲ್‌ ಹೀಟ್‌ ಸ್ಟ್ರೆಸ್‌ ಎಂದು ಕರೆಯಲಾಗುತ್ತದೆ. ಇದು ಹೀಟ್‌ ಸ್ಟ್ರೋಕ್‌, ಅಂಗ ವೈಫಲ್ಯ ಹಾಗೂ ಸಾವಿಗೂ ಕಾರಣವಾಗಬಹುದು.

ಮಳೆಗಾಲದಲ್ಲೂ ಹೆಚ್ಚುವ ಅಪಾಯ :  ಪ್ರಸ್ತುತ ಬೇಸಿಗೆಯಲ್ಲಿ ಭಾರತದ ಸುಮಾರು 8% ಭೂಪ್ರದೇಶ ಈ ಸಮಸ್ಯೆಗೆ ಒಳಗಾಗುತ್ತಿದೆ. ಆದರೆ ಜಾಗತಿಕ ತಾಪಮಾನವು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಏರಿದರೆ, ಬೇಸಿಗೆಯಲ್ಲಿ 60% ಮತ್ತು ಮಳೆಗಾಲದಲ್ಲಿ 53% ಪ್ರದೇಶಗಳು ಹೀಟ್‌ ಸ್ಟ್ರೆಸ್‌ ಅಪಾಯಕ್ಕೆ ಒಳಗಾಗಬಹುದು ಎಂದು ಅಧ್ಯಯನ ಎಚ್ಚರಿಸಿದೆ.

ಮಳೆಗಾಲದಲ್ಲಿ ತಾಪಮಾನ ತುಸು ಕಡಿಮೆಯಿದ್ದರೂ ತೇವಾಂಶ ತುಂಬಾ ಹೆಚ್ಚಾಗಿರುವುದರಿಂದ ಬೆವರು ಆವಿಯಾಗುವುದಿಲ್ಲ. ಪರಿಣಾಮವಾಗಿ ದೇಹದ ಉಷ್ಣತೆ ಕಡಿಮೆಯಾಗದೇ ಅಪಾಯಕಾರಿ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ರೈತರು ಮತ್ತು ಕಾರ್ಮಿಕರ ಮೇಲೆ ಪರಿಣಾಮ :  ಹೊಲಗಳಲ್ಲಿ ಕೆಲಸ ಮಾಡುವ ರೈತರು, ಕೃಷಿ ಕಾರ್ಮಿಕರು, ನಿರ್ಮಾಣ ಕಾರ್ಮಿಕರು ಹಾಗೂ ಹೊರಾಂಗಣ ಉದ್ಯೋಗಿಗಳ ಮೇಲೆ ಈ ಬದಲಾವಣೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ದೀರ್ಘಕಾಲದ ಹೀಟ್‌ ಸ್ಟ್ರೆಸ್‌ ಕೃಷಿ ಉತ್ಪಾದಕತೆ, ಕಾರ್ಮಿಕರ ಕಾರ್ಯಕ್ಷಮತೆ ಹಾಗೂ ಗ್ರಾಮೀಣ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

80 ಕೋಟಿ ರಿಂದ 120 ಕೋಟಿ ಜನರಿಗೆ ಅಪಾಯ : ಅಧ್ಯಯನದ ಪ್ರಕಾರ ವಿವಿಧ ತಾಪಮಾನ ಏರಿಕೆ ಸನ್ನಿವೇಶಗಳಲ್ಲಿ ಭಾರತದಲ್ಲಿ 80 ಕೋಟಿ ರಿಂದ 120 ಕೋಟಿ ಜನರು ಹೀಟ್‌ ಸ್ಟ್ರೆಸ್‌ಗೆ ಒಳಗಾಗುವ ಸಾಧ್ಯತೆ ಇದೆ. ಗಂಗಾ ಕಣಿವೆ ಪ್ರದೇಶ, ವಾಯವ್ಯ ಭಾರತ ಮತ್ತು ಪೂರ್ವ ಕರಾವಳಿ ಭಾಗಗಳು ಪ್ರಮುಖ ಅಪಾಯ ವಲಯಗಳಾಗಿ ಗುರುತಿಸಲಾಗಿದೆ.

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

A new climate study warns that India’s monsoon season could become nearly as dangerous as summer due to rising humidity and temperatures. Researchers project that under a 2°C warming scenario, uncompensable heat stress may affect 53% of India’s land area during the monsoon, posing serious risks to farmers, outdoor workers, public health, and productivity.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

4 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

15 hours ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

19 hours ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

1 day ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

1 day ago

ಮಳೆ ಬಂದರೂ ಬಿಸಿ ಕಾಡಲಿದೆ…! ರೈತರ ಕೆಲಸದ ಸಮಯವನ್ನೇ ಬದಲಿಸಬಹುದಾದ ಹೊಸ ಹವಾಮಾನ ಅಪಾಯ

ಜಾಗತಿಕ ತಾಪಮಾನ ಏರಿಕೆಯಿಂದ ಭಾರತದ ಮಳೆಗಾಲದಲ್ಲೂ ಹೆಚ್ಚಿನ ತೇವಾಂಶದೊಂದಿಗೆ ಅಪಾಯಕಾರಿ ಬಿಸಿ ಒತ್ತಡ…

1 day ago