Advertisement
ಸುದ್ದಿಗಳು

ವಿಶ್ವದ ಟಾಪ್​ 20 ಕಲುಷಿತ ನಗರಗಳ ಪಟ್ಟಿ ಬಿಡುಗಡೆ | ಕಲುಷಿತಗೊಂಡ ಭಾರತದ 14 ನಗರಗಳು…! |

Share

ಈಗಂತೂ ನಗರ ಪ್ರದೇಶಗಳಲ್ಲಿ ಗಾಳಿ ಎಷ್ಟರ ಮಟ್ಟಿಗೆ ಮತ್ತು ಎಷ್ಟು ವೇಗವಾಗಿ ಕಲುಷಿತವಾಗುತ್ತಿದೆ ಎಂದರೆ, ಜನರು ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಮುಖಕ್ಕೆ ಮಾಸ್ಕ್  ಧರಿಸಿಕೊಂಡು ಹೋದರೆ ಒಳ್ಳೆಯದು ಅಂತ ಅವರಿಗೆ ಅನ್ನಿಸಲು ಶುರುವಾಗಿದೆ. ದಿನೇ ದಿನೇ ರಸ್ತೆಯ ಮೇಲೆ ವಾಹನ ದಟ್ಟಣೆ ಜಾಸ್ತಿ ಆಗುತ್ತಿದ್ದು, ಅವುಗಳು ಬಿಡುವ ಹೊಗೆಯು ಗಾಳಿಯಲ್ಲಿ ಹೋಗಿ ಸೇರಿಕೊಳ್ಳುತ್ತಿದೆ ಮತ್ತು ಖಾಲಿ ಇರುವ ಸೈಟ್ ಗಳಲ್ಲಿ ಜನರು ಈ ಕಸವನ್ನು ರಾಶಿ ರಾಶಿ ಹಾಕಿ ಅದಕ್ಕೆ ಬೆಂಕಿ ಹಚ್ಚುವುದರಿಂದ ಆ ಹೊಗೆಯು ಸಹ ನಮ್ಮ ಗಾಳಿಯಲ್ಲಿ ಸೇರಿಕೊಳ್ಳುತ್ತಿದೆ. ಇಷ್ಟೇ ಅಲ್ಲದೆ ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಮತ್ತು ವಾಹನಗಳ ಟಯರ್ ಗಳನ್ನು ಸುಡುವುದು ಇವೆಲ್ಲವೂ ನಾವು ತೆಗೆದುಕೊಳ್ಳುವ ಗಾಳಿಯನ್ನು ಕಲುಷಿತಗೊಳಿಸುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

Advertisement
Advertisement
Advertisement

ವಿಶ್ವದ 20 ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿಯಲ್ಲಿ 14 ನಗರಗಳು ಭಾರತದ ದೇಶಕ್ಕೆ ಸೇರಿವೆ ಎನ್ನುವುದು ಆಘಾತಕಾರಿ ವಿಷಯವಾಗಿದೆ. ಮಾಲಿನ್ಯ ಎಲ್ಲಾ ಕಡೆ ವಿಪರೀತವಾಗುತ್ತಿದೆ. ವಿಶ್ವದ 20 ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿಯಲ್ಲಿ 14 ನಗರಗಳು ಭಾರತದ ದೇಶಕ್ಕೆ ಸೇರಿವೆ ಎನ್ನುವುದು ಆಘಾತಕಾರಿ ವಿಷಯವಾಗಿದೆ. ಈ ವರದಿ ದೇಶದಲ್ಲಿ ಮಾಲಿನ್ಯದ ಸ್ಥಿತಿಯನ್ನು ತೋರಿಸುತ್ತಿದ್ದು, ಈ ವಿಚಾರದಲ್ಲಿ ಎಚ್ಚರಿಕೆ ವಹಿಸದಿದ್ದರೆ ಮುಂದೆ ತೊಂದರೆಯಾಗಲಿದೆ ಎಂಬ ಎಚ್ಚರಿಕೆ ರವಾನಿಸಿದಂತಿದೆ. ಚಾಡ್, ಇರಾಕ್, ಪಾಕಿಸ್ತಾನ, ಬಹ್ರೇನ್ ಮತ್ತು ಬಾಂಗ್ಲಾದೇಶವು ವಿಶ್ವದ ಅತ್ಯಂತ ಕಲುಷಿತ ದೇಶಗಳಾಗಿವೆ. ಭಾರತ ಎಂಟನೇ ಸ್ಥಾನದಲ್ಲಿದೆ. ವಾಯುಮಾಲಿನ್ಯ ಸೂಚ್ಯಂಕದಲ್ಲಿ ಹಿಂದಿನ ವರ್ಷಕ್ಕಿಂತ ಮೂರು ಸ್ಥಾನಗಳನ್ನು ಸುಧಾರಿಸಿದರೂ ಕೂಡ, 2022 ರಲ್ಲಿ ಭಾರತದ ಮಾಲಿನ್ಯ ಸ್ಥಿತಿ ಕೆಟ್ಟದಾಗಿದೆ ಎಂದು ವರದಿ ಹೇಳಿದೆ. ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ IQAir ವರದಿ ಪ್ರಕಾರ ವಿಶ್ವದ 20 ಕಲುಷಿತ ನಗರಗಳ ಪಟ್ಟಿಯನ್ನೂ ಪ್ರಕಟಿಸಿದ್ದು, ಇದರಲ್ಲಿ ಭಾರತದ 14 ನಗರಗಳು ಸ್ಥಾನ ಪಡೆದಿದೆ.

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

2 hours ago

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

8 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

9 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

1 day ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

1 day ago