ರೂರಲ್ ಮಿರರ್ ಪ್ರಕಾಶನದ ಕೊರೋನಾ ಸಮಯದ ಪಾಸಿಟಿವ್ ಸಂಗತಿಗಳ ಬಗೆಗಿನ ಹಿರಿಯ ಬರಹಗಾರ , ಪತ್ರಕರ್ತ ನಾ.ಕಾರಂತ ಪೆರಾಜೆ ಅವರು ಬರೆದಿರುವ “ಮುಸ್ಸಂಜೆಯ ಹೊಂಗಿರಣ” ಪುಸ್ತಕ ಬಿಡುಗಡೆಯಾಗಿದೆ. ಈಗಾಗಲೇ ಉತ್ತಮ ಪ್ರತಿಕ್ರಿಯೆ ಬಂದಿರುವ ಈ ಪುಸ್ತಕ ಇದೀಗ ಆನ್ ಲೈನ್ ಮೂಲಕವೂ ಖರೀದಿಗೆ ಅವಕಾಶ ಮಾಡಲಾಗಿದ್ದು, ಆಸಕ್ತರು ಖರೀದಿ ಮಾಡಬಹುದಾಗಿದೆ. ಕೆಳಗಿನ ಫೋಟೋದಲ್ಲಿ ಈ ಬಗ್ಗೆ ವಿವರ ನೀಡಲಾಗಿದೆ.
ಪುಸ್ತಕದ ಬಗ್ಗೆ ಡಾ . ಬಿ .ಎ . ವಿವೇಕ ರೈ ಅವರು ಹೀಗೆ ಹೇಳಿದ್ದಾರೆ,
ಕೊರೋನ ಉಂಟುಮಾಡಿದ ಬಹುರೂಪಿ ಪಾಸಿಟಿವ್ ಪರಿಣಾಮಗಳನ್ನು ನೈಜ ಘಟನೆಗಳ ನಿದರ್ಶನಗಳ ಮೂಲಕ ಮನಮುಟ್ಟುವಂತೆ ವರ್ಣಿಸಿದ್ದೀರಿ . ಈ ಪುಸ್ತಕದ ಒಂದೊಂದು ಕಿರು ಕಥನವೂ ಬದುಕು ಕಟ್ಟುವ ಒಂದೊಂದು ಸಾಹಸಗಾಥೆಯಾಗಿದೆ . ಸಂಕಷ್ಟದ ಕಾಲದಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ , ಹೊಸ ಬದುಕನ್ನು ಕಟ್ಟಬಹುದು ಎಂದು ಮಾಡಿ ತೋರಿಸಿದ ಜನರು ನಮಗೆ ನಿಜವಾದ ಮಾರ್ಗದರ್ಶಕರಾಗಿದ್ದಾರೆ . ನೂರು ಉಪದೇಶಗಳಿಗಿಂತ ಇಂತಹ ಒಂದು ದಿಟ್ಟಹೆಜ್ಜೆ ಹೆಚ್ಚು ಆತ್ಮವಿಶ್ವಾಸವನ್ನು ಉಂಟುಮಾಡುತ್ತದೆ . ಬದುಕನ್ನು ಹೊಸತಾಗಿ ಕಟ್ಟುವವರು , ಹಳ್ಳಿಗಳ ನೈಸರ್ಗಿಕ ಸುಖವನ್ನು ಅರಸುವವರು , ಕೃಷಿಯ ಮೂಲಕ ಜೀವನಪ್ರೀತಿಯನ್ನು ಬೆಳೆಸಿಕೊಳ್ಳುವವರು , ಸಾವಯವ ಸಾಮೂಹಿಕ ಜೀವನಕ್ಕೆ ಒಲಿಯುವವರು ಓದಬೇಕಾದ ಪುಸ್ತಕ ‘ ಮುಸ್ಸಂಜೆಯ ಹೊಂಗಿರಣ ‘ . ಅದು ಗಾತ್ರದಲ್ಲಿ ಕಿರಿದಾದುದು , ಸೂತ್ರದಲ್ಲಿ ಹಿರಿದಾದುದು .
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…