ದೇಶದಲ್ಲಿ ರಬ್ಬರ್(Rubber) ಬೆಲೆ ಕುಸಿಯುತ್ತಿದೆ. ಅದಲ್ಲೂ ರಬ್ಬರ್ ಲ್ಯಾಟೆಕ್ಸ್ ದರ ಗಣನೀಯವಾಗಿ ಇಳಿಕೆ ಕಂಡಿದೆ. ಪ್ರತಿ ಕೆಜಿಗೆ 185 ರೂ.ಗೆ ತಲುಪಿದ್ದ ರಬ್ಬರ್ ಲ್ಯಾಟೆಕ್ಸ್ (Latex) ದರ ಈಗ ಗಣನೀಯವಾಗಿ ಕುಸಿತ ಕಂಡಿದೆ. ರಬ್ಬರ್ ಶೀಟ್ ಧಾರಣೆಯೂ ಇಳಿಕೆಯ ಹಾದಿಯಲ್ಲಿಯೇ ಇದೆ. ಹೀಗಾಗಿ ರಬ್ಬರ್ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನು ರಬ್ಬರ್ ಉತ್ಪಾದನೆಯ ಸಮಯವಾದ್ದರಿಂದ ಬೆಳೆಗಾರರು ಈಗಾಗಲೇ ಕೇರಳದಲ್ಲಿ ಪ್ರತಿಭಟನೆಯ ಹಾದಿಯಲ್ಲಿದ್ದಾರೆ.
ಈ ಹಿಂದೆ ಕೇರಳ ಸೇರಿದಂತೆ ವಿವಿದೆಡೆ ರಬ್ಬರ್ ಶೀಟ್‌ಗಳನ್ನು ಮಾರಾಟ ಮಾಡುವ ಬದಲು, ಅನೇಕ ರೈತರು ಲ್ಯಾಟೆಕ್ಸ್ ಮೂಲಕ ರಬ್ಬರ್ ಮಾರಾಟ ಮಾಡುತ್ತಿದ್ದರು. ವೆಚ್ಚಗಳ ಕೊರತೆಯ ನಿರ್ವಹಣೆಯನ್ನು ಮಾಡುವ ಉದ್ದೇಶದಿಂದ ಹಾಗೂ ರಬ್ಬರ್ ಲ್ಯಾಟೆಕ್ಸ್‌ಗೆ ಬೇಡಿಕೆ ಇದ್ದುದರಿಂದಲೂ ಬೆಳೆಗಾರರು ಈ ಮಾರ್ಗವನ್ನು ಅನುಸರಿಸಿದ್ದರು. ಆದರೆ ಇದೀಗ ಗಣನೀಯವಾಗಿ ರಬ್ಬರ್ ಲ್ಯಾಟೆಕ್ಸ್ ಹಾಗೂ ರಬ್ಬರ್ ಶೀಟ್ ಧಾರಣೆ ಇಳಿಕೆಯಾಗಿದೆ.
ಕೊರೋನಾ ಸಮಯದಲ್ಲಿ ಮಾಸ್ಕ್ ಹಾಗೂ ಗ್ಲೌಸ್‌ಗಳ ಅಗತ್ಯ ಹಾಗೂ ಬೇಡಿಕೆ ಹೆಚ್ಚಾಗಿತ್ತು. ಈ ಸಂದರ್ಭ ರಬ್ಬರ್ ಲ್ಯಾಟೆಕ್ಸ್ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಲ್ಯಾಟೆಕ್ಸ್ ಬೇಡಿಕೆ ಹಾಗೂ ಬೆಲೆ ಹೆಚ್ಚಾಗಿತ್ತು. ಕೊರೋನಾ ನಂತರ ಲ್ಯಾಟೆಕ್ಸ್‌ನ ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಯಿತು ಮತ್ತು ಆದ್ದರಿಂದ ಈಗ ಲಾಟೆಕ್ಸ್ ಬೇಡಿಕೆ ಕಡಿಮೆಯಾಯಿತು. ಈಗ ರಬ್ಬರ್ ಶೀಟ್ ಧಾರಣೆಯೂ ಇಲ್ಲವಾಗಿರುವುದು ಬೆಳೆಗಾರರಿಗೆ ಸಂಕಷ್ಟ ತಂದಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…