Advertisement
MIRROR FOCUS

ನಾಡಹಬ್ಬ ನವರಾತ್ರಿ ಆರಂಭ…

Share
ಹಬ್ಬಗಳು ನಮ್ಮ ಜೀವನದ ಓಗಕ್ಕೆ ಅಮೃತವಿದ್ದಂತೆ. ನಿತ್ಯದ ಕೆಲಸಗಳ ಜಂಜಾಟಗಳಿಗೆ ಒಂದು ಬದಲಾವಣೆ ಈ ಹಬ್ಬಗಳು. ಅದರಲ್ಲಿಯೂ ನವರಾತ್ರಿಯೆಂದರೆ ನಾಡಹಬ್ಬ. ಶಾಲಾ ಮಕ್ಕಳಿಗೆ ವಾರ್ಷಿಕೋತ್ಸವದ ಸಡಗರದಂತೆ. ನಿರಂತರ ಒಂಬತ್ತು ದಿನಗಳ ಗೌಜಿ ಸಂಭ್ರಮ. ನವ ಎಂದರೆ ಒಂಬತ್ತು. ಹೆಸರಿನಂತೆ‌ ಒಂಬತ್ತು ದಿನಗಳ ಆಚರಣೆ. ಪ್ರತಿಯೊಂದು ದಿನವೂ ವಿಶೇಷವೇ. ಪ್ರಕೃತಿಯೆಂದರೆ‌ ಮಾತೆ. ನಮ್ಮನ್ನು ಪೊರೆಯುವಾಕೆ. ಕಷ್ಟಕ್ಕೆ ದನಿಯಾಗುವಾಕೆ. ಆಕೆಯ ವಿವಿಧ ರೂಪಗಳ ಆರಾಧನೆಯೇ ಈ ನವರಾತ್ರಿಯ ಆಚರಣೆ.

ದೇವಸ್ಥಾನಗಳಲ್ಲಿ ಹಲವು ಆಚರಣೆಗಳೊಂದಿಗೆ, ಸಾಂಪ್ರದಾಯಿಕವಾಗಿ ದೇವಿಯ ಆರಾಧನೆ ಮಾಡಲಾಗುತ್ತದೆ. ಕೆಲವೊಂದು ಮನೆಗಳಲ್ಲೂ ಒಂಬತ್ತು ದಿನಗಳ ಪೂಜೆ ಹಾಗೂ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬಂದವರಿದ್ದಾರೆ. ಮನೆಯ ಹಿರಿಯರು ಅನುಸರಿಸಿದ ಪದ್ಧತಿ ಗಳನ್ನು ಮುಂದುವರಿಸುವ ಗುರುತರವಾದ ಜವಾಬ್ದಾರಿ ಕಿರಿಯರ ಮೇಲಿರುತ್ತದೆ. ತಲತಲಾಂತರಗಳಿಂದ ಪರಿಪಾಲಿಸಿಕೊಂಡು ಬಂದ ಹಬ್ಬ ಹರಿದಿನಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ವಾಗಿದೆ.

ನವರಾತ್ರಿಯ ಆಚರಣೆ ಮಾಡುವಾಗ ನಿಷ್ಠೆ, ಉಪವಾಸ ವ್ರತಗಳೊಂದಿಗೆ ಶ್ರದ್ಧೆಯನ್ನೂ ಅಗತ್ಯವಾಗಿ ಪಾಲಿಸಬೇಕಾಗುತ್ತದೆ.
ನವರಾತ್ರಿ ಹಬ್ಬದ ಸಮಯದಲ್ಲಿ ದೇವಿಯ ಶಕ್ತಿ ಸಾವಿರ ಪಟ್ಟು ಹೆಚ್ಚಿರುವುದರಿಂದ ಆರಾಧನೆಗೇ ಮಹತ್ವ. ಅರ್ಚನೆ, ಪೂಜೆ, ಪರಾಯಣ, ಭಜನೆಗಳನ್ನು ಭಕ್ತಿಯಿಂದ ಮಾಡುವುದರಿಂದ ದೇವರ ಪ್ರೀತಿಗೆ ಪಾತ್ರರಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಅಭೀಷ್ಠಗಳೇನೇ ಇದ್ದರು ದೇವರು ಈಡೇರಿಸದೆ ಬಿಡರು. ಸಂಪೂರ್ಣ ಶರಣಾಗತಿಯೇ ದೇವರನ್ನು ಒಲಿಸಿಕೊಳ್ಳಲಿರುವ ಏಕೈಕ ಮಾರ್ಗ. ನವರಾತ್ರಿಯ ಸುಸಂದರ್ಭದಲ್ಲಿ ದೇವರ ಆರಾಧನೆಯಲ್ಲಿ ಪಾಲ್ಗೊಳ್ಳೋಣ.

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ

ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಪ್ರಗತಿ ಮೌಲ್ಯಮಾಪನದಲ್ಲಿ ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಮೊದಲ…

9 hours ago

ಬರಗಾಲದಲ್ಲೂ ಬೆಳೆ ಉಳಿಸಿದ ಸಾವಯವ ಕೃಷಿ – ಸಾವಯವ ಕೃಷಿ ಅಬ್ಬರಿಸಿ ಬರುವುದಿಲ್ಲ- ಮುಗ್ಗರಿಸಿ ಬೀಳುವುದಿಲ್ಲ..!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಸಾವಯವ ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಾಳ…

13 hours ago

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…

1 day ago

ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…

1 day ago

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

2 days ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

2 days ago