ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಅಧಿಕಾರಕ್ಕೆ ಅಂಟಿಕೊಂಡು ದೇಶದ ಕುರಿತ ಗಂಭೀರ ಚಿಂತನೆಗಳನ್ನು ಮಾಡಿಕೊಂಡು ಅದಕ್ಕಷ್ಟೇ ಸೀಮಿತವಾದವರಲ್ಲ. ಪ್ರತಿಯೊಬ್ಬ ನಾಗರೀಕನ ಜೊತೆ ಕನೆಕ್ಟ್ ಆಗಲು ಪ್ರಯತ್ನ ಪಡುತ್ತಾರೆ. ಹಳ್ಳಿಯ ಸಾಧಕರಿರಲಿ, ವಿದ್ಯಾರ್ಥಿಗಳಿರಲಿ, ಯಾವ ಕ್ಷೇತ್ರವಾದರೂ ಸೈ ತಮ್ಮ ಗಮನಕ್ಕೆ ಬಂದ್ರೆ ಒಂದು ಕಮೆಂಟ್, ಒಂದು ಕರೆ, ಒಂದು ಸನ್ಮಾನ, ಇಲ್ಲ ಅಸಾಮಾನ್ಯರ ಬಗ್ಗೆ ಉಲ್ಲೇಖ ಮಾಡುವುದನ್ನು ಮರೆಯಲ್ಲ.
ಅದರಲ್ಲೂ ಮೋದಿ ಅವರಿಗೆ ಕ್ರೀಡೆ ಬಗ್ಗೆ ವಿಶೇಷ ಕಾಳಜಿ. ಇದೀಗ ಗುಜರಾತ್‌ನ ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ಕೊನೆಯ ಪಂದ್ಯವನ್ನು ಮಾರ್ಚ್ 9ರಂದು ಪ್ರಧಾನಿ ಮೋದಿ ವೀಕ್ಷಿಸಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸದ್ಯ ಭಾರತ ಪ್ರವಾಸದಲ್ಲಿದ್ದು, ಅವರು ಪ್ರಧಾನಿ ಜೊತೆ ಪಂದ್ಯ ವೀಕ್ಷಿಸಲಿದ್ದಾರೆ.
ಕೆಲವು ಮಾಹಿತಿಯ ಪ್ರಕಾರ, 4ನೇ ಟೆಸ್ಟ್ ಪಂದ್ಯದಲ್ಲಿ ಪ್ರಧಾನಿ ಮೋದಿಯವರು ಪಂದ್ಯದ ವೀಕ್ಷಕ ವಿವರಣೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಇನ್ನೊಂದು ವಿಶೇಷತೆ ಎಂದರೆ, ನರೇಂದ್ರ ಮೋದಿಯವರು ತಮ್ಮ ಹೆಸರಿನ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಆಗಮಿಸುತ್ತಿರುವುದು ಇದೇ ಮೊದಲು.
ವೀಕ್ಷಕ ವಿವರಣೆ ನೀಡುತ್ತಾರಾ ಪ್ರಧಾನಿ ಮೋದಿ? : ಪ್ರಧಾನಿ ಮೋದಿ ನಾಲ್ಕು ದಿನಗಳ ಕಾಲ ತವರು ರಾಜ್ಯದಲ್ಲಿಯೇ ಇರಲಿದ್ದಾರೆ. ಮಾರ್ಚ್ 8 ರಂದು ಬೆಳಗ್ಗೆ 8 ಗಂಟೆಗೆ ಗುಜರಾತ್ ತಲುಪಲಿದ್ದು, ಅಲ್ಲಿಂದ ಆಸ್ಟ್ರೇಲಿಯಾ ಪ್ರಧಾನಿ ಜೊತೆ ಸ್ಟೇಡಿಯಂ ತಲುಪಲಿದ್ದಾರೆ. ಟಾಸ್ ವೇಳೆ ಮೋದಿ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಪಂದ್ಯದ ವೇಳೆ ಮೋದಿ ಕಾಮೆಂಟರಿ ಮಾಡುವುದನ್ನು ಸಹ ನೋಡಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಭಾರತ ಪ್ರಸ್ತುತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಕೊನೆಯ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಇತ್ತ ಕೊನೆಯ ಟೆಸ್ಟ್ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾವು 4ನೇ ಟೆಸ್ಟ್ ಗೆದ್ದು, ಸರಣಿಯನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಲಿದೆ. ಹೀಗಾಗಿ ಅಹಮದಾಬಾದ್‌ನಲ್ಲಿ ನಡೆಯಲಿರುವ ಈ ಪಂದ್ಯ ಕುತೂಹಲ ಮೂಡಿಸಿದೆ. ಅಲ್ಲದೆ ಈ ಪಂದ್ಯವನ್ನು ಇನ್ನಷ್ಟು ವಿಶೇಷಗೊಳಿಸಲು ಭಾರತ ಮತ್ತು ಆಸ್ಟ್ರೇಲಿಯಾದ ಪ್ರಧಾನಿಗಳು ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಪಸ್ಥಿತರಿರಲಿದ್ದಾರೆ.
ಆಸೀಸ್ಗೆ ಸರಣಿ ಡ್ರಾ ಮಾಡಿಕೊಳ್ಳುವ ಹಂಬಲ : ನಾಲ್ಕು ಪಂದ್ಯಗಳ ಸರಣಿಯ ಮೊದಲೆರಡು ಟೆಸ್ಟ್‌ಗಳನ್ನು ಮೂರು ದಿನಗಳ ಅಂತರದಲ್ಲಿ ಸೋತ ನಂತರ ಬಾರ್ಡರ್-ಗವಾಸ್ಕರ್ ಸರಣಿಯನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಇಂದೋರ್ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪುನರಾಗಮನ ಮಾಡಿದೆ. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದ ಸ್ಟೀವ್ ಸ್ಮಿತ್, ತಂಡಕ್ಕೆ ಸರಣಿಯಲ್ಲಿ ಮೊದಲ ಜಯ ತಂದುಕೊಟ್ಟಿದ್ದಾರೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಟೀಂ ಇಂಡಿಯಾವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿದ ಕಾಂಗರೂಗಳು ಈಗ ಮುಂದಿನ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ನೀಡಲು ಎದುರು ನೋಡಿತ್ತಿದ್ದಾರೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…