ವರ್ಷಕ್ಕೆ 15 ಕ್ಕಿಂತ ಹೆಚ್ಚು ಗ್ಯಾಸ್‌ ಸಿಲಿಂಡರ್‌ ಬೇಕಾದರೆ ದಾಖಲೆ ಅಗತ್ಯ |

September 29, 2022
6:41 PM

ಸರ್ಕಾರ ಈಗ ಗೃಹಬಳಕೆಯ ಅನಿಲ ಸಿಲಿಂಡರ್ ಗಳಿಗೆ ಕೋಟಾವನ್ನು ನಿಗದಿಪಡಿಸಿದೆ. ಆದರೆ ಹೆಚ್ಚುವರಿ ಗ್ಯಾಸ್‌ ಸಿಲಿಂಡರ್‌ ಅಗತ್ಯವಿದ್ದರೆ ದಾಖಲೆ ತೋರಿಸಬೇಕಾಗುತ್ತದೆ.  ಹೊಸ ಆದೇಶದ ಪ್ರಕಾರ, ಗೃಹಬಳಕೆಯ ಅನಿಲ ಗ್ರಾಹಕರು ಈಗ ವರ್ಷಕ್ಕೆ 15 ಬಾರಿ ಮಾತ್ರ ಗ್ಯಾಸ್ ಸಿಲಿಂಡರ್ ಗಳನ್ನು ರೀಫಿಲ್ ಮಾಡಲು ಸಾಧ್ಯವಾಗುತ್ತದೆ.  ಹೆಚ್ಚುವರಿ ಸಿಲಿಂಡರ್‌ಗಳನ್ನು ತೆಗೆದುಕೊಳ್ಳಲು ಸರಿಯಾದ ಕಾರಣವೇನು ಎಂಬುದನ್ನು ದಾಖಲೆಗಳ ಮೂಲಕ ತಿಳಿಸಬೇಕು.

ಒಂದು ವರ್ಷದಲ್ಲಿ 15 ಸಿಲಿಂಡರ್‌ಗಳ ರೀ ಫಿಲ್ಲಿಂಗ್ ನಿಗದಿಪಡಿಸಲಾಗಿದೆ., ಆದರೆ ಯಾರಾದರೂ ಹೆಚ್ಚಿನ ಸಿಲಿಂಡರ್‌ಗಳನ್ನು ತೆಗೆದುಕೊಳ್ಳಲು ಬಯಸಿದರೆ ಅದರ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ. ಇದಕ್ಕೆ ದಾಖಲೆಗಳನ್ನು ತೋರಿಸಬೇಕು. ಹೆಚ್ಚುವರಿ ಸಿಲಿಂಡರ್‌ಗಳನ್ನು ತೆಗೆದುಕೊಳ್ಳಲು ಸರಿಯಾದ ಕಾರಣವೇನು ಎಂಬುದನ್ನು ದಾಖಲೆಗಳ ಮೂಲಕ ತಿಳಿಸಬೇಕಾಗುತ್ತದೆ.

ಹೊಸ ನಿಯಮದ ಪ್ರಕಾರ ವರ್ಷದಲ್ಲಿ ಕೇವಲ 15 ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು ಎಂದು ಹೇಳಲಾಗಿದೆ, ಆದರೆ ಹೊಸ ನಿಯಮ ಅನ್ವಯಿಸಿದರೆ, ವರ್ಷದಲ್ಲಿ ಪ್ರತಿ ಪ್ರಕಾರದ ಒಟ್ಟು 15 ಗ್ಯಾಸ್ ಸಿಲಿಂಡರ್ ಅನ್ನು ಮಾತ್ರ ಬುಕ್ ಮಾಡಬಹುದು. ಸದ್ಯಕ್ಕೆ ಸಬ್ಸಿಡಿ ರಹಿತ ಸಿಲಿಂಡರ್‌ಗಳಿಗೆ ಯಾವುದೇ ಕೋಟಾ ನಿಗದಿಯಾಗಿಲ್ಲ. ಸಿಲಿಂಡರ್ ಮೇಲೆ ಸಬ್ಸಿಡಿ ತೆಗೆದುಕೊಳ್ಳದವರು ಎಷ್ಟು ಬೇಕಾದರೂ ಸಿಲಿಂಡರ್ ತೆಗೆದುಕೊಳ್ಳಬಹುದು. ಆದರೆ ಹೊಸ ನಿಯಮ ಜಾರಿಯಾದ ನಂತರ ಒಂದು ವರ್ಷದಲ್ಲಿ 15 ಸಿಲಿಂಡರ್ ಬುಕ್ಕಿಂಗ್ ಮಾಡಬಹುದಾಗಿದೆ. ಹೆಚ್ಚುವರಿ ಸಿಲಿಂಡರ್‌ಗಳನ್ನು ಯಾವ ಅಗತ್ಯಕ್ಕೆ ಕಾಯ್ದಿರಿಸಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಕೆಲವು ದಾಖಲೆಗಳನ್ನು ಸಹ ನೀಡಬೇಕಾಗಬಹುದು. ಪಡಿತರ ಚೀಟಿ, ಕುಟುಂಬದ ಸಂಖ್ಯೆ ಮುಂತಾದ ವಿವರಗಳ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ದಾಖಲೆಗಳನ್ನು ವಿತರಕರಿಗೆ ಸಲ್ಲಿಸಬೇಕು ಮತ್ತು ಅವರು ಅದನ್ನು ಪರಿಶೀಲಿಸುತ್ತಾರೆ ಮತ್ತು ಸಿಲಿಂಡರ್ ನೀಡುತ್ತಾರೆ. ಕಾಳಸಂತೆ ತಡೆಯಲು ಹಾಗೂ ಬಡವರಿಗೆ ಸಕಾಲಕ್ಕೆ ಸಿಲಿಂಡರ್‌ಗಳನ್ನು ಪೂರೈಸಲು ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬುದು ಇಲಾಖೆಯ ಮಾಹಿತಿ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?
September 12, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror