ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಬಿಲ್ಲಂಪದವು – ನೆಗಳಗುಳಿ ಶಾಲಾ ರಸ್ತೆಯು ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ ಪ್ರಧಾನಿ ಕಚೇರಿವರೆಗೂ ದೂರು ಹೋಗಿತ್ತು. ಪ್ರಧಾನಿ ಕಚೇರಿಯಿಂದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸೂಚನೆಯೂ ಬಂದಿತ್ತು. ಹಾಗಿದ್ದರೂ ರಸ್ತೆ ಸುಧಾರಣೆಯಾಗಿಲ್ಲ.
ಬಿಲ್ಲಂಪದವು – ನೆಗಳಗುಳಿ ಶಾಲಾ ರಸ್ತೆಯು ಅಲ್ಲಲ್ಲಿ ಕೆಟ್ಟು ಹೋದುದರಿಂದ ತುರ್ತು ಸಂದರ್ಭದಲ್ಲಿ ಯಾವುದೇ ವಾಹನದವರು ಈ ಬಾಗಕ್ಕೆ ಬರದಿರುವುದಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ.ಸುಮಾರು 50 ಮನೆಯವರಿಗೆ ಸಂಪರ್ಕದ ಏಕೈಕ ರಸ್ತೆ ಇದಾಗಿದ್ದು ಎಲ್ಲ ಜನರು ಈ ರಸ್ತೆಯನ್ನು ಅವಲಂಬಿಸುವಂತಾಗಿದೆ. ಮಳೆಗಾಲದಲ್ಲಿ ಅಗತ್ಯ ವಸ್ತುಗಳನ್ನು ತಲೆಯಲ್ಲಿ ಹೊತ್ತು ಕೊಂಡು ಹೋಗುವ ಪರಿಸ್ಥಿತಿ ಈ ಊರಿನವರದ್ದಾಗಿದೆ.
ಈ ಗ್ರಾಮೀಣ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ನೆಗಳಗುಳಿಯ ಯುವಕ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ರಸ್ತೆಯ ಸ್ಥಿತಿಗತಿಯ ಬಗ್ಗೆ ತಿಳಿಸಿ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ ಮನವಿ ಮಾಡಿದರು, ಈ ಮನವಿಯನ್ನು ಸ್ವೀಕರಿಸಿದ ಪ್ರಧಾನಮಂತ್ರಿ ಕಾರ್ಯಾಲಯವು ಜಿಲ್ಲಾ ಪಂಚಾಯತ್ ಮಂಗಳೂರಿಗೆ ಈ ರಸ್ತೆಯನ್ನು ತಕ್ಷಣ ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳಲು ವರದಿಯನ್ನು ನೀಡಿತು. ಈ ಮನವಿಯನ್ನು ಸ್ವೀಕರಿಸಿದ ಜಿಲ್ಲಾ ಪಂಚಾಯತ್ ಮಂಗಳೂರು,ಅಳಿಕೆ ಗ್ರಾಮ ಪಂಚಾಯತ್ ಗೆ ಈ ರಸ್ತೆಯನ್ನು ಪರಿಶೀಲಿಸಿ ಕ್ರಮ ಕೆಗೊಳ್ಳಲು ತಿಳಿಸಿತು. ಆದರೆ ಈ ರಸ್ತೆಗೆ ಅಭಿವೃದ್ಧಿಗೆ ಪಂಚಾಯತ್ ನಲ್ಲಿ ಬೇಕಾದ ಅನುದಾನವಿಲ್ಲ ಎಂದು ತಿಳಿಸಿತು.
ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ಮಂಗಳೂರು ಈ ರಸ್ತೆಯು 1.50 ಕಿ.ಮೀ ಉದ್ದವಿದ್ದು ಇದಕ್ಕಾಗಿ ಅಂದಾಜು 105 ಲಕ್ಷ ವೆಚ್ಚವಾಗುತ್ತದೆ ಈ ಕಡತವನ್ನು ಜಿಲ್ಲಾ ಪಂಚಾಯತ್ ಮಂಗಳೂರಿಗೆ ಕಳುಹಿಸಲಾಗಿದೆ. ರಸ್ತೆ ದುರಸ್ತಿಗೆ ಬೇಕಾದ ಈ ಮೊತ್ತ ತಮ್ಮಲ್ಲಿ ಇಲ್ಲ ಹಾಗೂ ಈ ಕಡತವನ್ನು ಕರ್ನಾಟಕ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು. 2017 ರಲ್ಲಿ ಈ ರಸ್ತೆ ದುರಸ್ತಿಯ ಬಗ್ಗೆ ತಯಾರಾದ ಸರ್ಕಾರದ ಕಡತ ವಿಧಾನ ಸೌದದಲ್ಲಿ ಇದ್ದು ಈ ರಸ್ತೆ ದುರಸ್ಥಿಯ ಕಡತದ ದ ಬಗ್ಗೆ ಸ್ಥಳೀಯ ಶಾಸಕರಲ್ಲಿ ಹಲವು ಬಾರಿ ಮನವಿ ಮಾಡಿದರೂ ಯಾವುದು ಫಲ ಕಾಣಲಿಲ್ಲ.
ಊರಿನ ನಾಗರಿಕರು ಈ ರಸ್ತೆಯ ದುರಸ್ಥಿಯುು ತಕ್ಷಣ ಆಗಬೇಕೆಂದು ಒಂದು ನೆಗಳಗುಳಿ ರಸ್ತೆ ಹಿತರಕ್ಷಣಾ ವೇದಿಕೆಯನ್ನು ಮಾಡಿಕೊಂಡು ಈ ರಸ್ತೆಯ ಅಭಿವೃದ್ಧಿಯು ಆಗದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ ಹಾಗೂ ಹೋರಾಟಕ್ಕೆ ಮುಂದಾಗಿದ್ದಾರೆ.
ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…
ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…
ಹವಾಮಾನ ಬದಲಾವಣೆ ಪ್ರಪಂಚದ ಎಲ್ಲೆಡೆಯೂ ಸವಾಲಾಗುತ್ತಿದೆ.ತಾಪಮಾನ ಏರಿಕೆಯ ಕಾರಣದಿಂದ ಚಂಡಮಾರುತಗಳ ಸಂಖ್ಯೆ ಹೆಚ್ಚಾಗುವ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…