ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಇಂದಿನಿಂದ ಹೊಸ ಅಡಿಕೆಗೆ ದರ ನಿಗದಿಯಾಗಿದೆ. ಕ್ಯಾಂಪ್ಕೊ ಹಾಗೂ ಇತರ ಸಹಕಾರಿ ಸಂಸ್ಥೆಗಳು ಹೊಸ ಅಡಿಕೆಗೆ 350 ರೂಪಾಯಿ ದರವನ್ನು ನಿಗದಿ ಮಾಡಿದೆ. ಇಂದಿನಿಂದ ಈ ವರ್ಷದ ಅಡಿಕೆ ಮಾರುಕಟ್ಟೆ ಪ್ರವೇಶವಾಗಲಿದ್ದು, ಕಳೆದ ವರ್ಷದ ಅಡಿಕೆಯು ಹಳೆ ಅಡಿಕೆಯಾಗಿ ಚೋಲ್ ಅಡಿಕೆಗೆ 490 ರೂಪಾಯಿ ಮತ್ತು ಡಬಲ್ ಚೋಲ್ ಅಡಿಕೆಗೆ 530 ರೂಪಾಯಿಗೆ ಖರೀದಿ ನಡೆಯುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಮಾರುಕಟ್ಟೆ 350 ರಿಂದ 355 ರೂಪಾಯಿಗೆ ಖರೀದಿ ನಡೆಸುವ ಬಗ್ಗೆ ಮಾಹಿತಿ ಇದೆ. ಚೋಲ್ ಅಡಿಕೆ 495-500 ರೂಪಾಯಿ ಹಾಗೂ ಡಬಲ್ ಚೋಲ್ ಅಡಿಕೆ 530-535 ರೂಪಾಯಿವರೆಗೂ ಖರೀದಿ ನಡೆಯುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಈ ಬಾರಿ ಅಡಿಕೆಯ ಫಸಲು ಶೇ.70 ರಷ್ಟು ಕೊಳೆರೋಗ ಹಾಗೂ ಇಳುವರಿ ಕೊರತೆ, ಎಲೆಚುಕ್ಕಿ ರೋಗದಿಂದ ಅಡಿಕೆ ಇಳುವರಿ ಮೇಲೆ ಹೊಡೆತ, ಹವಾಮಾನ ವೈಪರೀತ್ಯದ ಕಾರಣದಿಂದ ಎಳೆ ಅಡಿಕೆ ಬಿದ್ದಿರುವುದು ಸೇರಿದಂತೆ ವಿವಿಧ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಗಿದ್ದರೂ ಆರಂಭದ ಮಾರುಕಟ್ಟೆಯಾಗಿ 350 ರೂಪಾಯಿಗೆ ಅಡಿಕೆ ಮಾರುಕಟ್ಟೆ ಬಂದಿದೆ. ಆದರೆ ಈ ಬಾರಿ ಆರಂಭದ ಧಾರಣೆಯೇ ಕಡಿಮೆ ನಿಗದಿಯಾಗಿದೆ. 2024 ರಲ್ಲಿ 340 ರೂಪಾಯಿ ದರ ನಿಗದಿಯಾಗಿದ್ದರೆ 2023 ರಲ್ಲಿ 365 ರೂಪಾಯಿ ನಿಗದಿಯಾಗಿತ್ತು, 2021 ರಲ್ಲಿ 425 ರೂಪಾಯಿ ನಿಗದಿಯಾಗಿತ್ತು. ಈ ಬಾರಿ ಕಳೆದ ವರ್ಷದ ದರಕ್ಕಿಂತ 10 ರೂಪಾಯಿ ಹೆಚ್ಚಾಗಿ ನಿಗದಿಯಾಗಿದೆ. ಆದರೆ ಬೆಳೆ ಕಡಿಮೆ, ಬೆಳೆ ನಷ್ಟ ಹಾಗೂ ಅಡಿಕೆ ಬೆಳೆಗಾರರ ಸಂಕಷ್ಟ ಹಿನ್ನೆಲೆಯಲ್ಲಿ ಈ ಬಾರಿ ಕನಿಷ್ಟ 375 ರೂಪಾಯಿ ಆರಂಭದ ದರ ನಿಗದಿಯಾಗಬೇಕಿತ್ತು ಎನ್ನುವುದು ಅಡಿಕೆ ಬೆಳೆಗಾರರ ನಿರೀಕ್ಷೆಯಾಗಿತ್ತು. ಕಳೆದ ಮೂರು ವರ್ಷದ ಅಡಿಕೆ ಮಾರುಕಟ್ಟೆಯ ಆರಂಭದ ಮಾಹಿತಿ ಹೀಗಿತ್ತು….
ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…