Advertisement
ಸುದ್ದಿಗಳು

ಇವರ ಪಾಠ ಇಂದಿನ ಸಮಾಜಕ್ಕೆ ಅಗತ್ಯ….! ಅದೇನು ಪಾಠ …?

Share

ರಸ್ತೆ ಬದಿಯ ಸೂಚನಾ ಫಲಕವನ್ನು ಸ್ವಚ್ಛ ಮಾಡುವ ಕಾರ್ಯವೊಂದರ ಕತೆ ಇದು. ಅದರಲ್ಲೇನು ವಿಶೇಷ ..? . ಈ ಕಾರ್ಯ ಮಾಡಿರುವುದು  ಮಾನಸಿಕ ದುರ್ಬಲನೊಬ್ಬ.  ಈ ಮೂಲಕ ಸಾರ್ವಜನಿಕರಿಗೆ ಜವಾಬ್ದಾರಿಯ ಪಾಠ ಕಲಿಸಿದ್ದಾನೆ.

ಭಾನುವಾರ ಬೆಳಗ್ಗಿನ ಜಾವ ಶಿಶಿಲ ನಿವಾಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಪ್ರಾ. ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಅವರು ಕೆಲಸದ ನಿಮಿತ್ತ ಕೊಕ್ಕಡಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಧರ್ಮಸ್ಥಳ -ಶಿಶಿಲ ತಿರುವಿನಲ್ಲಿರುವ ಸೂಚನಾ ಫಲಕವನ್ನು ಓರ್ವ ವ್ಯಕ್ತಿ  ಸ್ವಚ್ಚ ಮಾಡುತ್ತಿದ್ದ. ಇದನ್ನು ಕಂಡ ಅವರಿಗೆ ಧನ್ಯವಾದ ತಿಳಿಸಲು ಹತ್ತಿರ ತೆರಳಿದ್ದಾರೆ. ಆದರೆ ಆ ವ್ಯಕ್ತಿ ಮಾನಸಿಕವಾಗಿ ತುಂಬಾ ದುರ್ಬಲನಾಗಿದ್ದ ಮತ್ತು ತೀರಾ ಬಳಲಿದ್ದ. ವಿಚಾರಿಸಿದಾಗ ಆತ ತಾನು ಹಾಸನದ ರಮೆಶ, ” ಮಂಜಣ್ಣನ ಸೇವೆ ” ಮಾಡುತ್ತಿರುವುದಾಗಿ ಹೇಳಿದ.

ಬಳಿಕ ನೆರೆದ ಸ್ಥಳಿಯರು ಒಂದಷ್ಟು ಧನ ಸಹಾಯ ಮಾಡಿದಾಗ ಸಂತೊಷದಿಂದ ಸ್ವೀಕರಿಸಿದ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿ ಈ ಸಮಾಜಕ್ಕೆ ನೀಡಿದ ಸಂದೇಶ ಗಮನಾರ್ಹವಾಗಿತ್ತು.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಸಮನ್ವಯ

ಮಿರರ್‌ ನ್ಯೂಸ್ ನೆಟ್ವರ್ಕ್

Published by
ಮಿರರ್‌ ಸಮನ್ವಯ

Recent Posts

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ

ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಅಭಿವೃದ್ಧಿಪಡಿಸಿ,…

2 hours ago

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

4 hours ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

4 hours ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

5 hours ago

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

1 day ago