ನಮ್ಮ ದೇಶದಲ್ಲಿ ವಿಐಪಿಗಳು, ವಿವಿಐಪಿಗಳಿಗೆ ಸತ್ಕಾರ ಇದೆ. ಅವರ ವಾಹನ ರಸ್ತೆಗೆ ಇಳಿದ್ರೆ ಸಾಕು ಜೋರಾಗಿ ಸೈರನ್ ಬಾರಿಸುತ್ತಾ, ಬಾರಿ ಗದ್ದಲ ಎಬ್ಬಿಸಿಕೊಂಡು ವಾಹನಗಳಲ್ಲಿ ಬರುತ್ತಾರೆ. ಇನ್ಮುಂದೆ ಈ ಸದ್ದು-ಗದ್ದಲಕ್ಕೆ ಬ್ರೇಕ್ ಬೀಳಲಿದೆ.ಈ ರೀತಿಯ ಭಾರೀ ಸೌಂಡ್ ಮಾಡುವ ಸೈರನ್ ಗಳಿಗೆ ಬ್ರೇಕ್ ಬೀಳಲಿದೆ. ಬದಲಾಗಿ ಇನ್ನುಕೊಳಲು, ತಬಲಾ ಮತ್ತು ಶಂಖದಂತಹ ಮಧುರ ಸದ್ದು ಕೇಳಿ ಬರಲಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಇಂಥದ್ದೊಂದು ಸುಳಿವು ನೀಡಿದ್ದಾರೆ. ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಐಪಿ ವಾಹನಗಳಲ್ಲಿ ಸೈರನ್ ಸೌಂಡ್ ಗೆ ಬ್ರೇಕ್ ಹಾಕುವ ಬಗ್ಗೆ ಚಿಂತನೆ ನಡೆಸಿದ್ದಾಗಿ ಅವರು ಹೇಳಿದ್ದಾರೆ.ಸೈರನ್ ಶಬ್ದಗಳನ್ನು ಬದಲಾಯಿಸುವ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಸೈರನ್ ಬದಲಿಗೆ ಭಾರತೀಯ ಸಂಗೀತ ವಾದ್ಯಗಳಾದ ಕೊಳಲು, ತಬಲಾ ಮತ್ತು ಶಂಖಗಳ ಧ್ವನಿಗಳು ಕೇಳಿ ಬರಲಿದೆ. ಪುಣೆಯ ಚಾಂದಿನಿ ಚೌಕ್ ಮೇಲ್ಸೇತುವೆ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ಶಬ್ದ ಮಾಲಿನ್ಯವನ್ನು ನಿಯಂತ್ರಿಸುವುದು ಬಹಳ ಮುಖ್ಯ ಎಂದಿದ್ದಾರೆ. ಐಪಿಗಳ ವಾಹನದ ಮೇಲೆ ಕೆಂಪು ದೀಪವನ್ನು ಕೊನೆಗೊಳಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಇದೀಗ ನಾನು ವಿಐಪಿ ವಾಹನಗಳ ಮೇಲಿನ ಸೈರನ್ಗಳನ್ನು ನಿಲ್ಲಿಸಲು ಪ್ಲಾನ್ ಮಾಡುತ್ತಿದ್ದೇನೆ ಎಂದಿದ್ದಾರೆ.
ಅಲ್ಲಲ್ಲಿ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ೨…
ಹಲಸಿನ ಕಾಯಿ ಪೂರಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿ 1/2 ಕಪ್, ಗೋಧಿ ಹುಡಿ.1…
ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…
ನೈಸರ್ಗಿಕ ರಬ್ಬರ್ ಮತ್ತು ಅದರ ಉತ್ಪನ್ನಗಳು ಅರಣ್ಯನಾಶ ಮುಕ್ತ ನಿಯಮಗಳಿಗಾಗಿ ಯುರೋಪಿಯನ್ ಒಕ್ಕೂಟ…
ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.