Advertisement
ವೆದರ್ ಮಿರರ್

ಹವಾಮಾನ ವರದಿ | 23-10-2024 | ಸಾಮಾನ್ಯ ಮಳೆ ಮುಂದುವರಿಕೆ | ಅ.28 ರಿಂದ ತಾಪಮಾನದ ಕಾರಣದಿಂದ ಮಳೆ ಸಾಧ್ಯತೆ |

Share

24.10.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

Advertisement
Advertisement
Advertisement
Advertisement

ಕರಾವಳಿ : ಕಾಸರಗೋಡು ಜಿಲ್ಲೆಯ ಕಡಲ ತೀರ ಭಾಗಗಳ ಸುತ್ತಮುತ್ತ ಅಲ್ಲಲ್ಲಿ ರಾತ್ರಿ ಸಾಮಾನ್ಯ ಮಳೆಯ ಸಾಧ್ಯತೆ ಇದ್ದರೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ತಾಲೂಕು ಪ್ರದೇಶಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಗಾಳಿಯ ಪ್ರಭಾವ ಹೆಚ್ಚಿದ್ದರೆ, ಪುತ್ತೂರು, ಬಂಟ್ವಾಳ ತನಕವೂ ಮಳೆಯ ಸಾಧ್ಯತೆ ಇದೆ.
ಈಗಿನಂತೆ ಅಕ್ಟೊಬರ್ 24ರಂದು ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದು, 25ರಿಂದ ಮಳೆಯ ಸಾಧ್ಯತೆ ಕಾಣುತ್ತಿಲ್ಲ.

Advertisement

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿಯೇ ಇರಬಹುದು. ಈಗಿನಂತೆ ಅಕ್ಟೊಬರ್ 24ರಂದು ಸಾಮಾನ್ಯ ಮಳೆಯ ಸಾಧ್ಯತೆ ಇದ್ದು, 25ರಿಂದ ಮಳೆ ಸಂಪೂರ್ಣ ಕಡಿಮೆಯಾಗುವ ಸಾಧ್ಯತೆಗಳಿವೆ.

ಒಳನಾಡು : ಉತ್ತರ ಒಳನಾಡಿನ ಹಾವೇರಿ, ಧಾರವಾಡ, ಬೆಳಗಾವಿ, ಗದಗ, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಮಾತ್ರ ಇರಬಹುದು.
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದ್ದರೆ, ಚಿಕ್ಕಬಳ್ಳಾಪುರ, ತುಮಕೂರು ( ಪಾವಗಢ ಮಳೆ ಸ್ವಲ್ಪ ಜಾಸ್ತಿ ಇರಬಹುದು), ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಉತ್ತರ ಒಳನಾಡಿನಲ್ಲಿ ಅಕ್ಟೊಬರ್ 24 ರಿಂದ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಕ್ಟೊಬರ್ 25ರಿಂದ ಮಳೆ ಸಂಪೂರ್ಣ ಕಡಿಮೆಯಾಗುವ ಲಕ್ಷಣಗಳಿವೆ.

Advertisement

ಬಂಗಾಳಕೊಲ್ಲಿಯ ಡಾನಾ ಚಂಡಮಾರುತವು ಅಕ್ಟೊಬರ್ 24ರ ರಾತ್ರಿ ಪಶ್ಚಿಮ ಬಂಗಾಳ ಹಾಗೂ ಒಡಿಸ್ಸಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಇದರೊಂದಿಗೆ ಹಿಂಗಾರು ಸಂಪೂರ್ಣ ದುರ್ಬಲಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಸಣ್ಣ ಪ್ರಮಾಣದ ತಿರುಗಿ ಉಂಟಾಗಿದ್ದು, ಪಶ್ಚಿಮಾಭಿಮುಖವಾಗಿ ಚಲಿಸುವ ಲಕ್ಷಣಗಳಿವೆ. ಆದರೆ ರಾಜ್ಯದ ಮೇಲೆ ಯಾವುದೇ ಪರಿಣಾಮ ಕಾಣಿಸುತ್ತಿಲ್ಲ. ಈಗಿನಂತೆ ಅಕ್ಟೊಬರ್ 28ರಿಂದ ರಾಜ್ಯದ ಕೆಲವು ಭಾಗಗಳಲ್ಲಿ ಅಧಿಕ ತಾಪಮಾನದ ಕಾರಣದಿಂದ ಮಳೆ ಆರಂಭವಾಗುವ ಸಾಧ್ಯತೆಗಳಿವೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಸಿರಿಧಾನ್ಯ ಕೃಷಿಯಲ್ಲಿ ಯಶಸ್ಸು | ವಾಣಿಜ್ಯ ಬೆಳೆಯಿಂದ ಹೊರಬಂದ ರೈತರು | 5 ಹಳ್ಳಿಯಲ್ಲಿ ರೈತರಿಂದ ಪ್ರಯೋಗ |

ವಾಣಿಜ್ಯ ಬೆಳೆಯಿಂದ ಹೊರಬಂದು ಸಿರಿಧಾನ್ಯ ಬೆಳೆದು ಧಾನ್ಯ ಸಂಗ್ರಹಿಸಿ, ಸಂಸ್ಕರಿಸಿ, ತಾವೇ ಬ್ರಾಂಡಿಂಗ್‌…

1 hour ago

ಶರಾವತಿ ಮುಳುಗಡೆ ಸಂತ್ರಸ್ತರ ಹಕ್ಕುಪತ್ರ ನೀಡಲು ಒತ್ತಾಯಿಸಿ ಧರಣಿ

ಅರಣ್ಯವಾಸಿಗಳ ಕೃಷಿ ಭೂಮಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ…

3 hours ago

ದಕ್ಷಿಣ ಕನ್ನಡ ಸ್ವಾತಂತ್ರ್ಯ ಹೋರಾಟಗಾರರು | ತಾಲೂಕು ಮಟ್ಟದ ಭಾಷಣ ಸ್ಪರ್ಧೆ

ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ, ರೋಟರಿ ಕ್ಲಬ್ ಪುತ್ತೂರು ಈಸ್ಟ್…

3 hours ago

ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |

ನ.2 ರಿಂದ 10ರ ವರೆಗೆ ಹವ್ಯಾಸಿ ಛಾಯಾಚಿತ್ರ ಗ್ರಾಹಕ ಅಭಿಷೇಕ.ಡಿ,ಪುಂಡಿತ್ತೂರು ಅವರ ಪಕ್ಷಿ,…

4 hours ago

24 ರಿಂದ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭ

ಅ.24ರಿಂದ  ನ 3ರವರೆಗೆ  ಹಾಸನಾಂಬೆ ಜಾತ್ರೆ ನಡೆಯಲಿದೆ.

5 hours ago

ಎಮ್ಮೆ-ಹಸುಗಳು ಸಾವನ್ನಪ್ಪಿದರೆ ಪರಿಹಾರ |

ಎಮ್ಮೆ ಹಸುಗಳು ಸಾವನ್ನಪ್ಪಿದರೆ ಪರಿಹಾರವಾಗಿ 10 ಸಾವಿರ ರೂಪಾಯಿ ನೀಡಲಾಗುವುದು ಎಂದು ಪಶುಸಂಗೋಪನಾ…

5 hours ago