Advertisement
MIRROR FOCUS

ಭೂತಾನ್‌ನಲ್ಲಿ ಅಡಿಕೆ ಇಳುವರಿ ಕುಸಿತ | ಮ್ಯಾನ್ಮಾರ್‌ ಅಡಿಕೆಯೇ ಭಾರತಕ್ಕೆ ಸಂಕಷ್ಟ | ಮತ್ತೆ 442 ಚೀಲ ಮ್ಯಾನ್ಮಾರ್ ಅಡಿಕೆ ವಶಕ್ಕೆ ಪಡೆದ ಅಧಿಕಾರಿಗಳು |

Share

ಭೂತಾನ್ 2022 ರಲ್ಲಿ ಸುಮಾರು 11,106 ಮೆಟ್ರಿಕ್ ಟನ್ ಅಡಿಕೆ ಉತ್ಪಾದಿಸಿತ್ತು. ಈ ಬಾರಿ ಶೇ.52 ರಷ್ಟು ಕಡಿಮೆ ಇಳುವರಿಯಾಗಿದೆ. ಭಾರತಕ್ಕೆ ಭೂತಾನ್‌ ಅಡಿಕೆ ಈಗ ಸಮಸ್ಯೆಯಾಗುತ್ತಿಲ್ಲ. ಆದರೆ ಮ್ಯಾನ್ಮಾರ್‌ ಮೂಲಕ ಭಾರತದೊಳಕ್ಕೆ ಬರುವ ಅಡಿಕೆ ಈಗ ಸಮಸ್ಯೆಯಾಗುತ್ತಿದೆ. ಇದೀಗ ಮತ್ತೆ 442 ಚೀಲ ಅಡಿಕೆ  ಕಳ್ಳಸಾಗಾಣಿಕೆಯನ್ನು ಅಸ್ಸಾಂ ರೈಪಲ್ಸ್‌ ಪಡೆ ವಶಕ್ಕೆ ಪಡೆದುಕೊಂಡಿದೆ.

ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 442 ಚೀಲ ಅಡಿಕೆ ಸಹಿತ ಮೂವರನ್ನು ಗಡಿ ಭದ್ರತಾ ಪಡೆ ವಶಕ್ಕೆ ತೆಗೆದುಕೊಂಡಿದೆ.ಮಣಿಪುರದ ಕಾಮ್‌ಜಾಂಗ್ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಗಡಿಯಾಚೆಗಿನ ಅಡಿಕೆ ಕಳ್ಳಸಾಗಣೆಯನ್ನು ತಡೆದಿದೆ. 442 ಚೀಲ ಅಡಿಕೆಗಳನ್ನು ವಶಪಡಿಸಿಕೊಂಡಿದೆ. ಗಡಿ ಭದ್ರತಾ ಪಡೆಯು ಸೆ.29 ರಿಂದ ಕಾರ್ಯಾಚರಣೆ ಆರಂಭಿಸಿತ್ತು.ಒಟ್ಟು ಕಾರ್ಯಾಚರಣೆಯಲ್ಲಿ  442 ಚೀಲ ಅಡಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ತಲಾ 100 ಕೆಜಿಯ 50 ಚೀಲಗಳು ಮತ್ತು ತಲಾ 80 ಕೆಜಿಯಂತೆ 392 ಚೀಲಗಳು ಸೇರಿವೆ ಎಂದು ಅಸ್ಸಾಂ ಗಡಿಭದ್ರತಾ ಪಡೆ ಮಾಹಿತಿ ನೀಡಿದೆ.

ಭೂತಾನ್‌ನಲ್ಲಿ ಕಡಿಮೆಯಾದ ಅಡಿಕೆ ಇಳುವರಿ : ಭೂತಾನ್ 2022 ರಲ್ಲಿ ಸುಮಾರು 11,106 ಮೆಟ್ರಿಕ್ ಟನ್  ಅಡಿಕೆಗಳನ್ನು ಉತ್ಪಾದಿಸಿತ್ತು. ಹಿಂದಿನ ವರ್ಷಕ್ಕಿಂತ 52 ಪ್ರತಿಶತ ಕಡಿಮೆಯಾಗಿದೆ. ಭೂತಾನ್‌ ತನ್ನ ದೇಶದಲ್ಲಿ ಅಡಿಕೆ ಹೆಚ್ಚು ಉತ್ಪಾದಿಸಿದ ಸಂದರ್ಭ  ಭಾರತಕ್ಕೆ ಅಡಿಕೆಯನ್ನು ರಫ್ತು ಮಾಡುತ್ತದೆ ಮತ್ತು ಕಡಿಮೆ ಋತುವಿನಲ್ಲಿ ಭಾರತದಿಂದ  ಆಮದು ಮಾಡಿಕೊಳ್ಳುತ್ತದೆ.2022 ರಲ್ಲಿ ಉತ್ಪಾದನೆಯು 10,271 ಮೆಟ್ರಿಕ್ ಟನ್  ರಷ್ಟು ಕಡಿಮೆಯಾಗಿದೆ ಎಂದು ಭೂತಾನ್ ಕೃಷಿ ಮಾರುಕಟ್ಟೆ ಮತ್ತು ಸಹಕಾರಿ ಇಲಾಖೆಯ ದಾಖಲೆಗಳು ಹೇಳಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

16 hours ago

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಥೆನಾಲ್ ಖರೀದಿ 1,200 ಕೋಟಿ ಲೀಟರ್‌ಗೆ ಏರಿಕೆ

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಪಾವತಿಯ…

21 hours ago

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ – ಕಾಫಿ ಬಗ್ಗೆ ಜಾಗೃತಿಗೆ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ‘ಸೈಕಲ್ ಫಾರ್ ಕಾಫಿ’ ಜಾಥಾ ಆಯೋಜಿಸಲಾಗಿದ್ದು,…

21 hours ago

ಏಷ್ಯನ್ ಗೇಮ್ಸ್‌ ಕ್ರಿಕೆಟ್‌ : ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಫೈನಲ್‌

ಏಷ್ಯನ್‌ ಗೇಮ್ಸ್‌ ಪುರುಷರ ಕ್ರಿಕೆಟ್‌ ಫೈನಲ್‌ನಲ್ಲಿ ಅ.3ರಂದು ಭಾರತ ಮತ್ತು ಪಾಕಿಸ್ತಾನ ಚಿನ್ನದ…

22 hours ago

ಮಳೆ ಕೊರತೆ ಮುಂದುವರಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೇಗಿರಲಿದೆ?

ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ…

22 hours ago

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…

1 day ago