ಆಂಧ್ರಪ್ರದೇಶದ ವಸ್ತು ಸಂಗ್ರಹಾಲಯದಿಂದ ಕಳುವಾಗಿದ್ದ ಪ್ರಾಚೀನ ಶಿಲ್ಪವೊಂದು ನಾಲ್ಕು ದಶಕಗಳ ಬಳಿಕ ಮರಳಿ ಸ್ವದೇಶಕ್ಕೆ ಬರುತ್ತಿದೆ. 1990ರ ದಶಕದಲ್ಲಿ ಆಂಧ್ರಪ್ರದೇಶದ ನಾಗಾರ್ಜುನಕೊಂಡದಲ್ಲಿರುವ ಅಪರೂಪದ ಶಿಲ್ಪ ಕಳ್ಳತನವಾಗಿತ್ತು. ಇದೀಗ ಬೆಲ್ಜಿಯಂನಲ್ಲಿ ಆ ಶಿಲ್ಪ ಸಿಕ್ಕಿದ್ದು, ಬ್ರಸೆಲ್ಸ್ನಲ್ಲಿರುವ ಭಾರತೀಯ ಹೈಕಮಿಷನರ್ ಸಂತೋಷ ಜಾ ಅವರಿಗೆ ಹಸ್ತಾಂತರಿಸಲಾಗಿದೆ.
ಗೌತಮ ಬುದ್ಧನ ಜೀವನದಲ್ಲಿ ನಡೆದ ಘಟನೆಗಳನ್ನು ವಿವರಿಸುವ ಶಿಲ್ಪವಿದು. ಆಸ್ಥಾನದಲ್ಲಿನ ವಿಚಾರಣೆಯ ಸಂದರ್ಭವನ್ನು ಇದರಲ್ಲಿ ಬಿಂಬಿಸಲಾಗಿದೆ. ರಾಜ ದಂಪತಿ ಸಿಂಹಾಸನದಲ್ಲಿ ಕುಳಿತಿರುವ ಮತ್ತು ಸೇವಕರು ನಿಂತಿರುವಂತೆ ಚಿತ್ರಿಸಲಾಗಿದೆ. ಇದರ ಜತೆಗೆ, ಓರ್ವ ಮಹಿಳೆ ಮತ್ತು ಮಗು ಕಲಾಕೃತಿಯಲ್ಲಿ ಕಾಣಿಸುತ್ತಾರೆ.
1995ರಲ್ಲಿ ಈ ಕಲಾಕೃತಿಯ ಚಿತ್ರವನ್ನು ಕೊನೆಯ ಬಾರಿಗೆ ಇತಿಹಾಸಕಾರರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ನಂತರ 2018ರಲ್ಲಿ ಈ ಕಲಾಕೃತಿಯನ್ನು ಬೆಲ್ಜಿಯಂ ಏಷ್ಯನ್ ಆರ್ಟ್ ಟ್ರೇಡ್ ಮಾರಾಟಕ್ಕೆ ಇಟ್ಟಿತ್ತು. ಅಲ್ಲಿಂದ ಎರಡು ವರ್ಷಗಳ ಕಾಲ ಸತತ ಪ್ರಯತ್ನದ ಬಳಿಕ ಈ ಶಿಲ್ಪವನ್ನು ಮರಳಿ ಪಡೆಯಲಾಗಿದೆ.
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…
ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…