ಸುದ್ದಿ ಸಂಸ್ಥೆ ANI ವರದಿಯ ಪ್ರಕಾರ, ಸುಡಾನ್‌ನಿಂದ 246 ಭಾರತೀಯರನ್ನು ಹೊತ್ತ ಮತ್ತೊಂದು ವಿಮಾನ ಮುಂಬೈ ತಲುಪಿದೆ. ನಿನ್ನೆ 360 ಭಾರತೀಯರ ಮೊದಲ ಬ್ಯಾಚ್ ನವದೆಹಲಿ ತಲುಪಿತ್ತು. ಮತ್ತೊಂದು ಆಪರೇಷನ್ ಕಾವೇರಿ ವಿಮಾನ ಮುಂಬೈಗೆ ಆಗಮಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
“ಆಪರೇಷನ್ ಕಾವೇರಿ” ಎಂಬುದು ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸರ್ಕಾರವು ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯಾಗಿದೆ. ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೈನಿಕ ಗುಂಪುಗಳು ಘರ್ಷಣೆ ನಡೆಯುತ್ತಿದ್ದು, ಕರ್ನಾಟಕದವರೂ ಸೇರಿದಂತ ದೇಶದ ಸಾವಿರಾರು ಮಂದಿ ಸಿಲುಕಿದ್ದರು.
246 ಮಂದಿ ಭಾರತೀಯರಿದ್ದ ಯುದ್ಧ ವಿಮಾನ ಗುರುವಾರ ಬೆಳಿಗ್ಗೆ 11 ಗಂಟೆಗೆ ಜಿದ್ದಾದಿಂದ ಹೊರಟಿತ್ತು. ಮಧ್ಯಾಹ್ಮ 3.30ರ ವೇಳೆಗೆ ಮುಂಬೈ ತಲುಪಿದೆ ಎಂದು ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದ್ದಾರೆ.
ಸುಡಾನ್‌ನಲ್ಲಿ ಯುಎಸ್ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆಯಲ್ಲಿ 72 ಗಂಟೆಗಳ ಕದನ ವಿರಾಮ ಘೋಷಿಸಲಾಗಿದೆ ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಸುಡಾನ್‌ನಿಂದ ಸ್ಥಳಾಂತರಿಸುವಲ್ಲಿ ನಿರತವಾಗಿವೆ. ಭಾರತೀಯರನ್ನು ಆಪರೇಷನ್ ಕಾವೇರಿ ಕಾರ್ಯಾಚರಣೆ ಅಡಿ ಪೋರ್ಟ್ ಸುಡಾನ್ಗೆ ಬಸ್ಸುಗಳ ಮೂಲಕ ಕರೆತಂದು, ಅಲ್ಲಿಂದ ಸೌದಿ ಅರೇಬಿಯಾದ ಜಿದ್ದಾಗೆ ಯುದ್ದ ವಿಮಾನಗಳ ಮೂಲಕ ಕರೆತಂದು ರಕ್ಷಿಸಲಾಗುತ್ತದೆ.
ಸೋಮವಾರ ಆರಂಭಿಸಲಾದ ‘ಆಪರೇಷನ್ ಕಾವೇರಿ’ ಮಿಷನ್ ಅಡಿಯಲ್ಲಿ ಭಾರತವು ಜಿದ್ದಾದಲ್ಲಿ ಸಾರಿಗೆ ಸೌಲಭ್ಯವನ್ನು ಸ್ಥಾಪಿಸಿದೆ. ಸುಡಾನ್‌ನಿಂದ ಸ್ಥಳಾಂತರಿಸಿದ ನಂತರ ಎಲ್ಲಾ ಭಾರತೀಯರನ್ನು ಸೌದಿ ಅರೇಬಿಯಾಕ್ಕೆ ಕರೆದೊಯ್ಯಲಾಗಿದೆ.
ಭಾರತೀಯ ವಾಯುಪಡೆಯ (IAF) ಎರಡು ಮಿಲಿಟರಿ ಸಾರಿಗೆ ವಿಮಾನಗಳು ಸುಡಾನ್‌ನಿಂದ 500 ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಿದರೆ, ನೌಕಾಪಡೆಯ ಹಡಗು ಸಂಘರ್ಷದಿಂದ ಪೀಡಿತ ಸ್ಥಳದಿಂದ 278 ನಾಗರಿಕರನ್ನು ರಕ್ಷಿಸಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಒಟ್ಟು ಭಾರತೀಯರ ಸಂಖ್ಯೆ ಸುಮಾರು 530 ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…