ಕಾಫಿ ಬೆಳೆ ಕರ್ನಾಟಕದಲ್ಲಿ ಬೆಳೆಯುತ್ತಿದೆಯಾದರೂ ಅದಕ್ಕೆ ತಕ್ಕ ಮಾರುಕಟ್ಟೆ, ಉದ್ಯಮ ಬೆಳವಣಿಗೆಗೆ ನಡೆಯುವ ಯೋಜನೆಗಳು ಬೆರಳಿಕೆಯಷ್ಟು ಮಾತ್ರ. ಕರ್ನಾಟಕವನ್ನು ಭಾರತದ ಕಾಫಿ #Coffee ರಾಜಧಾನಿ ಅಂತಾರೆ. ಈ ಬಾರಿ ಕಾಫಿ ಬೆಳೆಗಾರರು ಹಾಗೂ ಉದ್ಯಮಿಗಳಿಗೆ ಹೊಸ ಅವಕಾಶ ಸೃಷ್ಟಿ ಹಾಗೂ ಮಾರುಕಟ್ಟೆಯ ವಿಸ್ತರಣೆಯ ಉದ್ದೇಶದಿಂದ ಏಷ್ಯಾದಲ್ಲಿಇದೇ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ.25 ರಿಂದ 28ರವರೆಗೆ 5ನೇ “ವಿಶ್ವ ಕಾಫಿ ಸಮ್ಮೇಳನ ”#WorldCoffeeConference (WCC 2023)” ಆಯೋಜಿಸಲಾಗಿದೆ.
ಭಾರತೀಯ ಕಾಫಿ ಮಂಡಳಿ, ಅಂತರಾಷ್ಟ್ರೀಯ ಕಾಫಿ ಸಂಘಟನೆಗಳು ಹಾಗೂ ಕಾಫಿ ಉದ್ಯಮದ ಸಹಯೋಗದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಸಮ್ಮೇಳನದ ಬ್ರ್ಯಾಂಡ್ ಅಂಬಾಸಿಡರ್ ಆಗಿರವ ಟೆನಿಸ್ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ಪುರಸೃತ ರೋಹನ್ ಬೋಪಣ್ಣ ಅವರು ಲಾಂಛನ ಅನಾವರಣಗೊಳಿಸಿದರು. ಭಾರತೀಯ ಕಾಫಿ ಮಂಡಳಿ ಸಿಇಒ ಕೆ.ಜಿ ಜಗದೀಶ್ ಮಾತನಾಡಿ ಜಾಗತಿಕವಾಗಿ ಕಾಫಿಯ ಆರ್ಥಿಕ ಪ್ರಾಮುಖ್ಯತೆಯನ್ನು ಹೆಚ್ಚಿಸಲು ವಿಶ್ವಸಂಸ್ಥೆಯ ಆಶ್ರಯದಲ್ಲಿ 1963 ರಲ್ಲಿ ಅಂತರಾಷ್ಟ್ರೀಯ ಕಾಫಿ ಸಂಘಟನೆಯನ್ನು (ಐಸಿಒ) ಸ್ಥಾಪಿಸಲಾಯಿತು. 2001ರಲ್ಲಿ ಲಂಡನ್, ಬೆಜಿಲ್ನಲ್ಲಿ 2005, ಗ್ವಾಟೆಮಾಲಾದಲ್ಲಿ 2010 ಮತ್ತು ಮತ್ತು ಇಥಿಯೋಪಿಯಾದಲ್ಲಿ ಸಮ್ಮೇಳನ ನಡೆದಿದ್ದವು. ಏಷ್ಯಾದಲ್ಲಿ ಮೊದಲ ಸಮ್ಮೇಳನ ಆಯೋಜಿಸಲಾಗುತ್ತಿದೆ. ಅದರಲ್ಲೂ ಬೆಂಗಳೂರು ವೇದಿಕೆಯಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ವಿಶ್ವದಲ್ಲಿ ಭಾರತವು ಕಾಫಿ ಉತ್ಪಾದನೆಯಲ್ಲಿ 7ನೇ ಸ್ಥಾನದಲ್ಲಿದೆ. ರಫ್ತಿನಲ್ಲಿ 5ನೇ ಸ್ಥಾನದಲ್ಲಿದೆ. ದೇಶದ ರಪ್ತು ಪ್ರಮಾಣದಲ್ಲಿ ಕರ್ನಾಟಕದ ಕೊಡುಗೆಯು ಶೇ 70ರಷ್ಟಿದೆ. ದೇಶದಲ್ಲಿ ಕರ್ನಾಟಕ ಕಾಫಿ ರಾಜಧಾನಿಯಾಗಿದೆ. ಸಮ್ಮೇಳನದಿಂದ ಕಾಫಿ ಬೆಳೆಗಾರರಿಗೆ ಸಾಕಷ್ಟು ಪ್ರಯೋಜನವಾಗಲಿದೆ. 100 ಮಿಲಿಯನ್ ಕುಟುಂಬಗಳಿಗೆ ಉದ್ಯೋಗ ಮತ್ತು ಜೀವನೋಪಾಯವನ್ನು ಒದಗಿಸುವ 200 ಶತಕೋಟಿ ಮೌಲ್ಯದ ವಿಶ್ವದ ಅತಿದೊಡ್ಡ ವ್ಯಾಪಾರದ ಸರಕು ಕಾಫಿಯಾಗಿದೆ ಎಂದು ತಿಳಿಸಿದರು. ಜಾಗತಿಕ ಮಟ್ಟದಲ್ಲಿ ಭಾರತೀಯ ಕಾಫಿಯನ್ನು ಪ್ರಚಾರ ಮಾಡುವ ಮೂಲಕ ಈ ಸಮ್ಮೇಳನವು ಕಾಫಿ ಬೆಳೆಗಾರರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಹಾಗೇ ಮಾರುಕಟ್ಟೆಗಳನ್ನು ಸೃಷ್ಟಿಸಲಿದೆ. ಕಾಫಿ ತೋಟದಿಂದ ಕೆಫೆಗಳವರೆಗೆ ನಮ್ಮ ಪ್ರತಿಭೆಗಳಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ ಎಂದರು.
News Source: Online
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…