ಪದ್ಯಾಣ ಗಣಪತಿ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮವು ಜುಲೈ 9 ರಂದು ಶನಿವಾರ ಚೊಕ್ಕಾಡಿಯ ಶ್ರೀ ರಾಮದೇವಾಲಯದ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಚೊಕ್ಕಾಡಿ ಶ್ರೀ ರಾಮದೇವಾಲಯದ ವಠಾರದಲ್ಲಿ ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಮಹೇಶ್ ಚೂಂತಾರು ಬಿಡುಗಡೆಗೊಳಿಸಿದರು.
ಜುಲೈ 9 ರಂದು ಬೆಳಗ್ಗಿನಿಂದ ಕಾರ್ಯಕ್ರಮ ಆರಂಭವಾಗಲಿದೆ. ಬೆಳಗ್ಗೆ 8.30 ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಕವಿ ಸುಬ್ರಾಯ ಚೊಕ್ಕಾಡಿ ಸಭಾಧ್ಯಕ್ಷತೆ ವಹಿಸುವರು. ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯ ದೀಪಪ್ರಜ್ವಲನ ಮಾಡುವರು. ಅತಿಥಿಗಳಾಗಿ ಸಾಮಾಜಿಕ ಮುಂದಾಳು ಆನೆಕಾರ ಗಣಪ್ಪಯ್ಯ ಭಾಗವಹಿಸುವರು. ಕಲಾವಿದ ವೆಂಕಟ್ರಾಮ ಭಟ್ ಸುಳ್ಯ ಹಾಗೂ ಗಣರಾಜ ಕುಂಬ್ಳೆ ಪದ್ಯಾಣ ಸಂಸ್ಮರಣೆ ಮಾಡುವರು. ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಮಹೇಶ್ ಚೂಂತಾರು ಉಪಸ್ಥಿತರಿರುವರು. ಸಂಜೆ .6.30 ರಿಂದ ಸಂಸ್ಮರಣೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರವಾಗಿ ತಾಳಮದ್ದಳೆ ನಡೆಯಲಿದೆ. ಸಂಜೆ ಗಾನಾರ್ಚನೆ , ಯಕ್ಷಗಾನ ಬಯಲಾಟ ನಡೆಯಲಿದೆ.
ಕಾರ್ಯಕ್ರಮವನ್ನು ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಕೇಂದ್ರ ಚೊಕ್ಕಾಡಿ, ಶ್ರೀ ರಾಮ ಸೇವಾ ಸಮಿತಿ ಚೊಕ್ಕಾಡಿ ಹಾಗೂ ಗಣಪ್ಫಣ್ಣ ಅಭಿಮಾನಿ ಬಳಗ ಆಯೋಜಿಸಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಕಾರ್ಯಕ್ರಮ ಸಂಘಟಕ ರಾಮಾ ಜೋಯಿಸ್ ಬೆಳ್ಳಾರೆ, ಪ್ರಮುಖರಾದ ಕೃಷ್ಣಮೂರ್ತಿ ನೇಣಾರು, ಸತ್ಯವೆಂಕಟೇಶ ಹೆಬ್ಬಾರ್ ಶೇಣಿ, ಗಣಪ್ಪಯ್ಯ ವಾಲ್ತಾಜೆ, ಸುದೇಷ ದೇರಾಜೆ, ಕಾರ್ತಿಕೇಶ ಶೇಣಿ, ಸುಬ್ಬಪ್ಪಯ್ಯ ದಡ್ಡಾಲಡ್ಕ, ಶಾಂಭವಿ ದಡ್ಡಾಲಡ್ಕ, ದೇವಸ್ಥಾನದ ಅರ್ಚಕರು ರಘುರಾಮ ಶರ್ಮ ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…