ನಾವೊಂದು ಯೋಚನೆ ಮಾಡಿದ್ದೇವೆ. ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ ಪ್ರದೇಶದಲ್ಲಿ ವಾರದ ಎಲ್ಲಾ ದಿನವೂ ವಿವಿಧ ಕ್ಲಾಸ್‌ಗಳು. ಚಿತ್ರಕಲೆ, ಸಂಗೀತ, ಕರಾಟೆ, ಚೆಸ್, ಮ್ಯೂಸಿಕ್, ಯಕ್ಷಗಾನ… ಹೀಗೇ. ಕೆಲವು ಮಕ್ಕಳಂತೂ ಎಲ್ಲದರಲ್ಲೂ ಇರುತ್ತಾರೆ. ಯಾವುದರಲ್ಲೂ ವೇದಿಕೆ ಸಿಗುವುದಿಲ್ಲ..!. ಕಾರಣ ಬೇರೆ ಬೇರೆ. ಗ್ರಾಮೀಣ ಭಾಗದ ಮಕ್ಕಳು ಕೂಡಾ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ವಾರದ ಎಲ್ಲಾ ಕ್ಷೇತ್ರದಲ್ಲಿ ಇರಲು ಸಾಧ್ಯವಾಗುವುದಿಲ್ಲ. ಅಂತಹ ಅವಕಾಶಗಳು ಇಲ್ಲ. ಇಲ್ಲಿ ಪ್ರತಿಭೆಗಳಿದ್ದರೂ ವೇದಿಕೆಯೇ ಸಿಗುವುದಿಲ್ಲ. ಅವಕಾಶಗಳು ಇಲ್ಲ.
ಇಂದು ಎಲ್ಲಾ ಮಕ್ಕಳಿಗೂ ವೇದಿಕೆ ನೀಡುವುದಕ್ಕೆ ಕಷ್ಟ. ನಗರ ಪ್ರದೇಶದಲ್ಲಿ ಸಾಕಷ್ಟು ಅವಕಾಶಗಳು ಇರುತ್ತವೆ.ಒಂದಲ್ಲ ಒಂದು ಅವಕಾಶ. ಅದೇ ಗ್ರಾಮೀಣ ಭಾಗದಲ್ಲಿ ಅದು ಸಾಧ್ಯವಿಲ್ಲ, ಅದು ಪ್ರಾಕ್ಟಿಕಲ್ ಕೂಡಾ ಅಲ್ಲ. ಇಂದು ವಿವಿಧ ಮಾಧ್ಯಮಗಳು ಇವೆ, ಸೋಶಿಯಲ್ ಮೀಡಿಯಾ ಇದೆ. ಇದ್ದರೂ ಎಲ್ಲರಿಗೂ ಈ ವೇದಿಕೆಯಲ್ಲೂ ತೊಡಗಿಸಿಕೊಂಡು ಮಕ್ಕಳಿಗೆ ವೇದಿಕೆ ನೀಡುವುದು, ಜಗತ್ತಿನ ಮುಂದೆ ತೆರೆದಿಡುವ, Exposure ನೀಡುವುದಕ್ಕೆ ಸಾಧ್ಯವಾಗುವುದಿಲ್ಲ.
ಯಾವತ್ತೂ ಚಿತ್ರಕಲೆ, ಬರಹ ಸೇರಿದಂತೆ ಸೃಜನಾತ್ಮಕ ಚಟುವಟಿಕೆ ಮಕ್ಕಳನ್ನು ಇಂದಿನ ಆಧುನಿಕವಾದ ಸೆಳೆತಗಳಿಂದ ದೂರವಿಡುವುದಕ್ಕೆ ಸಹಕಾರಿ ಎಂಬುದು ಈಗಾಗಲೇ ತಿಳಿದಿದೆ. ಅದರ ಜೊತೆಗೆ ಸೃಜನಾತ್ಮಕ ಚಟುವಟಿಕೆಗಳು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದಕ್ಕೂ ಕಾರಣವಾಗುತ್ತದೆ. ಇಂತಹದೊಂದು ವಾತಾವರಣ ಭವಿಷ್ಯದಲ್ಲಿ ನಿರ್ಮಾಣ ಆಗಲೇಬೇಕಾದ ಅನಿವಾರ್ಯತೆ ಇದೆ. ಏಕೆ ಈ ನಿರೀಕ್ಷೆ ಎಂದು ಇಂದಿನ ಪೋಷಕರಿಗೆ ಕೇಳಿದರೆ ಅವರಲ್ಲಿರುವ ಆತಂಕ ಅರಿವಾಗುತ್ತದೆ.
ಇದಕ್ಕಾಗಿ ಮಕ್ಕಳಿಗೆ ಒಂದು ಪುಟ್ಟ ವೇದಿಕೆ ನೀಡುವುದು, ಈ ಮೂಲಕ ಅವರ ಆಸಕ್ತಿಗೆ ಬೆಳಕು ನೀಡುವ ಪ್ರಯತ್ನ ನಮ್ಮ ದ ರೂರಲ್ ಮಿರರ್.ಕಾಂ ಮೂಲಕ ಮಾಡಲು ಉತ್ಸಾಹಿತರಾಗಿದ್ದೇವೆ. ಅಂದರೆ ಸದ್ಯ ಚಿತ್ರಕಲೆ ಹಾಗೂ ಬರಹವನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದೇವೆ. ಯಾವುದೇ ಚಿತ್ರ ಆಗಿರಲಿ, ಚಿತ್ರ ಹೇಗೇ ಇರಲಿ, ಬರಹ ಯಾವುದೇ ಇರಲಿ, ಹೇಗೇ ಇರಲಿ. ಮಗುವಿನ ಕಲ್ಪನೆಯ ಚಿತ್ರ, ಬರಹವೇ ಇರಲಿ. ಅದರ ಯೋಚನೆ ಬೇಡ. ಆಸಕ್ತಿ ಮೂಡಿಸುವುದು ಮೊದಲ ಕೆಲಸ, ಒಂದಷ್ಟು ಜನರಿಗೆ ಇದೇನು ಅಂತ ಅನಿಸಬಹುದು, ಬೇಗನೆ Exposure ನೀಡಿದರೆ ಕಷ್ಟ ಎನ್ನುವ ಭಾವನೆಯೂ ಇರುತ್ತದೆ. ಆದರೆ ಮಗುವಿಗೆ ಆಸಕ್ತಿ ಬೆಳೆಯುವುದಕ್ಕೆ ಬೆನ್ನು ತಟ್ಟಬೇಕು, ಚೆನ್ನಾಗಿದೆ… ಸೂಪರ್ ಎಂದು ಹೇಳಬೇಕು, ಒಂಚೂರು ಹೀಗಾಗಬೇಕು ಎನ್ನಬೇಕು,ಆಸಕ್ತಿ ಬೆಳೆಯುತ್ತದೆ. ಚಿತ್ರ ಪೇಪರಲ್ಲಿ ಬರುತ್ತದೆ ಎನ್ನುವ ಆಸಕ್ತಿ ಮುಂದೆ ಕುತೂಹಲವಾಗಿ ಬೆಳೆದು ಒಂದು ಕಲೆ ಕರಗತವಾಗಬಹುದು. ಸಮಾಜಕ್ಕೆ ಒಬ್ಬ ಕಲಾವಿದನ ಕೊಡುಗೆ, ಆತಂಕದ ವಾತಾವರಣದ ನಡುವೆ ಉತ್ತಮ ಚಿಂತನೆಯ ವ್ಯಕ್ತಿಯೊಬ್ಬ ಬೆಳೆಯುವಂತಾಗುತ್ತದೆ. ಹೀಗಾಗಿ ಸೀಮಿತ ಶಕ್ತಿಯ, ಸೀಮಿತ ವ್ಯಾಪ್ತಿಯ ಪುಟ್ಟ ಪ್ರಯತ್ನ ಇದು. ಗೆಲ್ಲಲೇ ಬೇಕು ಅಂತೇನೂ ಇಲ್ಲ. ಅಥವಾ ಇದುವೇ ಬೇರೆಯವರಿಗೂ ಸ್ಫೂರ್ತಿಯಾಗಲೂ ಬಹುದು. ಆದರೆ ದ್ವೇಷದ, ಕಾಲೆಳೆಯುವ ಸಮಾಜದ ನಡುವೆ ಮೇಲೆತ್ತುವ, ಪ್ರೀತಿಸುವ, ಬೆಳಕು ನೀಡುವ, ಹೆಜ್ಜೆಯೊಂದನ್ನು ಇರಿಸಿದ್ದೇವೆ… ಬೆಂಬಲಿಸಿ.. ಬೇರೆಯವರಿಗೂ ಹೇಳಿ… ಇನ್ನೊಬ್ಬರೂ ಬೆಳೆಯಲಿ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel