ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು (ರಿ) ವಾರ್ಷಿಕವಾಗಿ ನೀಡುವ ಪರಮೇಶ್ವರ ಭಟ್ಟ ಬಾಳಿಲ ಪ್ರಶಸ್ತಿಗೆ ಈ ಬಾರಿ (2021–22) ಉತ್ತರ ಕನ್ನಡದ ಕುಮಟಾದ ಸಾಹಿತಿ ನಾರಾಯಣ ಕೃಷ್ಣ ಶಾನುಭಾಗ ಅವರು ಆಯ್ಕೆಯಾಗಿದ್ದಾರೆ.
ಹವ್ಯಕ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿರುವವರನ್ನುಗುರುತಿಸಿ, ಸಾಹಿತಿ ಪರಮೇಶ್ವರ ಭಟ್ಟ ಬಾಳಿಲ ಅವರ ಹೆಸರಿನಲ್ಲಿ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು 5000 ನಗದು, ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಶಸ್ತಿ ಪುರಸ್ಕೃತರ ಪರಿಚಯ: ಕುಮಟಾ ತಾಲ್ಲೂಕಿನ ವಾಲಗಳ್ಳಿಯಲ್ಲಿ ನಾರಾಯಣಕೃಷ್ಣ ಶಾನುಭಾಗರು ಕೃಷ್ಣ ಶಾನುಭೋಗ ಹಾಗೂ ಮಹಾದೇವಿದಂಪತಿಯ ಮೊದಲ ಮಗ.
ಕೃಷಿಕ ಕುಟುಂಬದಿಂದ ಬಂದವರಾದ ಶಾನುಭೋಗರು ಪ್ರಾಥಮಿಕ ಶಿಕ್ಷಣವನ್ನು ವಾಲಗಳ್ಳಿ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಕೂಜಳ್ಳಿಯಲ್ಲಿ ಪಡೆದರು. ಕಾರವಾರದ ಸರಕಾರಿ ಪಾಲಿಟೆಕ್ ಕಾಲೇಜಿನಲ್ಲಿ ಸಿವಿಲ್ಇಂ ಜಿನಿಯರಿಂಗ್ನಲ್ಲಿ ಡಿಪ್ಲೊಮಾ, ಅದೇ ಕಾಲೇಜು, ಬೆಳಗಾವಿ ಪಾಲಿಟೆಕ್ನಿಕ್ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಎಎಂಐಐ ಇಂಜಿನಿಯರಿಂಗ್ ಪದವಿ. 1973ರಲ್ಲಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಇಂಜಿನಿಯರ್ ಆಗಿ ಸೇವೆ ಆರಂಭಿಸಿ ಕಾರ್ಯಪಾಲಕ ಇಂಜಿನಿರ್ ಆಗಿ ಮುಂದೆ 2001 ರಲ್ಲಿ ನಿವೃತ್ತಿಯಾದರು.
ಹವ್ಯಕ ಮಹಾಸಭೆಯ ಹವ್ಯಕ ಅಧ್ಯಯನ ಕೇಂದ್ರದ ಸ್ಥಾಪಕ ಪ್ರಧಾನ ನಿರ್ದೇಶಕರಾಗಿ 10 ವರ್ಷಗಳ ಕಾಲ ಸೇವೆಸಲ್ಲಿಸಿರುವ ನಾರಾಯಣ ಕೃಷ್ಣ ಶಾನುಭಾಗರು, 22 ಪುಸ್ತಕಗಳು ಪ್ರಕಟಣೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
‘
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …
ಬೇಸಿಗೆಯಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್…