ನೂತನ ಸಂಸತ್ ಭವನವ ಉದ್ಘಾಟನೆ

May 25, 2023
12:01 PM

ದೆಹಲಿಯಲ್ಲಿ ನಿರ್ಮಿಸಲಾಗಿರುವ ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಬಾರದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಅನಾವರಣಗೊಳಿಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಅಷ್ಟೇ ಅಲ್ಲದೆ ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​ ಸೇರಿದಂತೆ ಇತರೆ ಪಕ್ಷಗಳು ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಇದರ ನಡುವೆಯೇ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಲು ಬೇರೆ ಎರಡು ಪಕ್ಷಗಳು ಸಮ್ಮತಿ ಕೂಡ ಸೂಚಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಜು ಜನತಾ ದಳ ಮತ್ತು ವೈಎಸ್‌ಆರ್‌ಸಿಪಿ ಎರಡೂ ಪಕ್ಷಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ಬುಧವಾರ ಪ್ರಕಟಿಸಿದವು. ನೂತನ ಸಂಸತ್ತಿನ ಉದ್ಘಾಟನೆ ಮೇ 28 ರಂದು ನಡೆಯಲಿದೆ. ಕಾಂಗ್ರೆಸ್ ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸೇರಿದಂತೆ 19 ವಿರೋಧ ಪಕ್ಷಗಳು ಬುಧವಾರ ಜಂಟಿ ಹೇಳಿಕೆ ನೀಡಿ ಬಹಿಷ್ಕಾರವನ್ನು ಘೋಷಿಸಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಅಡಿಕೆ ಕಳ್ಳಸಾಗಣೆ – ಈಶಾನ್ಯ ಭಾರತದ ರಾಷ್ಟ್ರೀಯ ಭದ್ರತೆಗೂ ಸವಾಲು – ದೇಶದ ಅಡಿಕೆ ಬೆಳೆಗಾರರ ಹಿತಾಸಕ್ತಿಗೂ ಆತಂಕ
November 27, 2026
11:08 AM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಕಾಕ್‌ಟೇಲ್ ತಯಾರಿಸಿದ ವಿಯೆಟ್ನಾಂ ಯುವಕ – ಅಡಿಕೆಗೆ ಜಾಗತಿಕ ವೇದಿಕೆಯಲ್ಲಿ ಹೊಸ ರೂಪ
November 26, 2026
8:50 PM
by: ದ ರೂರಲ್ ಮಿರರ್.ಕಾಂ
ಜನವರಿಯಲ್ಲಿ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ? ಮೀಸಲಾತಿ ಅಂತಿಮ ಅಧಿಸೂಚನೆ ಪ್ರಕಟ – ಸಚಿವ ಖಂಡ್ರೆ
November 25, 2026
10:30 PM
by: ದ ರೂರಲ್ ಮಿರರ್.ಕಾಂ
ಚಾಮಡ್ಕ ಜಲಪಾತದಲ್ಲಿ ಸ್ವಚ್ಛತಾ ಸಂಭ್ರಮ – ಮಕ್ಕಳ ಚಿತ್ರಗಳಲ್ಲಿ ಪರಿಸರ ಕಾಳಜಿಯ ಸಂದೇಶ
November 23, 2026
12:01 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror