ನಿತ್ಯ ಜಂಜಡದ ನಡುವೆ……… ಉಪ್ಪಿನಕಾಯಿಯ ಚಿಂತೆ..!

June 30, 2025
6:53 AM
ಅಡುಗೆ ಮನೆಯಲ್ಲಿ ಉಪ್ಪಿನಕಾಯಿ ಇಲ್ಲದಿದ್ದರೆ ಆದೀತೇ? ಬೇರೆ ಏನೂ ಇಲ್ಲದಿದ್ದರೂ ಒಂದು ತುಂಡು ಉಪ್ಪಿನಕಾಯಿ, ನೀರು ಮಜ್ಜಿಗೆ ಇದ್ದರೆ ನಮಗೆ ಮೃಷ್ಟಾನ್ನವೇ.

ಸುಮಾರು ಎರಡು ತಿಂಗಳಿನಿಂದ ನಿತ್ಯ ಮುಂಜಾನೆಯ ತೋಟದ ವಾಕಿಂಗ್ ಕೊನೆಯಾಗಿದೆ…. ಎಂತ ಹೇಳುತ್ತಿದ್ದಾಳೆ ಅನ್ನಿಸಿತಾ? ಈ ವರುಷದ ಕಾಡು ಮಾವಿನ ಹಣ್ಣು ಮುಗಿಯಿತು ಎಂಬುದು ವಿಷಯ. ಎರಡು ಮೂರು ಕವರ್ ತಗೊಂಡು ಬೇರೆ ಬೇರೆ ಜಾತಿಯ ಮಾವಿನ ಹಣ್ಣು ಹೆಕ್ಕಲು ಓಡೋಡಿ ಹೋಗುತ್ತಿದ್ದ ಕೆಲಸಕ್ಕೆ ಸದ್ಯ ವಿರಾಮ. ಇನ್ನು ಮುಂದಿನ ವರ್ಷ. ಯಾವ ಮಾವಿನ ಮರ ಫಲ ಬಿಡ ಬಹುದು?

Advertisement

ಉಪ್ಪಿನಕಾಯಿ ಮಿಡಿ ಹಾಕುವ ಮರ ಈ ಬಾರಿ ಹೂ ಬಿಟ್ಟಿತ್ತು ಆದರೆ ಉಳಿಯಲಿಲ್ಲ. ಮುಂದಕ್ಕೆ ಆಗ ಬಹುದೋ ಇಲ್ಲವೋ ಗೊತ್ತಿಲ್ಲ. ಸ್ವಲ್ಪ ಹಾಕಿದ ಉಪ್ಪಿನಕಾಯಿ ಸಾಕಗ ಬಹುದೋ ಗೊತ್ತಿಲ್ಲ. ನೆಕ್ಕರೆ ಮಾವಿನಕಾಯಿಯ ತುಂಡು ಉಪ್ಪಿನಕಾಯಿಯೇ ಗತಿಯಾ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ಸ್ವಲ್ಪ ಬೇಯಿಸಿದ ತುಂಡು ಹಾಕಿ ಇಟ್ಟು ಕೊಂಡರೆ ಧೈರ್ಯ ಅಂತ ಮಾಡಿ ಇಟ್ಟದ್ದೂ ಆಗಿದೆ. ಮನೆ ಎಂದ ಮೇಲೆ ಉಪ್ಪಿನಕಾಯಿ ಇಲ್ಲದಿದ್ದರೆ ಆದೀತೇ? ಬೇರೆ ಏನೂ ಇಲ್ಲದಿದ್ದರೂ ಒಂದು ತುಂಡು ಉಪ್ಪಿನಕಾಯಿ, ನೀರು ಮಜ್ಜಿಗೆ ಇದ್ದರೆ ನಮಗೆ ಮೃಷ್ಟಾನ್ನವೇ.

ನಿತ್ಯ ಕಾರ್ಯಕ್ರಮಕ್ಕೆ ಹೋಗಿ ಗಡದ್ದು ಊಟ ಮಾಡಿ ಬಾಯಿ ಕೆಟ್ಟಾಗ ಲಿಂಬೆಹುಳಿಯ ಚಪ್ಪೆ ಉಪ್ಪಿನಕಾಯಿ ಮಜ್ಜಿಗೆಗೆ ಸರಿಸಾಟಿಯಾದದ್ದು ಬೇರೆ ಯಾವುದೂ ಇಲ್ಲ. ಅದರಲ್ಲೂ ಈ ಉಪ್ಪಿನಕಾಯಿಗೆ ಬೇವಿನ ಸೊಪ್ಪು, ಗಾಂಧಾರಿ ಮೆಣಸು, ಶುಂಠಿಯ ಸಣ್ಣ ತುಂಡು, ಬೆಳ್ಳುಳ್ಳಿಯ ಕೊಚ್ಚಲು ತೆಂಗಿನ ಎಣ್ಣೆಯ ಒಗ್ಗರಣೆಗೆ ಲಿಂಬೆ ಹುಳಿಯ ರಸ ತೆಗೆದ ಸಿಪ್ಪೆಯ ಪುಟ್ಟ ತುಂಡುಗಳನ್ನು ಹಾಕಿ ಮಾಡಿದ ಉಪ್ಪಿನ ಕಾಯಿ ಸೂಪರ್. ಒಮ್ಮೆ ಮಾಡಿ ಹೇಳಿ ಆಯ್ತಾ!

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ನೀವೀಗ ಕಾಳುಮೆಣಸು ಕೃಷಿ ಆಸಕ್ತರೇ….?, ಹಾಗಿದ್ದರೆ ಗಮನಿಸಿ….| ಕಾಳುಮೆಣಸು ಕೃಷಿಯ ಕಾರ್ಯ ಚಟುವಟಿಕೆಗಳು
July 9, 2025
2:25 PM
by: ಅರುಣ್‌ ಕುಮಾರ್ ಕಾಂಚೋಡು
ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?
July 8, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಬದುಕು ಪುರಾಣ | ದಾನಕ್ಕೆ ಬಂದ ಮಾನ 
July 6, 2025
8:00 AM
by: ನಾ.ಕಾರಂತ ಪೆರಾಜೆ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಚಂದನ್‌ ಕೆ ಪಿ
July 5, 2025
11:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror