ಅಡಿಕೆಗೆ ಔಷಧಿ ಸಿಂಪಡಣೆ ಬಹುದೊಡ್ಡ ಸವಾಲು. ಕಾರಣ ನುರಿತ ಕಾರ್ಮಿಕರ ಕೊರತೆ ಹಾಗೂ ಮಳೆಗಾಲ ಮರ ಏರುವ ಸಮಸ್ಯೆ. ಇದಕ್ಕೆ ಪರಿಹಾರವಾಗಿ ಪೈಬರ್ ದೋಟಿ ಬಳಕೆಗೆ ಬಂದಿತು. ಇದಕ್ಕಾಗಿಯೇ ತರಬೇತಿ ನಡೆಯಿತು. ಕೆಲವು ಕಡೆ ಜಾಬ್ ವರ್ಕ್ ಆರಂಭವಾದವು. ಇಂತಹ ಜಾಬ್ ವರ್ಕ್ ಮಾಡಿದ ಮುಂಚೂಣಿಯಲ್ಲಿರುವ ಸಂಸ್ಥೆ ವಿಟ್ಲ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಫ್ ಪಿ ಒ ಪಿಂಗಾರ. ಈ ವರ್ಷ ದೋಟಿ ತಂಡದ ಮೂಲಕ 20 ಲಕ್ಷ ವ್ಯವಹಾರ ನಡೆಸಿದೆ. ಸಂಸ್ಥೆಯನ್ನು ರಾಮ್ ಕಿಶೋರ್ ಮಂಚಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಅಡಿಕೆ ಕೃಷಿಕರಿಗೆ ವರವಾಗುವಂತಹ ಕಾರ್ಯವೊಂದನ್ನು ವಿಟ್ಲದ ಪಿಂಗಾರ ಸಂಸ್ಥೆ ಮಾಡಿದೆ. ಪಿಂಗಾರವು ರೈತರಿಂದಲೇ ರಚನೆಯಾದ ಸಂಸ್ಥೆ. ರೈತ ಪರವಾದ ಹಲವು ಕಾರ್ಯಕ್ರಮ, ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸುತ್ತಿರುವ ಈ ಸಂಸ್ಥೆ ಈ ಬಾರಿ ಅಡಿಕೆ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿತ್ತು. ಕಾರ್ಬನ್ ಪೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಗೆ ಸಾಧ್ಯ ಎಂಬುದು ಮನಗಂಡ ಬಳಿಕ ಈ ಸಂಸ್ಥೆ ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಗೆ ಜಾಬ್ ವರ್ಕ್ ನಡೆಸಲು ಸಿದ್ಧತೆ ನಡೆಸಿ ಮಾರ್ಚ್ ಆರಂಭದಿಂದ ಈ ಕೆಲಸ ಆರಂಭಿಸಿತು. ಇದೀಗ ಒಟ್ಟು 20 ಲಕ್ಷ ವ್ಯವಹಾರ ಇದೇ ಕಾರ್ಯದಿಂದ ನಡೆಸಿದೆ.
ಇಲ್ಲಿ ಇದಕ್ಕಾಗಿಯೇ 22 ಜನ ಕೆಲಸ ಮಾಡಿದ್ದಾರೆ. ಪಿಂಗಾರ ಸಂಸ್ಥೆಯ ವತಿಯಿಂದಲೇ ಖಾಯಂ ಆಗಿರುವ 12 ಜನ ಇದ್ದರೆ ಉಳಿದವರೆಲ್ಲಾ ಅಗತ್ಯ ಇದ್ದಾಗ ನೆರವಾಗುವ ತಂಡ. ದೋಟಿ ಹಾಗೂ ಪಂಪ್ ಸೇರಿದಂತೆ ಸುಮಾರು 10 ಲಕ್ಷ ರೂಪಾಯಿ ದೋಟಿಯ ಜಾಬ್ ವರ್ಕ್ ತಂಡಕ್ಕೆ ವಿನಿಯೋಗಿಸಿದ ಪಿಂಗಾರ ಸಂಸ್ಥೆ ಈ ವರ್ಷ ಮೊದಲ ಹೆಜ್ಜೆಯಲ್ಲಿ 20 ಲಕ್ಷ ವ್ಯವಹಾರ ಮಾಡಿದೆ. ವಿಟ್ಲ, ಪುಣಚ, ಪುತ್ತೂರು ಸೇರಿದಂತೆ ಕಾಸರಗೋಡು, ಕಡಬ ಪ್ರದೇಶದ ಕೆಲವು ಅಡಿಕೆ ಬೆಳೆಗಾರರ ತೋಟಗಳಿಗೆ ತೆರಳಿ ಔಷಧಿ ಸಿಂಪಡಣೆ ಹಾಗೂ ಅಡಿಕೆ ಕೊಯ್ಲು ಮಾಡಿದ್ದಾರೆ. ಒಟ್ಟು 8 ದೋಟಿ ಬಳಕೆಯಾಗಿದೆ. ತೀರಾ ಬೇಡಿಕೆ ಇದ್ದಾಗ ಬಾಡಿಗೆಗೆ ಪಡೆದು 11 ದೋಟಿಯವರೆಗೂ ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಅಡಿಕೆ ಔಷಧಿ ಸಿಂಪಡಣೆಯ ಜಾಬ್ ವರ್ಕ್ ಮೂಲಕ ಯಶಸ್ವಿಯಾದ ಪಿಂಗಾರ ಸಂಸ್ಥೆ ಈಗ ಮಾದರಿಯಾಗಿದೆ.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು…
ಇಂದ್ರಿಯ ನಿಗ್ರಹವನ್ನೊಳಗೊಂಡ ಬ್ರಹ್ಮಚರ್ಯವು ಕೇವಲ ಬಾಲ್ಯಕಾಲದ ನಿಬಂಧನೆಯಲ್ಲ. ಅದು ಅವಿವಾಹಿತರಿಗಷ್ಟೇ ಅಲ್ಲ, ವಿವಾಹಿತರಿಗೂ…
ಅಂತರ್ಮುಖಿಯಾಗಲು, ಆಧ್ಯಾತ್ಮದ ಹಾದಿಯಲ್ಲಿ ಮುನ್ನಡೆಯಲು ಚಾತುರ್ಮಾಸ ಉತ್ತಮ ಸಂದರ್ಭ. ಪ್ರಪಂಚವನ್ನು ಕತ್ತಲು ಮಾಡಿ…
ಈಗಿನಂತೆ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿದ್ದು, ಜುಲೈ 16ರಿಂದ…
ಮುಂದಿನ ಏಳು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಕೆಲವು ಕಡೆ ಭಾರೀ…
ಇತಿಹಾಸದಲ್ಲಿ ಮೊದಲ ಬಾರಿಗೆ ಕೇರಳ ಕೊಬ್ಬರಿ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.ತೆಂಗಿನಕಾಯಿ ಉತ್ಪಾದನೆಯಲ್ಲಿ…