Advertisement
MIRROR FOCUS

ಹಳ್ಳ-ಕೊಳ್ಳ, ನದಿ,ಕೆರೆ ತುಂಬಿದ್ದರು ಕುಡಿಯೋಕೆ ನೀರಿಲ್ಲ | ಉತ್ತರ ಕನ್ನಡದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಪರದಾಡುತ್ತಿರುವ ಜನತೆ

Share

ಕಳೆದ 10-12 ದಿನಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕನ್ನಡದ(Uttara Kannada) ಜನತೆ ನಲುಗಿದ್ದಾರೆ. ಈ ಮಧ್ಯೆ ಅಂಕೋಲದಲ್ಲಿ ನಡೆದ ಗುಡ್ಡ ಕುಸಿತ ದುರಂತ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿತ್ತು. ಇದೀಗ ಉತ್ತರ ಕನ್ನಡದಲ್ಲಿ ಮಳೆ(Rain) ಅಬ್ಬರ ಕಮ್ಮಿಯಾಗಿ ನದಿ, ತೊರೆ, ಬಾವಿಗಳು ನೀರಿನಿಂದ ತುಂಬಿದ್ದರು, ಕೆಲ ಊರಿನ ಜನಕ್ಕೆ ಕುಡಿಯಲು(Drinking water) ಹಾಗೂ ದಿನ ಬಳಕೆಗೆ ನೀರಿಲ್ಲದೆ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ನೆರೆ ಬಂದು ಜನರ ಜೀವನ ದಿಕ್ಕಾಪಾಲಾಗಿದೆ. ಸದ್ಯ ಕುಮಟಾದ ಹಲವೆಡೆ ಜನರಿಗೆ ಕುಡಿಯಲು ನೀರಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸ. ಹೌದು, ಅಘನಾಶಿನಿಯ (Aghanashini) ನೆರೆಗೆ ಸಿಕ್ಕಿ ನಲುಗುತ್ತಿರುವ ಕುಮಟಾದ ಹೆಗಡೆ ಗ್ರಾಮಸ್ಥರಿಗೆ ಕುಡಿಯಲು ನೀರಿಲ್ಲ.

Advertisement
Advertisement
Advertisement
Advertisement

ನೀರು ಪೂರೈಕೆ : ಅಣ್ಣಪ್ಪ ಎಂಬುವವರ ನೇತೃತ್ವದಲ್ಲಿ ಯುವಾಬ್ರಿಗೇಡ್‌ನ 10 ಜನರ ತಂಡವೊಂದು ಕುಮಟಾ ತಾಲೂಕಿನ ಹೆಗಡೆಯ ಗ್ರಾಮದ 40 ಮನೆಗಳಿಗೆ ಹಗಲು- ರಾತ್ರಿ ಎನ್ನದೇ ನೀರು ಪೂರೈಕೆ ಮಾಡಿದೆ. ಕಳೆದ ಮೂರು ದಿನಗಳಿಂದ ಕುಡಿಯುವ ನೀರಿನ ಪೂರೈಕೆಯನ್ನು ಮಚಗೋಣದಿಂದ ತಂದು ಈ ತಂಡ ಪೂರೈಸುತ್ತಿದೆ. ಈಗಾಗಲೇ ಗ್ರಾಮಸ್ಥರಿಗಾಗಿ 12,000 ಲೀಟರ್‌ನಷ್ಟು ನೀರನ್ನು ಹಂಚಿದೆ. ಎರಡು ಪಿಕಪ್‌ ವಾಹನಗಳಲ್ಲಿ ತಂಡದ ಸದಸ್ಯರು 40 ಕುಟುಂಬದ 200 ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಒಟ್ಟಿನಲ್ಲಿ ಸಮುದ್ರ ತುಂಬಾ ನೀರಿದ್ರೂ, ಕುಡಿಯೋಕೆ ಆಗಲ್ಲ ಅನ್ನೋ ಹಾಗೆ ಉತ್ತರ ಕನ್ನಡದ ಹಲವೆಡೆ ಮನೆ ಸುತ್ತಮುತ್ತ ನೀರಿದ್ರೂ ನೆರೆಯ ನಡುವೆ ಕುಡಿಯುವ ನೀರಿಗಾಗಿ ಬವಣೆ ಎದುರಿಸುವಂತಾಗಿದೆ.

Advertisement

ನೆರೆಯಿಂದಾಗಿ ನೀರಿನಲ್ಲಿ ಕೆಸರು ಹಾಗೂ ಮಣ್ಣು ಮಿಶ್ರಣಗೊಂಡಿರುವುದರಿಂದ ಗೃಹ ಬಳಕೆಗೆ ಉಪಯೋಗಿಸಲಾಗಂತಾಗಿದೆ. ಇದರಿಂದ ಊರ ಜನ ನೀರಿಗಾಗಿ ಪರದಾಡುವಂತಾಗಿದೆ. ಜನ ಪ್ರತಿನಿಧೀಗಳು ಮಾಡಬೇಕಾದ ಕೆಲಸವನ್ನು ಯುವಾ ಬ್ರಿಗೇಡ್‌ ಮಾಡಿ ಊರ ಜನರ ನೀರಿನ ಬವಣೆಯನ್ನು ನೀಗಿಸುತ್ತಿದೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

2 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

3 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

3 days ago

ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…

3 days ago