ಹವಾಮಾನ ಬದಲಾವಣೆಯ ಪರಿಣಾಮವಾಗಿ ಸಮುದ್ರದಲ್ಲಿನ ವಿವಿಧ ಪ್ರಾಣಿಗಳ ಮೇಲೆ ಪರಿಣಾಮ ಬೀರಿವೆ ಎಂದು ಸಂಶೋಧನಾ ವರದಿ ಬಹಿರಂಗ ಮಾಡಿದೆ. ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಮತ್ತು ಜಾಗತಿಕ ಸಮುದ್ರ ತಜ್ಞರು ಸಮುದ್ರ ಜೀವಶಾಸ್ತ್ರದ ಬಗ್ಗೆ ಪರಿಶೀಲಿಸಿದ್ದರು.
ಹವಾಮಾನ ಬದಲಾವಣೆಯಿಂದ ವಾತಾವರಣದ ಏರುಪೇರಾಗಿವೆ. ಈ ಕಾರಣದಿಂದ ಮೀನುಗಾರಿಕಾ ವಲಯದ ಸುಮಾರು 4000 ವಿವಿಧ ಜಲಚರಗಳು ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಈಗ ಜಲಚರಗಳಲ್ಲಿ ಅತ್ಯಂತ ದುರ್ಬಲವಾಗಿರುವ ಹಾಗೂ ಹೆಚ್ಚು ಅಪಾಯದಲ್ಲಿರುವ ಸಮುದ್ರದ ಜಲಚರ ಜಾತಿಗಳನ್ನು ಗುರುತಿಸಲಾಗುತ್ತಿದೆ. ಈ ಮೂಲಕ ಜಾಗತಿಕವಾಗಿ ಜಲಚರಗಳ ಸಂರಕ್ಷಣೆ ಹಾಗೂ ಮಾನವ ಹಸ್ತಕ್ಷೇಪದ ಹವಾಮಾನ ಬದಲಾವಣೆ ತಡೆಯುವ ಪ್ರಯತ್ನ ನಡೆಸಬಹುದಾಗಿದೆ ಎಂದು ವರದಿಯಾಗಿದೆ.
ಮೃದ್ವಂಗಿಗಳು, ಹವಳಗಳು ನಮ್ಮ ಸಾಗರಗಳಲ್ಲಿನ ಆಳದಲ್ಲಿ ಸಂಕಷ್ಟ ಅನುಭವಿಸುತ್ತಿವೆ ಹಾಗೂ ವಿವಿಧ ಮಾಲಿನ್ಯಗಳನ್ನು ಎದುರಿಸುತ್ತಿವೆ. ನಕ್ಷತ್ರ ಮೀನುಗಳು, ಸಮುದ್ರ ಬಸವನಗಳು ಮತ್ತು ಹಾರುವ ಮೀನುಗಳು ಹವಾಮಾನ ಬದಲಾವಣೆ- ಸಂಬಂಧಿತ ಒತ್ತಡಗಳಿಗೆ ಹೆಚ್ಚು ಗುರಿಯಾಗುತ್ತವೆ ಎಂದು ನಾವು ಕಂಡುಹಿಡಿದಿದ್ದೇವೆ, ಇವೆಲ್ಲವೂ ಪ್ರಪಂಚದಾದ್ಯಂತದ ಸಾಗರಗಳಲ್ಲಿ ಕಂಡುಬರುತ್ತದೆ ಎಂದು ಸಂಶೋಧಕ ಡಾ.ಬುಟ್ ವರದಿ ಮಾಡಿದ್ದಾರೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…