ವಾರದ ಹಿಂದೆ ಮುಂದ್ರಾ ಬಂದರಿನಲ್ಲಿ ಎಣ್ಣೆಯ ಹೆಸರಿನಲ್ಲಿ ಆಮದಾಗಿದ್ದ ಅಡಿಕೆ ಪತ್ತೆಯಾಗಿತ್ತು. ಇದೀಗ ನಾಗ್ಪುರದಲ್ಲಿ ದಾಸ್ತಾನು ಇರಿಸಿದ್ದ ಸುಮಾರು 20 ಸಾವಿರ ಕೆಜಿ ಅಡಿಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೋಲ್ಡ್ ಸ್ಟೋರೇಜ್‌ನಲ್ಲಿ ದಾಸ್ತಾನು ಇರಿಸಿದ್ದ ಅಡಿಕೆಯನ್ನು ಲೋಡ್ ಮಾಡುತ್ತಿದ್ದ ವೇಳೆ ಪೊಲೀಸರು ಇಪ್ಪತ್ತು ಸಾವಿರ ಕೆಜಿ ತೂಕದ 250 ಮೂಟೆಗಳ ಕಳಪೆ ಗುಣಮಟ್ಟದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸರಕುಗಳನ್ನು ಆಹಾರ ಮತ್ತು ಔಷಧಿಗಳ ಆಡಳಿತಕ್ಕೆ (ಎಫ್ಡಿಎ) ಹಸ್ತಾಂತರಿಸಲಾಗಿದೆ.
ಮಧ್ಯ ಭಾರತದ ಮಹಾರಾಷ್ಟ್ರದ ನಾಗ್ಪುರ, ಉತ್ತರ ಪ್ರದೇಶ, ಗುಜರಾತ್ ಮೊದಲಾದ ಪ್ರದೇಶಗಳು ಅಡಿಕೆ ಪೂರೈಕೆಯ ಪ್ರಮುಖ ಕೇಂದ್ರಗಳು. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ವ್ಯವಹಾರ ನಡೆಯುತ್ತದೆ. ಈಚೆಗೆ ಕೆಲವು ವ್ಯಾಪಾರಿಗಳು ವಿದೇಶದ ಅಡಿಕೆಯನ್ನು ಬೃಹತ್ ಪ್ರಮಾಣದಲ್ಲಿ ಕಳ್ಳ ದಾರಿಯ ಮೂಲಕ ಅಥವಾ ನಕಲಿ ಹೆಸರಿನಲ್ಲಿ ಅಡಿಕೆ ಆಮದು ಮಾಡುತ್ತಿರುವುದು ಬೆಳೆಕಿಗೆ ಬಂದಿದೆ. ಹೀಗಾಗಿ ತಪಾಸಣೆ ಬಿಗುಗೊಂಡಿದೆ. ಕೆಲವು ವ್ಯಾಪಾರಿಗಳು, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಶ್ರೀಲಂಕಾದಿಂದ ಕಡಿಮೆ ವೆಚ್ಚದಲ್ಲಿ ಕೆಳದರ್ಜೆಯ ಅಡಿಕೆಯನ್ನು ಕಳ್ಳಸಾಗಣೆ ಮಾಡುತ್ತಾರೆ, ಅವುಗಳನ್ನು ರಾಸಾಯನಿಕ ಸಿಹಿಕಾರಕಗಳು ಮತ್ತು ಸುವಾಸನೆಗಳೊಂದಿಗೆ ಸಂಸ್ಕರಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
ಇದೀಗ ಕಳಪೆ ಗುಣಮಟ್ಟದ ಅಡಿಕೆಯ ಮೇಲೆ ದಾಳಿ ಪ್ರಕ್ರಿಯೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಸುಳಿವಿನ ಮೇರೆಗೆ ಡಿಸಿಪಿ ನಿಕೇತನ್ ಕದಂ ಅವರ ಮೇಲ್ವಿಚಾರಣೆಯಲ್ಲಿ ಹಿರಿಯ ಇನ್ಸ್‌ಪೆಕ್ಟರ್ ಗೋಕುಲ್ ಮಹಾಜನ್ ಅವರ ಕಲಾಮ್ನಾ ಪೊಲೀಸ್ ತಂಡವು ಕಳಪೆ ಗುಣಮಟ್ಟದ ಅಡಿಕೆ ವಶಪಡಿಸಿಕೊಂಡಿದೆ.
ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 1.6…
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳ ಹಲವು ಕಡೆ ಸಂಜೆ ಉತ್ತಮ ಮಳೆಯಾಗಿದೆ.…
ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ…
ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಎಂದು ಗದಗ…
ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ-ಎಂಐಎಸ್ ಅಡಿಯಲ್ಲಿ ಬೆಲೆ ಕೊರತೆ ಪಾವತಿ-ಪಿಡಿಪಿ ಯೋಜನೆಯನ್ನು…
ಅನಧಿಕೃತ ಮರಳು ಸಾಗಾಟ ತಡೆಯಲು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆ ಮರಳು ಸಮಿತಿಗೆ…