ಕರಾವಳಿಗರಿಗೆ ಸಿಹಿ ಸುದ್ದಿ | ಮಂಗಳೂರು, ಕಾರವಾರದಲ್ಲಿ ಬಂದರು ನಿರ್ಮಾಣ | 13 ಐಲ್ಯಾಂಡ್‌ಗಳ ಅಭಿವೃದ್ಧಿ| ಸಚಿವ ಮಂಕಾಳ್ ವೈದ್ಯ ಭರವಸೆ

November 10, 2023
11:28 AM
ಕರಾವಳಿ ಜಿಲ್ಲೆಯಲ್ಲಿ ಬಂದರು ಅಭಿವೃದ್ಧಿ ಬಗ್ಗೆ ಚಿಂತನೆ ನಡೆಯುತ್ತಿದೆ.

ಮಂಗಳೂರು(Mangalore), ಉಡುಪಿ(Udupi), ಉತ್ತರಕನ್ನಡ (Uttar kannada) ಸುಂದರ ಕರಾವಳಿ ತೀರಗಳನ್ನು(Coastal Area) ಹೊಂದಿರುವ ಜಿಲ್ಲೆಗಳು. ಮನಸ್ಸು ಮಾಡಿದ್ರೆ ಪ್ರವಾಸೋದ್ಯಮ(Tourism), ಮತ್ಸೋದ್ಯಮ(Fishery) ಮೂಲಕ ಭಾರಿ ವಾಣಿಜ್ಯ ಚಟುವಟಿಕೆಗಳನ್ನೇ ನಡೆಸಬಹುದು. ಆದರೆ ನಮಮ್ಮ ಸರ್ಕಾರಗಗಳು ಅದ್ಯಾವುದನ್ನು ತುಂಬಾ ಸೀರಿಯಸ್‌ ಆಗಿ ತೆಗೆದುಕೊಂಡಿದ್ದೇ ಇಲ್ಲ. ಒಂದು ವೇಳೆ ಕರಾವಳಿಯನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ರೆ ಅದರಿಂದ ಸರ್ಕಾರದ ಬೊಕ್ಕಸಕ್ಕೆ ಅದೆಷ್ಟು ಹಣ ಹರಿದು ಬರಹುದೋ..? ಇದೀಗ ಮಂಗಳೂರು (Mangaluru) ಮತ್ತು ಕಾರವಾರದಲ್ಲಿ (Karawara) ಬಂದರು ನಿರ್ಮಾಣ ಮಾಡಲಾಗುತ್ತದೆ ಎಂದು ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವ ಮಂಕಾಳ್ ವೈದ್ಯ (Mankal Vaidya) ಭರವಸೆ ನೀಡಿದ್ದಾರೆ.

ಉತ್ತರ ಕನ್ನಡ,  ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಸಭೆ ವಿಧಾನಸೌಧದಲ್ಲಿ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವ ಮಂಕಾಳ್ ವೈದ್ಯ, ಕಾರವಾರ, ಮಂಗಳೂರಿನಲ್ಲಿ ಬಂದರು ಮಾಡಲು ಇವತ್ತಿನ ಸಭೆಯಲ್ಲಿ ಚರ್ಚೆಯಾಗಿದೆ. 1 ಕೋಟಿ ರೂ. ನಿಂದ 1 ಸಾವಿರ ಕೋಟಿ ರೂ.ನಲ್ಲಿ ಬಂದರು (Port) ಮಾಡಬಹುದು. ಯಾವ ಮಾದರಿಯಲ್ಲಿ ಬಂದರು ಮಾಡಬೇಕು ಎಂದು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಮಾರುಕಟ್ಟೆ ಮತ್ತು ಪ್ರವಾಸೋದ್ಯಮ ಗಮನದಲ್ಲಿಟ್ಟುಕೊಂಡು ಬಂದರು ಮಾಡಲು ಚರ್ಚೆಯಾಗಿದೆ. ಆದಷ್ಟು ಬೇಗ ಇದಕ್ಕೆ ಬ್ಲೂ ಪ್ರಿಂಟ್ ರೆಡಿ ಮಾಡುವುದಾಗಿ ತಿಳಿಸಿದರು.

ಮೀನುಗಾರರಿಗೆ 200 ಲೀಟರ್ ಡೀಸೆಲ್ ಕೊಡುವುದಾಗಿ ಹೇಳಿದ್ದೇವೆ ಅದನ್ನು ಕೊಡುತ್ತೇವೆ. ಮೀನುಗಾರರಿಗೆ ಸೀಮೆಎಣ್ಣೆ ಬಗ್ಗೆ ಸಮಸ್ಯೆ ‌ಇತ್ತು. ಇದರಿಂದ ಮೀನುಗಾರಿಗೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ 10 ತಿಂಗಳು ಬಿಳಿ ಸೀಮೆಎಣ್ಣೆಯನ್ನು ಸರ್ಕಾರವೇ ಖರೀದಿ ಮಾಡಿ 35 ರೂಪಾಯಿ ಸಬ್ಸಿಡಿ ದರದಲ್ಲಿ ಮೀನುಗಾರಿಕೆ (Fishing) ಮಾಡುವವರಿಗೆ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ ಸೀಮೆಎಣ್ಣೆ ಕೊಡುತ್ತಿಲ್ಲ. ಹೀಗಾಗಿ ದೇಶದಲ್ಲಿ ‌ಮೊದಲ ಬಾರಿಗೆ ನಾವೇ ಸೀಮೆಎಣ್ಣೆ ‌ಕೊಡುತ್ತಿದ್ದೇವೆ. ಸರ್ಕಾರ 300 ಲೀಟರ್ ನೀಡಲು ಸಿದ್ದ ಎಂದು ಹೇಳಿದರು.

ಬೆಂಗಳೂರಿನಲ್ಲಿ ನವೆಂಬರ್ 21 ರಂದು ವಿಶ್ವ ಮೀನುಗಾರಿಕೆ ದಿನ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂದು 8 ಲಕ್ಷ ಮೌಲ್ಯದ ಮೀನುಗಾರರಿಗೆ ಮೀನು ಮಾರಾಟ ಮಾಡುವ ಗಾಡಿ ಕೊಡುತ್ತಿದ್ದೇವೆ. 300 ಗಾಡಿ ಪೈಕಿ ಬೆಂಗಳೂರಿಗೆ 150 ಗಾಡಿ ಕೊಡುತ್ತಿದ್ದೇವೆ. ಸರ್ಕಾರ ಸೆಕ್ಯುರಿಟಿ ಫಂಡ್ ಹೆಸರಿನಲ್ಲಿ ಫಲಾನುಭವಿಗಳಿಂದ 2 ಲಕ್ಷ ರೂ. ಡೆಪಾಸಿಟ್ ಪಡೆದುಕೊಳ್ಳುತ್ತದೆ. ಎಸ್‌ಸಿ ಎಸ್‌ಟಿ ಫಲಾನುಭವಿಗಳಿಂದ 1.5 ಲಕ್ಷ ರೂ. ಡೆಪಾಸಿಟ್‌ ತೆಗೆದುಕೊಳ್ಳುತ್ತೇವೆ ಎಂದರು.

3 ಜಿಲ್ಲೆಗಳಲ್ಲಿ 13 ಐಲ್ಯಾಂಡ್ ಗುರುತಿಸಿದ್ದು, ಅಭಿವೃದ್ಧಿ ಮಾಡಲು ಪಿಪಿಪಿ ಮಾಡೆಲ್ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಐಲ್ಯಾಂಡ್ ಅಭಿವೃದ್ಧಿ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ. ಈ‌ ನಿಟ್ಟಿನಲ್ಲಿ ಇವತ್ತಿನ ಸಭೆಯಲ್ಲಿ ಚರ್ಚೆಯಾಗಿದೆ ಎಂದರು. ಅಂಕೋಲದಲ್ಲಿ (Ankola)‌ ವಿಮಾನ ನಿಲ್ದಾಣಕ್ಕೆ (Air Port) ಬೇಕಾದ ಜಮೀನು ಖರೀದಿಯ ಪ್ರಕ್ರಿಯೆಗಳು ನಡೆಯುತ್ತಿವೆ. ಭೂಮಿ ಕೊಡುವವರಿಗೆ ಪರ್ಯಾಯ ಭೂಮಿ ನೀಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Fisheries and Ports Minister Mankal Vaidya has assured that ports will be built in Mangaluru and Karawara. People’s representatives of Uttara Kannada, Dakshina Kannada, Udupi district and officials of various departments met at Vidhansauda. Speaking after the meeting, Minister Mankal Vaidya said that there was a discussion in today’s meeting to make a port at Karwar, Mangalore.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?
July 15, 2026
2:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?
July 15, 2026
7:02 AM
by: ದ ರೂರಲ್ ಮಿರರ್.ಕಾಂ
ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror