Advertisement
ಸುದ್ದಿಗಳು

ಸಕಾರಾತ್ಮಕ ಪತ್ರಿಕೋದ್ಯಮ ತರಗತಿ | ಸುದ್ದಿ ಸಂಗ್ರಹಿಸುವ ವೇಳೆ ಪತ್ರಕರ್ತನಲ್ಲಿ ಸಕಾರಾತ್ಮಕ ಯೋಚನೆ ಬೇಕು | ಹಿರಿಯ ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು

Share

ಯಾವುದೇ ಸುದ್ದಿ ಸಂಗ್ರಹದ ವೇಳೆ ಪತ್ರಕರ್ತನಲ್ಲಿ ಸಕಾರಾತ್ಮಕ ಮನೋಭಾವ ಇಲ್ಲದೇ ಇದ್ದಲ್ಲಿ ಉತ್ತಮ ವರದಿಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಪೂರ್ವಾಗ್ರಹ ಇಲ್ಲದ, ಸಕಾರಾತ್ಮಕ ಮನಸ್ಥಿತಿಯಲ್ಲಿಯೇ ವರದಿಗೆ ತೆರಳಬೇಕು. ಹಾಗಿದ್ದಾಗ ಮಾತ್ರವೇ ಸಮಾಜಕ್ಕೆ ವರದಿಯ ಮೂಲಕ ಉತ್ತಮ ಸಂದೇಶ ನೀಡಲೂ ಸಾಧ್ಯ ಎಂದು ಹಿರಿಯ ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು ಹೇಳಿದರು.

Advertisement
Advertisement
Advertisement
Advertisement

ಅವರು ಪುತ್ತೂರಿನ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ದ ರೂರಲ್ ಮಿರರ್ ಡಿಜಿಟಲ್ ಮಿಡಿಯಾದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಸಕಾರಾತ್ಮಕ ಪತ್ರಿಕೋದ್ಯಮ ತರಬೇತಿ ತರಗತಿಗಳ ನೆಲೆಯಲ್ಲಿ ಆಯೋಜಿಸಲಾಗುತ್ತಿರುವ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಕ್ರವಾರದಂದು ಮಾತನಾಡಿದರು.

Advertisement

ಸುದ್ದಿಯನ್ನು ಗ್ರಹಿಸುವುದು ಚಾಣಾಕ್ಯತನವನ್ನು ಬೇಡುವ ಕಲೆ. ನಮ್ಮ ಸುತ್ತಮುತ್ತ ನಡೆಯುವ ವಿಚಾರಗಳಲ್ಲಡಗಿದ ವಿಭಿನ್ನ ಆಯಾಮಗಳನ್ನು ಗುರುತಿಸಿ ಪ್ರಸ್ತುತಪಡಿಸಬೇಕು. ಹಾಗೆಂದು ಸಾಮಾನ್ಯ ವಿಚಾರಗಳನ್ನು ವಿಶಿಷ್ಟವೆಂದು ವೈಭವೀಕರಿಸದೆ ಅಸಾಮಾನ್ಯ ವಿಷಯಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು. ಎಲ್ಲೂ ಸುದ್ದಿಯಾಗದ ಮಾಹಿತಿಯನ್ನು ಜನರಿಗೆ ಮನಮುಟ್ಟುವಂತೆ ತಿಳಿಯಪಡಿಸಬೇಕು, ಇಂತಹ ಸಂದರ್ಭಗಳಲ್ಲಿ ಪೂರ್ವಾಗ್ರಹ ಇಲ್ಲದ, ಸಕಾರಾತ್ಮಕ ಯೋಚನೆಗಳು ಇರಬೇಕು ಎಂದು  ಗಣೇಶ ಪ್ರಸಾದ ಪಾಂಡೇಲು ಹೇಳಿದರು.

ಯಾವುದೇ ಸುದ್ದಿಯನ್ನು ಮಾಧ್ಯಮದಲ್ಲಿ ಪ್ರಸ್ತುತಪಡಿಸುವ ಮೊದಲು, ಆ ಕುರಿತಾದ ಸಮಗ್ರ ಮಾಹಿತಿಯನ್ನು ಕಲೆಹಾಕಬೇಕು. ಬಾಯಿ ಮಾತಿನಿಂದ ಬಂದ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ, ಪ್ರಸಾರ ಮಾಡಿದರೆ ಅದು ಹಲವಾರು ಅನಾಹುತಗಳಿಗೆ ದಾರಿಮಾಡಿಕೊಡುತ್ತದೆ. ವಸ್ತುನಿಷ್ಠ ಹಾಗೂ ನಿಖರವಾಗಿ ಸುದ್ದಿಯನ್ನು ಬಿತ್ತರಿಸುವುದು ಪತ್ರಕರ್ತನ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.ಅನುವಾದ ಮಾಡುವುದೂ ಒಂದು ಕಲೆ. ಪದದಿಂದ ಪದಕ್ಕೆ ಅನುವಾದ ಮಾಡಿದಲ್ಲಿ ಅದರ ಅರ್ಥವೇ ಬೇರೆಯಾಗಿ ಎಡವಟ್ಟುಗಳು ನಡೆಯುವ ಸಾಧ್ಯತೆಯಿದೆ. ಆದ್ದರಿಂದ ವಿಷಯವನ್ನು ಅರ್ಥ ಮಾಡಿಕೊಂಡು ಭಾಷಾಂತರ ಮಾಡಿದಾಗ ಹೆಚ್ಚು ಪರಿಣಾಮಕಾರಿಯಾಗಿ ವಿಷಯ ಮಂಡಣೆ ಮಾಡಬಹುದು ಎಂದರು.

Advertisement

ರೂರಲ್ ಮಿರರ್ ಡಿಜಿಟಲ್ ಮಿಡಿಯಾದ ಸಂಸ್ಥಾಪಕ ಮಹೇಶ್ ಪುಚ್ಚಪಾಡಿ ಮಾತನಾಡಿ, ಸಮಾಜದಲ್ಲಿ ಕಂಡುಬರುವ ಋಣಾತ್ಮಕ ವಿಚಾರಗಳನ್ನು ಬದಿಗಿರಿಸಿ, ಧನಾತ್ಮಕ ಅಂಶಗಳನ್ನು ಪ್ರಸಾರ ಮಾಡುವ ಆಶಯ ಹೊಂದಿದ ರೂರಲ್ ಮಿರರ್ ಮಿಡಿಯಾದ ಯೋಜನೆಯು ಹೊಸ ಸಂಚಲನವನ್ನು ಮೂಡಿಸುತ್ತಿದೆ. ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಸದುಪಯೋಗಪಡಿಸಬೇಕು. ವಿದ್ಯಾರ್ಥಿ ಜೀವನದಿಂದಲೇ ಹೊಸತನವನ್ನು, ಸಕಾರಾತ್ಮಕತೆಯನ್ನು ಅಳವಡಿಸುವುದನ್ನು ಅರಿಯಬೇಕು ಎಂದರು.

ವಿದ್ಯಾರ್ಥಿನಿ ಶಿಲ್ಪ ಪ್ರಾರ್ಥಿಸಿ, ವಿದ್ಯಾರ್ಥಿನಿ ಅಕ್ಷಿತಾ ವಂದಿಸಿದರು. ಕಾಲೇಜಿನ ಪ್ರಾಚಾರ್ಯ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು | ನೂರಾರು ಎಕರೆ ಅರಣ್ಯ ನಾಶ | ಬೆಂಕಿ ನಂದಿಸಲು ಅರಣ್ಯ ಇಲಾಖೆ ಪ್ರಯತ್ನ |

ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ  ಕಾಡ್ಗಿಚ್ಚು ಪ್ರಕರಣ ಇದಾಗಿದೆ.…

6 hours ago

ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಡಿಎಂಕೆ ಕೌನ್ಸಿಲರ್ ವಶಕ್ಕೆ ಪಡೆದ ಡಿಆರ್‌ಐ

ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…

6 hours ago

ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |

ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…

20 hours ago

ಭಾರತಕ್ಕೆ ಹುರಿದ ಅಡಿಕೆ ಆಮದು | ತಕ್ಷಣವೇ ಕ್ರಮ ಕೈಗೊಳ್ಳಲು ಕ್ಯಾಂಪ್ಕೊ ಒತ್ತಾಯ|

ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…

1 day ago

ಪ್ಲಾಸ್ಟಿಕ್‌ನಿಂದ ಪೇಪರ್‌ ಕಡೆಗೆ ಬದಲಾಯಿಸುವುದು ಪರಿಸರಕ್ಕೆ ಉತ್ತಮವೇ..?

ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…

1 day ago

ಚಿತ್ರದುರ್ಗ | ತುಂಬಿದ ವಾಣಿ ವಿಲಾಸ ಜಲಾಶಯ | 30 ಸಾವಿರ ಎಕರೆಗೆ ನೀರಿನ ಸೌಲಭ್ಯ

115 ವರ್ಷಗಳ ಇತಿಹಾಸ ಇರುವ  ಹಾಗೂ ರಾಜ್ಯದಲ್ಲಿ  ನಿರ್ಮಾಣವಾದ  ಮೊದಲ ಜಲಾಶಯ ವಾಣಿವಿಲಾಸ…

1 day ago