ಸಮಾಜದಲ್ಲಿ ಜನಸಾಮಾನ್ಯ ಜನರು ಯೋಚಿಸುವ ರೀತಿಗೂ, ಪತ್ರಕರ್ತ ಯೋಚಿಸುವ ರೀತಿಗೂ ವ್ಯತ್ಯಾಸ ಇರುತ್ತದೆ. ಪತ್ರಕರ್ತ ಸಮಾಜದಲ್ಲಿನ ಒಳ್ಳೆಯ ಅಂಶಗಳ ಕಡೆಗೆ ಗಮನಹರಿಸಬೇಕಾಗಿದೆ, ಸಮಾಜಮುಖಿ ಸ್ಪಂದನೆಯ ಕಡೆಗೆ ಯೋಚಿಸಬೇಕು ಎಂದು ಹಿಂದುಸ್ತಾನ್ ಟೈಮ್ಸ್‌ನ ಸುದ್ದಿ ಸಂಪಾದಕ ಉಮೇಶ್ ಕುಮಾರ್ ಶಿಮ್ಲಡ್ಕ ಹೇಳಿದರು.
ರೂರಲ್ ಮಿರರ್ ಡಿಜಿಟಲ್ ಮೀಡಿಯಾ ಹಾಗೂ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ನಡೆಯುವ ಸಕಾರಾತ್ಮಕ ಪತ್ರಿಕೋದ್ಯಮದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗ ಪತ್ರಿಕಾ ಕಚೇರಿಗಳಲ್ಲಿಯೂ ಪತ್ರಕರ್ತನ ಯೋಚನೆಗಳಿಗೆ , ಸ್ಕಿಲ್ ಗಳಿಗೇ ಮಾನ್ಯತೆ ಇದೆ. ಮಾಧ್ಯಮ ಕ್ಷೇತ್ರ ಹತ್ತಾರು ವಿಭಾಗಗಳಲ್ಲಿ ಬೆಳೆದಿದೆ.ಪತ್ರಿಕಾ ಕಚೇರಿಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಮಾತ್ರವೇ ಇಂದು ಉದ್ಯೋಗ ಎಂಬ ಭಾವನೆ ಬೇಕಾಗಿಲ್ಲ. ಡಿಜಿಟಲ್ ಮಾಧ್ಯಮ, ಪೊಡಾಕಾಸ್ಟ್ , ರೀಸರ್ಚ್ ಜರ್ನಲಿಸಂ, ಡಾಟಾ ಜರ್ನಲಿಸ್ಟ ಹೀಗೇ ಹತ್ತಾರು ವಿಭಾಗದಲ್ಲಿ ಬೆಳೆದಿದೆ. ವಿದ್ಯಾರ್ಥಿಗಳು ತನ್ನ ಸ್ಕಿಲ್ ಬೆಳೆಸಿಕೊಂಡು ತಾನೇ ಒಂದು ಬ್ರಾಂಡ್ ಆಗಿದ್ದಾಗ ಅವಕಾಶಗಳು ಲಭಿಸುತ್ತದೆ ಎಂದರು. ಸಕಾರಾತ್ಮಕವಾದ ಭಾವನೆ ಇದ್ದರೆ ಮಾತ್ರವೇ ವಿದ್ಯಾರ್ಥಿಗಳು ತನ್ನನ್ನು ಬ್ರಾಂಡ್ ಮಾಡಿಕೊಳ್ಳಲು, ಕೇಳಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತದೆ ಎಂದು ಉಮೇಶ್ ಹೇಳಿದರು.
ರೂರಲ್ ಮಿರರ್ ಡಿಜಿಟಲ್ ಮೀಡಿಯಾ ಸ್ಥಾಪಕ ಮಹೇಶ್ ಪುಚ್ಚಪ್ಪಾಡಿ, ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು.
ಸಣ್ಣ ಹಿಡುವಳಿದಾರರಿಗೆ ಈಗ ಕಾಳುಮೆಣಸು ಕೃಷಿಯ ಬಗ್ಗೆ ಸಾಕಷ್ಟು ಗೊಂದಲ. ಇಂತಹ ಸಮಯದಲ್ಲಿ…
ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ತಿರುಗುವಿಕೆಯು ಅಷ್ಟೇನು ಪರಿಣಾಮ ಬೀರುವ ಸಾಧ್ಯತೆಗಳು…
ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಸೈ ಗ್ರಾಮದಲ್ಲಿ ಭಾರೀ ಮಳೆಯಿಂದ…
ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…
ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್‌ಡಿಎಂ ಶಾಲೆ, ಮಂಗಳೂರು…
ಮುಂದಿನ 2 ರಿಂದ 3 ದಿನಗಳಲ್ಲಿ ದೇಶದ ಪೂರ್ವ, ಪಶ್ಚಿಮ, ಮಧ್ಯ ಮತ್ತು…