Advertisement
MIRROR FOCUS

ದಾರಿದೀಪಗಳಾಗುವ ಬದಲು ದೀಪಧಾರಿಗಳಾಗಿ ಮುನ್ನಡೆಯಬೇಕು- ವೇಣುಗೋಪಾಲ ಶೇರ | ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಸಕಾರಾತ್ಮಕ ಪತ್ರಿಕೋದ್ಯಮ’ ತರಬೇತಿ ತರಗತಿಗಳಿಗೆ ಚಾಲನೆ |

Share

ನಕಾರಾತ್ಮಕ ವಿಚಾರಗಳು ನಮ್ಮನ್ನು ಅತೀವವಾಗಿ ಆಕರ್ಷಿಸುತ್ತಿವೆ. ಪರಿಣಾಮವಾಗಿ ನಮ್ಮಲ್ಲಿನ ಮೌಲ್ಯಗಳು ಕುಸಿಯಲಾರಂಭಿಸಿವೆ. ಮಾಧ್ಯಮಗಳಲ್ಲಿನ ವೈಭವೀಕರಿಸಿದ ಅಪರಾಧ ಸುದ್ದಿಗಳು ನಮ್ಮೊಳಗಿನ ಮನುಷ್ಯಗುಣದ ಮೇಲೆ ಕೆಟ್ಟ ರೀತಿಯಲ್ಲಿ ಪ್ರಭಾವ ಬೀರುತ್ತಿವೆ. ಹಾಗಾಗಿ ಮೌಲ್ಯಗಳನ್ನಾಧರಿಸಿದ ವ್ಯಕ್ತಿತ್ವಗಳನ್ನು ರೂಪುಗೊಳಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ದಿಕ್ಕುತಪ್ಪುತ್ತಿರುವ ಸಮಾಜಕ್ಕೆ ದಾರಿದೀಪಗಳಾಗುವ ಬದಲು ದೀಪಧಾರಿಗಳಾಗಿ ಕತ್ತಲಿರುವಲ್ಲೆಲ್ಲಾ ಬೆಳಕು ಚೆಲ್ಲುವ ಕೆಲಸಗಳಾಗಬೇಕು ಎಂದು ಸುಳ್ಯದ ಮುರುಳ್ಯದ ಕೃಷಿಕ ವೇಣುಗೋಪಾಲ ಶೇರ ಹೇಳಿದರು.

Advertisement
Advertisement
Advertisement

ಅವರು ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ರೂರಲ್ ಮಿರರ್ ಡಿಜಿಟಲ್ ಮೀಡಿಯಾದ ಸಹಯೋಗದಲ್ಲಿ ಆರಂಭಿಸಲಾದ ಸಕಾರಾತ್ಮಕ ಪತ್ರಿಕೋದ್ಯಮ ಎಂಬ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

Advertisement

ಇಂದಿನ ಪೀಳಿಗೆಗೆ ಯಾರನ್ನು ಅನುಕರಣೆ ಮಾಡಬೇಕೆಂಬ ಕಲ್ಪನೆಗಳಿಲ್ಲ. ಆದರ್ಶಗಳನ್ನು ಬಿತ್ತುವ ವ್ಯವಸ್ಥೆಗಳು ಒಂದು ಹಂತದಲ್ಲಿ ತುಂಬಾ ಕಡಿಮೆಯಾದದ್ದರ ಪರಿಣಾಮವನ್ನು ಇಂದಿನ ಪೀಳಿಗೆ ಅನುಭವಿಸುತ್ತಿದೆ. ಪರಿಸ್ಥಿತಿಯೊಂದಿಗಿನ ರಾಜಿ ಇಂದು ಎಲ್ಲೆಡೆಯೂ ಕಂಡುಬರುತ್ತಿದೆ. ಆದರೆ ಅದರಿಂದಾಗಿ ನಾವು ನೈತಿಕವಾದ ಅಧಃಪತನವನ್ನು ಕಾಣಲಾರಂಭಿಸಿದ್ದೇವೆ ಎಂಬುದು ಗಮನಾರ್ಹ. ಪ್ರವಾಹದೊಂದಿಗೆ ಕ್ರಮಿಸುವುದು ಸಾಧನೆಯೇನೂ ಅಲ್ಲ. ಆದರೆ ಪ್ರವಾಹಕ್ಕೆ ವಿರುದ್ಧವಾಗಿ ನಮಗೆ ಸರಿ ಅನ್ನಿಸಿದ ಹಾದಿಯಲ್ಲೇ ಹೋಗುವುದು ಕ್ಲಿಷ್ಟಕರವಾದರೂ ಆತ್ಮತೃಪ್ತಿ ಉಳ್ಳಂತಹದ್ದು ಎಂದು ಅಭಿಪ್ರಾಯಪಟ್ಟರು.
ಪತ್ರಿಕೋದ್ಯಮದಲ್ಲಿ ಇಂದು ಆಯ್ಕೆಗಳು ಹಲವಾರಿವೆ. ಆದರೆ ಕೃಷಿ ಗ್ರಾಮೀಣ ಸಂಗತಿಗಳನ್ನು ಪಸರಿಸುವ ಪ್ರಯತ್ನಗಳು ಅಗತ್ಯವಾಗಿ ಬೇಕಿವೆ. ಪ್ರಸಿದ್ಧಿ ಹೊಂದಿದವರಿಗೆ ಸಾಕಷ್ಟು ಪ್ರಚಾರ ದೊರಕುವುದು ಸಹಜ. ಎಕರೆಗಟ್ಟಳೆ ತೋಟ ಇರುವವರು ಆಗಾಗ ಕಾಣಿಸಿಕೊಳ್ಳುತ್ತಾರೆ. ಆದರೆ ಸೆಂಟ್ಸ್ ಲೆಕ್ಕದ ಭೂಮಿಯಲ್ಲೂ ಸಾಧನೆ ಮಾಡಿದವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಪತ್ರಿಕೋದ್ಯಮದಿಂದ ಆಗಬೇಕಿದೆ. ಹುಡುಕಿಕೊಂಡು ಹೋಗಿ ವಿಷಯವನ್ನು ಗುರುತಿಸುವ ಪ್ರಯತ್ನಗಳಾಗಬೇಕು. ಭಾರತವನ್ನು ನೈಜವಾಗಿ ಕಟ್ಟುವ ಕಾರ್ಯಗಳಲ್ಲಿ ಇದೂ ಒಂದು ಎಂದು ನುಡಿದರು.

Advertisement

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೂರಲ್ ಮಿರರ್ ಡಿಜಿಟಲ್ ಮೀಡಿಯಾದ ಮುಖ್ಯಸ್ಥ ಮಹೇಶ ಪುಚ್ಚಪ್ಪಾಡಿ ಮಾತನಾಡಿ ವಾಹಿನಿಗಳನ್ನು ಪತ್ರಿಕೆಗಳನ್ನು ನೋಡುವಾಗ ಇದು ಹೀಗೆಯೇ ಮುಂದುವರಿದರೆ ನಾಳಿನ ಸಮಾಜದ ಪರಿಸ್ಥಿತಿಯೇನು ಎಂಬ ಚಿಂತೆ ಕಾಡಲಾರಂಭಿಸುತ್ತದೆ. ಹಾಗಾಗಿ ನಮ್ಮಿಂದಾಗುವ ಬದಲಾವಣೆಯ ಪ್ರಯತ್ನಗಳನ್ನು ಸಣ್ಣಮಟ್ಟದಲ್ಲಾದರೂ ಮಾಡಬೇಕಾದ ಅಗತ್ಯಗಳಿವೆ. ಆದ್ದರಿಂದ ಸಕಾರಾತ್ಮಕ ಪತ್ರಿಕೋದ್ಯಮ ಎಂದರೇನು ಹಾಗೂ ಈ ದಿನಗಳಲ್ಲಿ ಮಾಧ್ಯಮಗಳ ಮುಖಾಂತರ ಅದನ್ನು ಹೇಗೆ ಜಾರಿಗೊಳಿಸಬೇಕು ಎಂಬ ಯೋಚನೆಯ ನೆಲೆಯಲ್ಲಿ ತರಬೇತಿ ತರಗತಿಗಳ ಅವಶ್ಯಕತೆ ಇದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸಮಾಜ ಹಾದಿ ತಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ದೇಶದ ಮೇಲೆ ದಾಳಿ ಮಾಡಿದವರನ್ನು, ಲೂಟಿಕೋರರನ್ನು ವೈಭವೀಕರಿಸುವ, ಅನುಸರಿಸುವ ಪ್ರಯತ್ನಗಳಾಗುತ್ತಿವೆ. ಇದನ್ನು ಖಂಡಿಸುವ, ಸತ್ಯ ವಿಷಯಗಳನ್ನು ಸಮಾಜಕ್ಕೆ ನೀಡುವ ಎದೆಗಾರಿಕೆಯುಳ್ಳ ಪತ್ರಕರ್ತರ ಅವಶ್ಯಕತೆ ಇದೆ ಎಂದು ಹೇಳಿದರು.

ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೃಪ್ತಿ ಎಂ ಮಯ್ಯಾಳ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಅಕ್ಷಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಸೌಜನ್ಯಾ ವಂದಿಸಿ, ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರ್ವಹಿಸಿದರು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

4 hours ago

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

10 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

10 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

1 day ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

1 day ago