ಬಾಯಾರಿನಲ್ಲಿ ಜನೌಷಧ ಕೇಂದ್ರ ಉದ್ಘಾಟನೆ | ದೇಶದ ಅಭಿವೃದ್ಧಿಗೆ ಜನಸಾಮಾನ್ಯರ ಅಭಿವೃದ್ಧಿಯೂ ಅವಶ್ಯ – ಡಾ.ಪ್ರಭಾಕರ ಭಟ್‌ ಕಲ್ಲಡ್ಕ |

September 12, 2021
2:51 PM

ದೇಶದ ಅಭಿವೃದ್ಧಿಗೆ ಜನಸಾಮಾನ್ಯರು ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಹೊಂದುವುದು  ಅಗತ್ಯ. ಇದಕ್ಕಾಗಿ ಆರೋಗ್ಯ ಸಂಬಂಧಿಯಾಗಿ ಕಡಿಮೆ ದರದಲ್ಲಿ  ಉತ್ತಮ ಔಷಧಿ ದೊರೆಯುವ ವ್ಯವಸ್ಥೆ ಈ ದೇಶದಲ್ಲಿ ಆಗುತ್ತಿರುವುದು  ಬದಲಾವಣೆಯ ಸಂಕೇತವಾಗಿದ್ದು  ಪ್ರತೀ ವ್ಯಕ್ತಿಯ ಆರೋಗ್ಯ ಸುಧಾರಣೆಯಾಗಲಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ  ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಪೈವಳಿಕೆ ಪಂಚಾಯತ್‌ ನ ಬಾಯಾರಿನ  ಬಾಯಾರುಪದವಿನಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತೀ ವ್ಯಕ್ತಿಯು ಆರ್ಥಿಕ ಮಟ್ಟ ಎತ್ತರಿಸುತ್ತಾ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದರು.

ಅತಿಥಿಗಳಾಗಿದ್ದ ಡಾ| ಮುರಳೀಧರ್ ಶೆಟ್ಟಿ  ಮಾತನಾಡಿ “ಈಗಿನ ಕಾಲದಲ್ಲಿ ಬದಲಾಗುತ್ತಿರುವ ಜನರ ಜೀವನ ಶೈಲಿಯಲ್ಲಿ ಔಷಧಗಳ ಅವಶ್ಯಕತೆ ಹೆಚ್ಚಾಗಿದ್ದು , ಜನೌಷಧಿಯು ಜನಸಾಮಾನ್ಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು. ಜನೌಷಧಿಯಲ್ಲಿ ಬ್ರಾಂಡ್ ಬೇರೆಯಾಗಿದ್ದರೂ ಬೇರೆ ಕಂಪನಿಯಲ್ಲಿರುವ ಅದೇ ಅಂಶಗಳನ್ನು ಒಳಗೊಂಡಿರುತ್ತದೆ – ಪರಿಣಾಮಕಾರಿಯಾಗಿದೆ” ಎಂದು ಹೇಳಿದರು. ವಿಡಿಯೋ ವರದಿ ಇಲ್ಲಿದೆ.….

ಕಲ್ಲಡ್ಕ ಶೀರಾಮ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಕ್ರಷ್ಣಪ್ರಸಾದ ಕೆ ಎನ್ ಮತ್ತು ಪೈವಳಿಕೆ ಪಂಚಾಯತ್  ಹೆಲ್ತ್ ಮತ್ತು ಎಡ್ಯುಕೇಶನ್ ಸ್ಟ್ಯಾಂಡಿಂಗ್ ಕಮಿಟಿ  ಚೇರ್ಮೇನ್  ಜೆಡ್ ಎ ಕಯ್ಯಾರ್ ಶುಭ ಹಾರೈಸಿದರು.

ಜನೌಷಧಿ ಕೇಂದ್ರದ ಮುಖ್ಯಸ್ಥ  ವೆಂಕಟರವಿ ಕಳಂದೂರು ಸ್ವಾಗತಿಸಿ ರೂಪಲಕ್ಷ್ಮೀ ಕಳಂದೂರು ವಂದಿಸಿದರು. ಶಂಕರ ಭಟ್ ಉಳುವಾನ ಕಾರ್ಯಕ್ರಮ ನಿರ್ವಹಿಸಿದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror