ನ್ಯೂ ಡೆಲ್ಲಿ ಟೆಲಿವಿಷನ್‌ನ (ಎನ್‌ಡಿಟಿವಿಯ) ಪೋಷಕ ಸಂಸ್ಥೆ ಆರ್‌ಆರ್‌ಪಿಆರ್ ಹೋಲ್ಡಿಂಗ್ ಲಿಮಿಟೆಡ್‌ನ ನಿರ್ದೇಶಕ ಸ್ಥಾನಕ್ಕೆ ಸಂಸ್ಥಾಪಕರಾದ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ರಾಧಿಕಾ ರಾಯ್ ರಾಜೀನಾಮೆ ನೀಡಿದ್ದಾರೆ.
ಅಲ್ಲಿಗೆ ಏಷ್ಯಾದ ನಂಬರ್ 1 ಶ್ರೀಮಂತ ಗೌತಮ್ ಅದಾನಿ ಅವರ ‘ಮಿಷನ್ ಎನ್‌ಡಿಟಿವಿ’ ಬಹುತೇಕ ಯಶಸ್ವಿಯಾಗಿದೆ.
ನವೆಂಬರ್ 29ರಿಂದಲೇ ಇವರ ರಾಜೀನಾಮೆ ಅನ್ವಯವಾಗಲಿದೆ ಎಂದು ಸೆಬಿಗೆ ಸಲ್ಲಿಸಲಾದ ದಾಖಲೆಯಲ್ಲಿ ಹೇಳಲಾಗಿದೆ.
ಸೆಬಿಗೆ ಸಲ್ಲಿಸಲಾಗಿರುವ ದಾಖಲೆಯ ಪ್ರತಿ ಕೆಲ ದಿನಗಳ ಹಿಂದಷ್ಟೇ ಆರ್‌ಆರ್‌ಪಿಆರ್ ಅನ್ನು ಅದಾನಿ ಖರೀದಿ ಮಾಡಿದ್ದರು. ಈ ಸಂಸ್ಥೆಯು ಎನ್‌ಡಿಟಿವಿಯಲ್ಲಿ ಶೇ 29.18 ರಷ್ಟು ಪಾಲು ಹೊಂದಿದೆ.
ಪ್ರಣಯ್ ರಾಯ್ ಅವರು ಎನ್‌ಡಿಟಿವಿಯ ಮುಖ್ಯಸ್ಥರಾಗಿದ್ದು, ರಾಧಿಕಾ ರಾಯ್ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಈ ಇಬ್ಬರೂ ಎನ್‌ಡಿಟಿವಿಯ ಈ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ.
ವೈಯಕ್ತಿಕವಾಗಿ ರಾಯ್ ದಂಪತಿಗಳು ಎನ್‌ಡಿಟಿವಿಯಲ್ಲಿ ಶೇ 32.26 ರಷ್ಟು ಪಾಲು ಹೊಂದಿದ್ದಾರೆ. ಇವರಿಬ್ಬರ ರಾಜೀನಾಮೆ ಬೆನ್ನಲ್ಲೇ, ಸುದೀಪ್ತಾ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ ಹಾಗೂ ಸೆಂಥಿಲ್ ಸಿನ್ನಯ್ಯ ಚೆಂಗಲ್‌ವರಯನ್ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…