ಹಲವಾರು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಕರ್ನಾಟಕದಾದ್ಯಂತ ರೈತರು ಸಂಕಷ್ಟ ಅನುಭವಿಸಿದ್ದಾರೆ. ಇನ್ನೊಂದು ಕಡೆ ಆಹಾರ ಸಂಸ್ಕರಣಾ ಗುಡಿ ಕೈಗಾರಿಕೆಗಳೂ ಹೊಡೆತವನ್ನು ಅನುಭವಿಸಿವೆ.
ಮಳೆಯು ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ದೊಡ್ಡ ಹೊಡೆತ ಈಗ ನೀಡಿಲ್ಲವಾದರೂ ರಬ್ಬರ್ ಬೆಳೆಗಾರರಿಗೆ ಸಂಕಷ್ಟವಾಗಿದೆ. ಮಳೆಗಾಲ ಪೂರ್ವದಲ್ಲಿ ರಬ್ಬರ್ ಮರಗಳಿಗೆ ಪ್ಲಾಸ್ಟಿಕ್ ಹೊದಿಕೆ ಅಳವಡಿಕೆ ಕಷ್ಟವಾಗಿದೆ. ಮಳೆಗಾಲದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಲು ಪ್ಲಾಸ್ಟಿಕ್ ಹೊದಿಕೆ ಅನಿವಾರ್ಯವಾಗಿದೆ. ಆದರೆ ಮಳೆಯ ಕಾರಣದಿಂದ ನಿಗದಿತ ಸಮಯಕ್ಕೆ ಪ್ಲಾಸ್ಟಿಕ್ ಹೊದಿಕೆ ಅಳವಡಿಕೆ ಕಷ್ಟವಾಗಿದೆ. ಕಳೆದ ವರ್ಷ ಅಕಾಲಿಕ ಮಳೆ ಅಡಿಕೆ ಒಣಗಿಸಲು ಕಷ್ಟವಾಗಿತ್ತು.
ದಾವಣಗೆರೆಯಂತಹ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭತ್ತ ಮತ್ತು ರಾಗಿ ಕಟಾವು ಚಟುವಟಿಕೆಗಳಿಗೆ ಅಡ್ಡಿಯುಂಟಾಗಿದೆ. ಮಾತ್ರವಲ್ಲದೆ ತೇವಾಂಶದ ಜೊತೆಗೆ ಅವುಗಳ ಗುಣಮಟ್ಟದ ಮೇಲೂ ಪರಿಣಾಮ ಬೀರಿದೆ. ಇನ್ನೂ ಕೆಲ ದಿನ ಮಳೆ ಮುಂದುವರಿದರೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ದಕ್ಷಿಣ ಕನ್ನಡದ ರೈತರು ಬೇಯಿಸಿದ ಅಕ್ಕಿ ಉತ್ಪಾದನೆಗೆ ಸಹ ಹೊಡೆತ ಬಿದ್ದಿದೆ. ಹಲವು ಕಡೆಗಳಲ್ಲಿ ಈ ವರ್ಷ ಮಾರ್ಚ್‌ನಲ್ಲಿ ಕಟಾವು ಮಾಡಿದ ಬೆಳೆ ಇನ್ನೂ ಹಲವೆಡೆ ಬೇಯಿಸಿ ಒಣಗಿಸಿಲ್ಲ. ಹೀಗಾಗಿ ಇಲ್ಲಿನ ಕುಚುಲಕ್ಕಿ ಇನ್ನೂ ತಯಾರಿ ಹಂತದಲ್ಲಿಯೇ ಇದೆ.
ದ್ವಿದಳ ಧಾನ್ಯಗಳು ಮತ್ತು ತರಕಾರಿಗಳಂತಹ ಅಲ್ಪಾವಧಿಯ ಬೆಳೆಗಳು ಕೂಡಾ ಸಂಕಷ್ಟದಲ್ಲಿದೆ. ತರಕಾರಿ ಕಟಾವು ಮಾಡಿದರೆ ಮಾರುಕಟ್ಟೆ ಸಾಗಿಸಲು ಕಷ್ಟವಾಗುತ್ತದೆ. ಮಳೆ ಬಿದ್ದೊಡನೆ ಕೊಳೆಯಲು ಆರಂಭವಾಗುತ್ತದೆ. ಕಟಾವು ಮಾಡಿದರೂ ಸಂಕಷ್ಟ, ಕಟಾವು ಮಾಡದೇ ಇದ್ದರೂ ಸಂಕಷ್ಟ.ಈ ವರ್ಷ ಅತಿವೃಷ್ಟಿಯಿಂದ ಶೇ.50 ರಷ್ಟು ತರಕಾರಿ ನಾಶವಾಗಿದೆ. ಈಗಾಗಲೇ ಟೊಮೊಟೋ ದರ ಏರಿಕೆಯ ಹಾದಿಯಲ್ಲಿದೆ, ಇದೀಗ ಮಳೆಯ ಕಾರಣದಿಂದ ತರಕಾರಿ ಸರಬರಾಜೂ ಆಗದೆ ಇನ್ನಷ್ಟು ಧಾರಣೆ ಏರಿಕೆ ಸಾಧ್ಯತೆ ಇದೆ.
ಚಿತ್ರದುರ್ಗ ಸೇರಿದಂತೆ ಮಾವು ಬೆಳೆಯುವ ಪ್ರದೇಶದಲ್ಲಿ ಭಾರಿ ಗಾಳಿ, ಆಲಿಕಲ್ಲು ಮಳೆಯಿಂದಾಗಿ ಮಾವಿನ ಹೂವುಗಳು, ಬೇಗನೆ ಕಟಾವು ಆಗಬೇಕಿದ್ದ ಮಾವಿನ ಹೂವುಗಳು ಸಹ ಬಾಡದ ಹಣ್ಣನ್ನು ಕಳೆದುಕೊಂಡಿದೆ. .ಹಾಗಾಗಿ ಈ ಬಾರಿ ಹೂವು ಕಡಿಮೆಯಾಗಿದೆ. ಮಳೆಯಿಂದ ಮಾವಿಗೆ ಹೆಚ್ಚಿನ ಹಾನಿಯಾಗಿದೆ.
ಈಗಿನ ಮಳೆಗೆ ಕಂದಾಯ ಇಲಾಖೆಯು 7,010 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಷ್ಟದ ಪ್ರಮಾಣವನ್ನು ಅಂದಾಜಿಸಿದೆ ಮತ್ತು 5,736 ಹೆಕ್ಟೇರ್‌ಗಳಲ್ಲಿನ ತೋಟಗಾರಿಕೆ ಬೆಳೆಗಳು ಸಹ ನಾಶವಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.