Advertisement
The Rural Mirror ಕಾಳಜಿ

#RuralMirror | ಶಾಲಾ ಮಕ್ಕಳಿಗೆ ಸಮಸ್ಯೆ | ಕೊಲ್ಲಮೊಗ್ರದ ಕಡಂಬಳದಲ್ಲಿ ಸಂಪರ್ಕ ರಸ್ತೆ ತಕ್ಷಣ ಬೇಕಿದೆ |

Share

ಗ್ರಾಮೀಣ ಭಾಗದಲ್ಲಿ ನಿತ್ಯವೂ ಒಂದಲ್ಲ ಒಂದು ಸಮಸ್ಯೆ. ರಸ್ತೆ, ಸೇತುವೆ, ವಿದ್ಯುತ್‌, ನೆಟ್ವರ್ಕ್..‌ ಈ ವಿಷಯಗಳು ಗ್ರಾಮೀಣ ಭಾಗದಲ್ಲಿ ಯಾವಾಗಲೂ ಚರ್ಚೆಯ ವಿಷಯ. ಇದೀಗ ಸೇತುವೆ ರಚನೆಯ ಹಂತದಲ್ಲಿದೆ, ಆದರೆ ಸಂಪರ್ಕ ರಸ್ತೆ ಇಲ್ಲದೆ ಶಾಲಾ ಮಕ್ಕಳು ಪರದಾಟದ ಸ್ಥಿತಿಯಲ್ಲಿರುವ ಸಂಗತಿಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ ಕೊಲ್ಲಮೊಗ್ರದಿಂದ ವರದಿಯಾಗಿದೆ.

ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ  ಕೊಲ್ಲಮೊಗ್ರ ಸಂಪರ್ಕ ಹೊಂದಿರುವ ಪುಟ್ಟ ಹಳ್ಳಿ ಕಡಂಬಳ. ಸುಮಾರು 20-30 ಮನೆಗಳು ಇರುವ ಪ್ರದೇಶ ಇದು. ಇಲ್ಲಿ ಹರಿಯುವ ಹೊಳೆಯೊಂದು ಈ ಊರನ್ನು ಸಂಪರ್ಕ ಮಾಡಲು ಅಡ್ಡಿಯಾಗಿತ್ತು. ಸೇತುವೆ ನಿರ್ಮಾಣದ ಬೇಡಿಕೆ ಇತ್ತು. ಆ ಬೇಡಿಕೆ ಪೂರೈಕೆಯಾಗುತ್ತಿದೆ, ಸೇತುವೆ ನಿರ್ಮಾಣ ಹಂತದಲ್ಲಿದೆ. ಆದರೆ ಸದ್ಯ ಸಂಪರ್ಕ ರಸ್ತೆ ಇಲ್ಲದೆ ಶಾಲಾ ಮಕ್ಕಳು ಪರದಾಟ ನಡೆಸುವಂತಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಶಾಲಾ ಮಕ್ಕಳು ಈ ರಸ್ತೆಯಲ್ಲಿ ನಿತ್ಯವೂ ಬರುತ್ತಿರುವುದರಿಂದ ತಕ್ಷಣವೇ ಕಡಂಬಳ ಸಂಪರ್ಕ ಸೇತುವೆ ಕಾಮಗಾರಿಯಲ್ಲಿ ತಾತ್ಕಾಲಿಕ ಸಂಪರ್ಕ ವ್ಯವಸ್ಥೆ ಮಾಡಿಸಬೇಕಿದೆ.
–ಬಾಲಸುಬ್ರಹ್ಮಣ್ಯ ಎನ್‌ ಜಿ, ಗ್ರಾಮಸ್ಥ

ಕೊಲ್ಲಮೊಗ್ರ  ಕಡಂಬಳ ರಸ್ತೆಯಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಸದ್ಯ ಪಿಲ್ಲರ್‌ ಮಾತ್ರಾ ರಚನೆಯಾಗಿದೆ. ಈಗ ಮಳೆಯೂ ಆರಂಭವಾಗಿದೆ. ಕಳೆದ ಬಾರಿ ಹಾಗೂ ಅದಕ್ಕಿಂತ ಹಿಂದೆ ರಸ್ತೆ ಸಂಪರ್ಕ ಸರಿಯಾಗಿಲ್ಲದೆ ಹಾಗೂ ಹೊಳೆಯ ಕಾರಣದಿಂದ ಭಾರೀ ಮಳೆಯಾದರೆ 20 ಕುಟುಂಬ ಕೊಲ್ಲಮೊಗ್ರ ಪೇಟೆಯನ್ನು ಸಂಪರ್ಕ ಕಳೆದುಕೊಳ್ಳುತ್ತಿದ್ದರು. ತೀರಾ ಗ್ರಾಮೀಣ ಪ್ರದೇಶವಾದ್ದರಿಂದ ಪರದಾಟ ನಿತ್ಯವೂ ಇತ್ತು. ಇದೀಗ ಮಳೆಯ ಸಂದರ್ಭ ಹೊಸ ಸೇತುವೆ ನಿರ್ಮಾಣ ನಡೆಯುತ್ತಿದೆ. ಈ ಬಾರಿಯೂ ಇಲ್ಲಿನ ಜನರು ಹೊಳೆ ದಾಟಲು ಸಂಕಷ್ಟ ಪಡುವಂತಾಗಿದೆ. ಅದರಲ್ಲೂ ಶಾಲಾ ಮಕ್ಕಳಿಗೆ ನಡೆದಾಡಲು ಸಂಕಷ್ಟವಾಗಿದೆ.  ಸುಮಾರು 15 – ಮಕ್ಕಳ ಈ ದಾರಿಯಾಗಿ ಬರುತ್ತಾರೆ. ಪ್ರಾಥಮಿಕ ಶಾಲಾ ಮಕ್ಕಳೂ ಇದ್ದಾರೆ. ಹೀಗಾಗಿ ಪೋಷಕರಿಗೂ ಭಯದ ವಾತಾವರಣ ನಿರ್ಮಾಣವಾಗಿದೆ. ಮಳೆಯಾದಾಗ ಸೇತುವೆ ಇಲ್ಲದ, ಸಂಪರ್ಕ ಸರಿಯಾಗಿಲ್ಲದ ಈ ದಾರಿಯಲ್ಲಿ ಮಕ್ಕಳು ಬರುವುದು  ಆತಂಕವೂ ಆಗಿದೆ. ಹೀಗಾಗಿ  ಸಂಬಂಧಿತರು ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸಲು ಒತ್ತಾಯ ಕೇಳಿಬಂದಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್

ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…

16 hours ago

ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ

ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…

16 hours ago

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ

ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಅಭಿವೃದ್ಧಿಪಡಿಸಿ,…

1 day ago

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

1 day ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

1 day ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

1 day ago