#AshokKumarRai | ಲಂಚ ವಾಪಾಸ್‌ ಮಾಡಿಸಿದ ಪುತ್ತೂರು ಶಾಸಕರು | ಶಾಸಕರ ಜನಪರ ನಡೆಗೆ ಮೆಚ್ಚುಗೆ | ಭ್ರಷ್ಟಾಚಾರ ಮುಕ್ತ ಪುತ್ತೂರಿಗೆ ಹೆಜ್ಜೆ ? |

June 19, 2023
2:04 PM

ಸರ್ಕಾರ ಉಚಿತ ಕೊಡುಗೆಗಳ ಮೂಲಕ ರಾಜ್ಯದಲ್ಲಿ  ಗಮನ ಸೆಳೆದಿದೆ. ದಕ್ಷಿಣ ಕನ್ನಡದಲ್ಲಿ  ಈ ಉಚಿತಗಳ ಬಗ್ಗೆ ಒಲವು ಕಡಿಮೆ. ಇಲ್ಲಿ ಉಚಿತಗಳ ಹೊರತಾಗಿ ಜನಪರ ಆಡಳಿತವನ್ನು ಜನರು ಬಯಸುತ್ತಾರೆ. ಇದೀಗ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಭ್ರಷ್ಟಾಚಾರ ಮುಕ್ತ ಹೆಜ್ಜಯ ಕಡೆಗೆ ಗಮನಹರಿಸಿದ್ದಾರೆ. ಈಚೆಗೆ ಗ್ರಾಮಕರಣಿಕರೋರ್ವರು ಪಡೆದ ಲಂಚದ ಹಣವನ್ನು ವಾಪಾಸ್‌ ನೀಡಿಸುವ ಮೂಲಕ ಗಮನ ಸೆಳೆದಿದ್ದಾರೆ. 

ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಿಂದುತ್ವದ ಟ್ರೆಂಡ್‌ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಸರ್ಕಾರಿ ವಿರೋಧಿ ಅಭಿಪ್ರಾಯಗಳು ಹೆಚ್ಚಾಗಿದ್ದವು. ಅದರಲ್ಲೂ ಉಚಿತ ಕೊಡುಗೆಗಳ ಬಗ್ಗೆ ಬಹುತೇಕ ಋಣಾತ್ಮಕ ಪ್ರತಿಕ್ರಿಯೆಗಳು ಇದ್ದವು. ಈ ಎಲ್ಲದರ ನಡುವೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಜನಪರವಾದ ಅಭಿಪ್ರಾಯವನ್ನು ರೂಪಿಸುತ್ತಿದ್ದಾರೆ. ಆಯ್ಕೆಯಾದ ಬಳಿಕ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯನ್ನು ನೀಡಿದ್ದರು. ಈಗಾಗಲೇ ಒಂದೆರಡು ಪ್ರಕರಣದಲ್ಲಿ ಬಡವರಿಗೆ ನ್ಯಾಯ ದೊರಕಿಸಿದ್ದರು. ಇದೀಗ ಗ್ರಾಮಕರಣಿಕರೊಬ್ಬರು ಕಡತ ವಿಲೇವಾರಿಗೆ ಪಡೆದ ಲಂಚದ ಹಣದ ಸಹಿತ 5 ಸಾವಿರ ರೂಪಾಯಿ ಹೆಚ್ಚುವರಿ ಸೇರಿಸಿ ಮರಳಿಸುವಂತೆ ಸೂಚನ ನೀಡಿದ್ದಾರೆ. ಅದಕ್ಕೂ ಮೊದಲು ಶೇಂದಿ ಸರಬರಾಜು ಮಾಡುವ ವ್ಯಕ್ತಿಯಿಂದ ಇಲಾಖೆಯ ಅಧಿಕಾರಿಗಳು ಪಡೆದ ಲಂಚವನ್ನೂ ಹಿಂತಿರುಗಿಸುವಂತೆ ಮಾಡಿದ್ದರು. ಇದೀಗ ಶಾಸಕರ ಈ ನಡೆ ಮೆಚ್ಚುಗೆ ಪಡೆಯುತ್ತಿದ್ದು, ಅಧಿಕಾರಿಗಳು ಲಂಚ ಪಡೆದರೆ, ಕೇಳಿದರೆ ಶಾಸಕರಿಗೆ ಹೇಳಿದರೆ ಸರಿಯಾಗುತ್ತದೆ ಎನ್ನುವ ಭಾವನೆ ಬೆಳೆಯುತ್ತಿದೆ.

ಜಮೀನಿಗೆ ಸಂಬಂಧಪಟ್ಟ ಕಡತವನ್ನು ವಿಲೇವಾರಿ ಮಾಡುವ ವೇಳೆ ಗ್ರಾಮ ಕರಣಿಕರೊಬ್ಬರು ಲಂಚ ಪಡೆದಿದ್ದರು.  ನಾನು ಲಂಚ ಕೊಡುವುದಿಲ್ಲ ಶಾಸಕರಲ್ಲಿ ದೂರು ನೀಡುವುದಾಗಿ ವ್ಯಕ್ತಿ ಹೇಳಿದಾಗಲೂ ಗ್ರಾಮಕರಣಿಕರು ಲಂಚ ಪಡೆದಿದ್ದರು.ಲಂಚ ನೀಡಿದ ವ್ಯಕ್ತಿ ಶಾಸಕರಲ್ಲಿ ದೂರು ನೀಡಿದ್ದು 24 ಗಂಟೆಯೊಳಗೆ ಪಡೆದ ಮೊತ್ತಕ್ಕೆ 5 ಸಾವಿರ ಸೇರಿಸಿ ಮರಳಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.

ಅದೇ ರೀತಿ  ಶೇಂದಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ತಡೆದು ಆತನ ವಿರುದ್ದ ಪ್ರಕರಣ ದಾಖಲಿಸಿ, ವಾಹನ ಸೀಝ್ ಮಾಡಿದ್ದಲ್ಲದೆ ಆತನಿಂದ ಲಂಚವನ್ನು ಪಡೆದ ಅಧಿಕಾರಿಯಿಂದ ಲಂಚದ ಹಣವನ್ನು ಶಾಸಕರು ಮರಳಿ ಕೊಡಿಸಿದ್ದಾರೆ.  ಲಂಚ,ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಮತ್ತೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ
September 14, 2026
11:33 AM
by: ದ ರೂರಲ್ ಮಿರರ್.ಕಾಂ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ
September 14, 2026
11:07 AM
by: ದ ರೂರಲ್ ಮಿರರ್.ಕಾಂ
ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ
September 14, 2026
8:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror