ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಆಧುನಿಕ ತಂತ್ರಜ್ಞಾನದಿಂದಾಗಿ ಫಲಾನುಭವಿಗಳನ್ನು ಶೀಘ್ರವಾಗಿ ತಲುಪುವಲ್ಲಿ ಯಶಸ್ವಿಯಾಗಿದೆ. ಮನ್ರೇಗಾ ಯೋಜನೆ ಅಡಿ ಅನ್ ಲೈನ್‌ನಲ್ಲಿ ಮೊಬೈಲ್ ಹಾಗೂ ಕ್ಯೂ ಆರ್ ಕೋಡ್ ಸಹಾಯದಿಂದಾಗಿ ಫಲಾನುಭವಿಗಳು ಕಚೇರಿ ಸುತ್ತುವ ಮತ್ತು ಸಮಯ ಪೋಲಾಗುವ ಸಮಸ್ಯೆಗಳಿಗೆ ಮುಕ್ತಿ ದೊರಕಿದೆ.
ವೈಯಕ್ತಿಕ ವಿಭಾಗದಲ್ಲಿ ಇಂಗು ಗುಂಡಿ, ಗಿಡ ನೆಡುವಿಕೆ, ಬದು ನಿರ್ಮಾಣ ಇತ್ಯಾದಿ ಕಾಮಗಾರಿಗಳು ನಡೆದರೆ, ಸಮುದಾಯ ಕಾರ್ಯಕ್ರಮಗಳ ಅಡಿ ರಸ್ತೆ, ಚರಂಡಿ, ಕೆರೆ ಹೂಳೆತ್ತುವ ಕಾಮಗಾರಿಗಳು ನಡೆಯುತ್ತಿವೆ. ಅರ್ಹ ಫಲಾನುಭವಿಗಳು ಕೆಲಸದ ಬೇಡಿಕೆ, ಪೂರ್ಣವಾದ ಕಾಮಗಾರಿಗಳ ಮಾಹಿತಿಗಳನ್ನು ಈಗ ತಾವಿರುವ ಸ್ಥಳದಿಂದಲೇ ಸುಲಭವಾಗಿ ಕ್ಯೂ ಆರ್ ಕೋಡ್ ಮೂಲಕ ಸಲ್ಲಿಕೆ ಮಾಡಬಹುದಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕೆಂಬೋಡಿ ಪಂಚಾಯಿತಿಯ ರೈತ ಶಿವಕುಮಾರ್, ತೈವಾನ್ ಸೀಬೆ ಕೃಷಿ ಕೈಗೊಂಡಿದ್ದು, ಮೊಬೈಲ್ ಮತ್ತು ಕ್ಯು ಆರ್ ಕೋಡ್ನಿಂದಾಗಿ ಕೆಲಸ ಸುಲಭವಾಗಿದೆ ಎನ್ನುತ್ತಾರೆ.
ಗುಡಿಪಲ್ಲಿ ಪಂಚಾಯಿತಿಯ ರೈತ ಅಶೋಕ, ಈಗ ಕೆಲಸದ ಬೇಡಿಕೆ ಸಲ್ಲಿಸಲು ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಭಾಗಿಯಾಗಬೇಕಿಲ್ಲ. ಮೊಬೈಲ್ ಮತ್ತು ಕ್ಯೂ ಆರ್ ಕೋಡ್ ಸಹಾಯದಿಂದ ತಾವಿರುವ ಸ್ಥಳದಲ್ಲೇ ಮಾಹಿತಿ ತುಂಬಬಹುದಾಗಿದೆ ಎನ್ನುತ್ತಾರೆ.
ಪಂಚಾಯ್ತಿಗಳಲ್ಲಿ ಮನ್ರೇಗಾ ಅತ್ಯಂತ ಪ್ರಚಲಿತ ಯೋಜನೆಯಾಗಿದೆ. 1 ಸಾವಿರದ 900ಕ್ಕೂ ಹೆಚ್ಚು ಕಾರ್ಡ್ ನೀಡಲಾಗಿದೆ. ವೈಯಕ್ತಿಕ, ಸಮುದಾಯ ಎರಡೂ ವಿಭಾಗದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಗುಡಿಪಲ್ಲಿ ಪಂಚಾಯಿತಿ ಪಿಡಿಒ ರಾಮೇಗೌಡ ಮಾಹಿತಿ ನೀಡಿದರು.
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…
ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…
2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…
1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…
ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…